ನಾವು ಆರೋಗ್ಯವಾಗಿರಲು ದೇಹದ ಒಳಗಿನ ಮತ್ತು ಹೊರಗಿನ ಸ್ವಚ್ಛತೆ ತುಂಬಾ ಮುಖ್ಯ. ಅದರಲ್ಲಿ ಸ್ನಾನ ಕೂಡ ಮುಖ್ಯ ಪಾತ್ರ ನಿರ್ವಹಿಸುತ್ತದೆ.ನಮಗೆ ಎಲ್ಲವೂ ಬಿಸಿ ಬಿಸಿಯಾಗಿರಬೇಕು ಎಂಬ ಭಾವನೆ ಯಾವಾಗ್ಲೂ ಮನಸನ್ನ ಕಾಡುವುದು ಸಹಜ. ನಾವು ಕುಡಿಯುವ ಕಾಫಿ ಬಿಸಿಯಾಗಿರಬೇಕು, ತಿನ್ನುವ ಆಹಾರ ಬಿಸಿ ಆಗಿರಬೇಕು, ಸ್ನಾನ ಮಾಡಲು ಬಳಸುವ ನೀರು ಸಹ ಬೆಚ್ಚಗಿರಬೇಕು.ಆದರೆ ಅನುಭವಿಗಳು ಹೇಳುವ ಮಾತಿನ ಪ್ರಕಾರ ತಣ್ಣೀರು ಸ್ನಾನ ಮಾಡುವಾಗ ಕೇವಲ ಮೊದಲ ಕ್ಷಣಗಳು ಮಾತ್ರ ನಮ್ಮ ದೇಹಕ್ಕೆ ಕಷ್ಟ ಕರ ಎನ್ನಿಸುತ್ತದೆ, ನಂತರ ನಮ್ಮ ದೇಹ ತಣ್ಣನೆ ನೀರಿಗೆ ಹೊಂದಿಕೆ ಆಗಿ ಬಿಡುತ್ತದೆ, ಆನಂತರದಲ್ಲಿ ತಂಪಾದ ನೀರು ನಮ್ಮ ಮೈ ಮೇಲೆ ಬಿದ್ದರೂ ಏನೂ ಅನ್ನಿಸುವುದಿಲ್ಲ..
ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ತಣ್ಣೀರಿಗಿದೆ, ತಣ್ಣೀರು ಸ್ನಾನದಿಂದ ನಿಮ್ಮ ಬಿಳಿ ರಕ್ತ ಕಣಗಳು ಹೆಚ್ಚು ಕಾರ್ಯ ತತ್ವರಾಗಿ ವೈರಸ್ ವಿರುದ್ಧ ಹೋರಾಡುತ್ತದೆ..ನಾವು ಬೆಳಿಗ್ಗೆ ಎದ್ದ ಮೇಲೆ ತಣ್ಣೀರಿನ ಸ್ನಾನ ಮಾಡುವುದರಿಂದ ನಮ್ಮ ನರ ಮಂಡಲ ವ್ಯವಸ್ಥೆಯಿಂದ ನೊರೆಪಿನೆಫರಿನೇ ಅಂಶ ಬಿಡುಗಡೆಯಾಗುತ್ತದೆ, ಇದು ನಮ್ಮ್ ದೇಹದಲ್ಲಿ ಶಕ್ತಿಯನ್ನು ಉತ್ತೇಜಸಿ ಮೆದುಳನ್ನು ಚುರುಕುಗೊಳಿಸುತ್ತದೆ, ನಮ್ಮ ಮಾನಸಿಕ ಸ್ಥಿತಿ ಮಿತಿ ಈ ನಂತರದಲ್ಲಿ ಸಮತೋಲನಕ್ಕೆ ಬರುತ್ತದೆ.
ಕೇವಲ ನಿಮ್ಮ ಮನಸ್ಸು ಚುರುಕಾಗುವುದರ ಜೊತೆಗೆ ನಿಮ್ಮ ನರಮಂಡಲ ವ್ಯವಸ್ಥೆ ಇಡೀ ದೇಹದ ತುಂಬಾ ಹರಿದು ಬಿಡುವ ಸಂಕೇತಗಳನ್ನು ಹೆಚ್ಚಾಗಿಸುತ್ತದೆ.ಇದರಿಂದ ಸಂದರ್ಭಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡುವ ನಿಮ್ಮ ಚಾಕಚಾಖ್ಯತೆ ಬಲಗೊಲ್ಲುತ್ತದೆ. ಮೆಡಿಕಲ್ ಹೈಪೋತಿಸಿಸ್ ತನ್ನ ಅಧ್ಯಯನದಲ್ಲಿ ಪ್ರಕಟ ಪಡಿಸಿದ ವರದಿಯ ಅನ್ವಯ ನಮ್ಮ ಮಾನಸಿಕ ಆತಂಕ ಮತ್ತು ಖಿನ್ನತೆಯ ರೋಗ ಲಕ್ಷಣಗಳು ತಂಪಾದ ನೀರಿನ ಸ್ನಾನದಿಂದ ಮಾಯಾವಾಗುತ್ತದೆ ಮತ್ತು ನಮ್ಮ ಮನಸ್ಸಿಗೆ ಪ್ರಶಾಂತತೆಯ ಭಾವ ಒದಗುತ್ತದೆ.
ನಾರ್ತ್ ಅಮೇರಿಕನ್ ಜರ್ನಲ್ ಆಫ್ ಮೆಡಿಕಲ್ ಸೈನ್ಸ ತನ್ನ ಅಧ್ಯಯನದಲ್ಲಿ ತಿಳಿಸಿರುವ ಹಾಗೆ ದೀರ್ಘ ಕಾಲದ ನೋವು ಮತ್ತು ಉರಿಯೂತದಿಂದ ಬಳಲುತ್ತಿರುವ ಜನರಿಗೆ ಕೋಲ್ಡ್ ವಾಟರ್ ಥೆರಫಿ ಮೂಲಕ ಪರಿಹಾರ ಒದಗಿಸಲಾಗುತ್ತದೆ.ತಣ್ಣೀರಿನ ಸ್ನಾನ ಮಾಡುವುದರಿಂದ ಖಿನ್ನತೆಯನ್ನು ತಡೆಯಬಹುದು ಮತ್ತು ಅದರಿಂದ ಪರಿಹಾರ ಪಡೆಯಬಹುದು. ತಂಪಾದ ವಾತಾವರಣವು ಮೆದುಳನ್ನು ಉತ್ತೇಜಸಿ ತಂಪಾಗಿರಿಸುತ್ತದೆ.ತಣ್ಣೀರ ಸ್ನಾನದಿಂದ ರೋಗ ನಿರೋಧಕ ಶಕ್ತಿ ಹೆಚ್ಚಳ ಅಂದ್ರೆ ಇದರಿಂದ ಸೋಂಕುಗಳು ಹರಡುವುದು ತಪ್ಪುತ್ತದೆ, ಉತ್ತಮ ರಕ್ತದ ಪರಿಚಲನೆಯ ಹೃದಯ ಆರೋಗ್ಯವಾಗಿರುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ತಣ್ಣೀರ ಸ್ನಾನ ದೇಹದಲ್ಲಿ ಇರುವಂತಹ ಬ್ರೌನ್ ಫ್ಯಾಟ್ ಉತ್ಪಾದನೆಯನ್ನು ಹೆಚ್ಚಿಸಿ ಗ್ಲುಕೋಸ್ ಅನ್ನು ಬಳಸಿ ಕೊಂಡು ಶಕ್ತಿಯನ್ನು ಉತ್ಪಾದಿಸುತ್ತದೆ.
ನಾವು ಕಠಿಣ ವ್ಯಾಯಾಮ ಮಾಡುವಾಗ ಶ್ವಾಸಕೋಶ ತೆರೆದುಕೊಳ್ಳುವಂತೆ ತಣ್ಣೀರಿನ ಸ್ನಾನ ಮಾಡುವ ವೇಳೆ ಕೂಡ ತೆರೆದು ಕೊಳ್ಳುವುದು, ನೀವು ತಣ್ಣೀರಿನ ಸ್ನಾನ ಮಾಡುವುದರಿಂದ ಚನ್ನಾಗಿ ಉಸಿರಾಡಲು ಸಾಧ್ಯವಾಗುವುದು.ಹೊಸ ಅಧ್ಯಯನ ಪ್ರಕಾರ ತಣ್ಣೀರಿನ ಸ್ನಾನ ಮಾಡುವುದರಿಂದ ತೂಕ ಕಳೆದುಕೊಳ್ಳಲು ಸಹಕಾರಿಯಾಗುವುದು.ಹೆಚ್ಚು ತಂಪಾಗಿರುವುದಕ್ಕೆ ಮೈಯನ್ನು ಒಡ್ಡಿಕೊಳ್ಳುವುದರಿಂದ ಕಂದು ಕೊಬ್ಬು ಹೆಚ್ಚಾಗುತ್ತದೆ ಕಂದು ಕೊಬ್ಬು ಶಕ್ತಿಯನ್ನು ದಹಿಸುತ್ತದೆ.