ದಾಳಿಂಬೆ ಒಂದು ಅದ್ಭುತವಾದ ಹಣ್ಣು. ಮುತ್ತುಗಳಂತಹ ಬೀಜಗಳನ್ನು ಹೊಂದಿರುವ ದಾಳಿಂಬೆಯು ಸೃಷ್ಟಿಯ ಒಂದು ಅದ್ಭುತ ಎಂದೇ ಹೇಳಬಹುದು. ಇದು ಹಣ್ಣಿನ ರೂಪದಲ್ಲಿ ಇರುವಂತಹ ಒಂದು ಬಹುದೊಡ್ಡ ಔಷಧಿಗಳ ಖಜಾನೆಯೆ ಆಗಿದೆ. ಅಂದರೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಮತ್ತು ವಿಟಮಿನ್ ಗಳು ಹೇರಳವಾಗಿ ದೊರೆಯುತ್ತದೆ. ದಾಳಿಂಬೆ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದಾಗಿದ್ದು ನಮ್ಮ ದೇಹಕ್ಕೆ ಹಲವಾರು ರೀತಿಯ ರೋಗಗಳು ಬರದಂತೆ ತಡೆಯುತ್ತದೆ. ದಾಳಿಂಬೆ ಹಣ್ಣು ಸಾಮಾನ್ಯವಾಗಿ ವರ್ಷಪೂರ್ತಿ ಸಿಗುವಂತಹ ಹಣ್ಣು ಹಾಗಾಗಿ ಹಣ್ಣನ್ನು ನಮ್ಮ ಆಹಾರ ಅಭ್ಯಾಸಗಳಲ್ಲಿ ಒಂದಾಗಿ ಬಳಸಿಕೊಳ್ಳಬಹುದು. ದಾಳಿಂಬೆ ಹಣ್ಣು ಮತ್ತು ಇದರ ಜ್ಯೂಸನ್ನು ನಾವು ಸೇವಿಸುವುದರಿಂದ ದೇಹಕ್ಕೆ ಹಲವಾರು ರೀತಿಯಲ್ಲಿ ಶಕ್ತಿಯನ್ನು ನೀಡಿ ರೋಗಗಳು ಬರದಂತೆ ತಡೆಯುತ್ತದೆ. ದಾಳಿಂಬೆ ಹಣ್ಣಿನಿಂದ ನಾವು ಹಲವಾರು ರೀತಿಯ ರೋಗಗಳನ್ನು ನಿವಾರಣೆ ಮಾಡಿಕೊಳ್ಳಬಹುದು ಹಾಗಾಗಿ ದಾಳಿಂಬೆ ಹಣ್ಣಿನಿಂದ ನಾವು ನಮ್ಮ ದೇಹಕ್ಕೆ ಆಗುವಂತಹ ಲಾಭದಾಯಕ ಗುಣಗಳು ಯಾವುದು ಹೇಗೆ ಎನ್ನುವುದರ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ದಾಳಿಂಬೆ ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ದಾಳಿಂಬೆ ಹಣ್ಣಿನಲ್ಲಿ ಇರುವಂತಹ ಮೇಲೀಪಿನೋನ್ ಎಂಬ ಅಂಶವು ನಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದಾಳಿಂಬೆ ಹಣ್ಣನ್ನು ಹಾಗೆಯೇ ಸೇವಿಸಲು ಬಹುದು ಅಥವಾ ಜ್ಯೂಸ್ ಮಾಡಿಕೊಂಡು ಸಹ ಸೇವಿಸಬಹುದು. ಈಗಿನ ದಿನಗಳಲ್ಲಿ ನಮಗೆ ನೆನಪಿನ ಶಕ್ತಿ ನಮಗೆ ಕಡಿಮೆ ಇದ್ದಲ್ಲಿ ಪ್ರತಿನಿತ್ಯ ಬೆಳಗ್ಗೆ ತಿಂಡಿ ಆದ ನಂತರ ದಾಳಿಂಬೆ ಹಣ್ಣಿನ ಜ್ಯೂಸ್ ಸೇವಿಸುವುದರಿಂದ ನಮ್ಮ ನೆನಪಿನ ಶಕ್ತಿ ವೃದ್ಧಿಸುತ್ತದೆ. ರಕ್ತದ ಒತ್ತಡ ಮತ್ತು ಹೃದಯದ ಕಾಯಿಲೆಯ ವಿರುದ್ಧ ಹೋರಾಡುವಂತಹ ಗುಣವನ್ನು ಸಹ ದಾಳಿಂಬೆ ಹಣ್ಣು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಅತಿಯಾದ ಒತ್ತಡದಿಂದ ಪ್ರತಿಯೊಬ್ಬರು ರಕ್ತದ ಒತ್ತಡ ಅಂತಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಆದರೆ ದಾಳಿಂಬೆ ಜ್ಯೂಸ್ ಅನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಈ ಸಮಸ್ಯೆಯಿಂದ ನಾವು ಮುಕ್ತಿ ಪಡೆಯಬಹುದು. ಕೊಲೆಸ್ಟ್ರಾಲನ್ನು ಸುಧಾರಿಸುವುದು ಮತ್ತು ರಕ್ತನಾಳಗಳಲ್ಲಿರುವ ಅಂತಹ ಪದರಗಳನ್ನು ದಾಳಿಂಬೆ ಹಣ್ಣು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಇದು ಹೃದಯಕ್ಕೆ ಕೂಡ ತುಂಬಾ ಒಳ್ಳೆಯದು. ದಾಳಿಂಬೆ ತುಂಬಾ ರುಚಿಯಾಗಿ ಇರುವ ಕಾರಣ ಹೇಳಿದ್ದು ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಹಾರಗಳಲ್ಲಿ ಸಹ ಒಂದಾಗಿರುತ್ತದೆ.
ದಾಳಿಂಬೆ ನಮ್ಮ ತ್ವಚೆಯನ್ನು ರಕ್ಷಿಸುತ್ತದೆ. ದಾಳಿಂಬೆ ಹಣ್ಣು ನಮ್ಮ ದೇಹದ ಆರೋಗ್ಯವನ್ನು ಮಾತ್ರ ಕಾಪಾಡುವುದಲ್ಲದೆ ನಮ್ಮ ಚರ್ಮಕ್ಕೂ ಸಹ ಇದು ನೆರವಾಗುತ್ತದೆ . ಚರ್ಮರೋಗ ತಜ್ಞರು ಹೇಳುವ ಪ್ರಕಾರ ಒಣ ಹಾಗೂ ನಿಸ್ತೇಜ ಚರ್ಮಕ್ಕೆ ದಾಳಿಂಬೆ ಹಣ್ಣು ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ ವಿಟಮಿನ್-ಸಿ ಸಹ ಇದರಲ್ಲಿ ಹೆಚ್ಚಾಗಿ ಇರುವುದರಿಂದ ದಾಳಿಂಬೆ ರಸವನ್ನು ಮುಖಕ್ಕೆ ಹಚ್ಚುವುದರಿಂದ ಇದು ನಮ್ಮ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
ಕ್ಯಾನ್ಸರ್ ನಂತಹ ರೋಗಗಳನ್ನು ತಡೆಯುವ ಶಕ್ತಿ ದಾಳಿಂಬೆಯಲ್ಲಿದೆ. ಪ್ರತಿದಿನ ದಾಳಿಂಬೆ ಜ್ಯೂಸ್ ಅನ್ನು ಕುಡಿಯುವುದರಿಂದ ಹಲವಾರು ರೀತಿಯ ಕ್ಯಾನ್ಸರ್ ರೋಗ ಗಳನ್ನು ತಡೆಯುತ್ತದೆ ಹಾಗೂ ಅಷ್ಟೇ ಅಲ್ಲದೆ ವಿವಿಧ ಹಂತದಲ್ಲಿ ಇರುವಂತಹ ಕ್ಯಾನ್ಸರ್ ರೋಗಗಳನ್ನು ಸಹ ನಿಯಂತ್ರಣ ಮಾಡುತ್ತದೆ. ದಾಳಿಂಬೆಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣ ಮತ್ತು ಪಲೆಫಿನಲ್ ಅಂಶವು ಡಿಎನ್ಎ ಪರಿವರ್ತನೆ ಆಗುವುದರಿಂದ ರಕ್ಷಿಸುತ್ತದೆ. ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆಯನ್ನು ತಡೆದು ಕ್ಯಾನ್ಸರ್ ಹರಡದಂತೆ ನಮ್ಮನ್ನು ರಕ್ಷಿಸುತ್ತದೆ. ದಾಳಿಂಬೆ ಬಗ್ಗೆ ಇನ್ನೂ ಹೆಚ್ಚು ಸಂಶೋಧನೆಯನ್ನು ನಡೆಸಿದಾಗ ಇದು ಕರುಳು, ಸ್ತನ ಕ್ಯಾನ್ಸರ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಇವುಗಳನ್ನು ನಿವಾರಣೆ ಮಾಡುವಂತಹ ಗುಣಗಳು ಇವೆ ಎಂದು ತಿಳಿದುಬಂದಿದೆ. ದಾಳಿಂಬೆ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ ಅಂಶವು ಕೂದಲಿನ ಕಿರು ಚೀಲವನ್ನು ಬಲಪಡಿಸುತ್ತದೆ ಮತ್ತು ರಕ್ತದ ಸಂಚಾರವನ್ನು ಸರಾಗಗೊಳಿಸುತ್ತದೆ ಮೂಲಕ ಕೂದಲ ಬೆಳವಣಿಗೆಗೆ ಸಹ ಸಹಾಯವಾಗುತ್ತದೆ. ಅಷ್ಟೇ ಅಲ್ಲದೆ ಸಂಧಿವಾತಕ್ಕೂ ಕೂಡ ದಾಳಿಂಬೆ ಉತ್ತಮವಾಗಿದೆ. ಈಗಿನ ಕಾಲಕ್ಕೆ ಸಾಮಾನ್ಯವಾಗಿ ಗಂಟು ನೋವಿನ ಸಮಸ್ಯೆ ಪ್ರತಿಯೊಬ್ಬರಲ್ಲೂ ಹೆಚ್ಚಾಗಿ ಕಾಡುತ್ತದೆ. ದಾಳಿಂಬೆ ಜ್ಯೂಸ್ ಇದಕ್ಕೆ ನೆರವಾಗುತ್ತದೆ ಇದರಲ್ಲಿ ಉನ್ನತ ಮಟ್ಟದ ಶಮನಕಾರಿ ಗುಣ ಇರುತ್ತದೆ. ಇದು ಗಂಟಿನ ಊತ ವನ್ನೂ ಕಡಿಮೆ ಮಾಡುತ್ತದೆ. ಕೆಲವೊಂದು ರಿಸರ್ಚುಗಳ ಪ್ರಕಾರ ದಾಳಿಂಬೆಯು ಸಂಧಿವಾತವನ್ನು ಹೆಚ್ಚಿಸುವಂತಹ ಕಿಣ್ವಗಳ ಉತ್ಪತ್ತಿಯನ್ನು ತಡೆಯುತ್ತದೆ.
ದಾಳಿಂಬೆ ಮೂಳೆಗಳಿಗೆ ಆರೋಗ್ಯವನ್ನು ನೀಡುತ್ತದೆ. ಮೂಳೆಗಳ ಸಮಸ್ಯೆ ಇರುವಂತಹ ಪ್ರಾಣಿಗಳ ಮೇಲೆ ದಾಳಿಂಬೆ ಹಣ್ಣು ಪ್ರಯೋಗ ಮಾಡಿದಾಗ ದಾಳಿಂಬೆ ನಮ್ಮ ಮೂಳೆಗಳನ್ನು ಬಲಪಡಿಸುತ್ತದೆ ಎನ್ನುವ ಅಂಶ ಬಲವಾಗಿದೆ. ದಾಳಿಂಬೆ ಬರುವಂತಹ ಪ್ರಮುಖ ಆಂಟಿಆಕ್ಸಿಡೆಂಟ್ ಗಳು ಇದಕ್ಕೆ ಕಾರಣವಾಗಿರುತ್ತದೆ. ನೀವು ಮೂಳೆಗಳ ಶಕ್ತಿಯನ್ನು ಬಲಪಡಿಸುತ್ತದೆ. ಹಾಗೆ ನಮ್ಮ ಹೊಟ್ಟೆ ತುಂಬಿದಂತೆ ಮಾಡುತ್ತದೆ . ನಾರಿನಾಂಶ ಹೆಚ್ಚಾಗಿರುವ ಆಹಾರ ಸೇವಿಸಿದರೆ ಜೀರ್ಣಕ್ರಿಯೆಯನ್ನು ಸರಾಗವಾಗಿ ನಡೆಸುತ್ತದೆ ಈ ಮೂಲಕ ಬೇಗ ಹೊಟ್ಟೆ ತುಂಬಿದಂತೆ ಮಾಡುತ್ತದೆ. ದಾಳಿಂಬೆ ಹಂತಹ ನಾರಿನಂಶ ಅಧಿಕವಿರುವ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮುಕ್ಕಾಲು ಕಪ್ ದಾಳಿಂಬೆ ಬೀಜಗಳಲ್ಲಿ 4 ಗ್ರಾಂ ಅಷ್ಟು ನಾರಿನ ಅಂಶ ಇರುತ್ತದೆ. ದಾಳಿಂಬೆ ಮೊಡವೆಗಳ ವಿರುದ್ಧ ಹೋರಾಡುವ ಗುಣವನ್ನು ಹೊಂದಿರುತ್ತದೆ. ದಾಳಿಂಬೆ ಹಣ್ಣಿನಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಗಳು ಮೊಡವೆಗಳು ಉಂಟಾಗಲು ಕಾರಣ ಆದಂತಹ ಉರಿಯೂತವನ್ನು ಕಡಿಮೆ ಮಾಡುತ್ತದೆ. ಈ ಮೂಲಕ ಇತ್ತೀಚೆಗೆ ಬಹಳಷ್ಟು ಒಳ್ಳೆಯದು ದಾಳಿಂಬೆ ಹಣ್ಣನ್ನು ನಾವು ಕರಿದ ತಿಂಡಿಯನ್ನು ಸೇವಿಸುವುದಕ್ಕಿಂತ ಮೊದಲು ಸಹ ಸೇವಿಸಬಹುದು. ಇದರಿಂದ ದಾಳಿಂಬೆ ಹಣ್ಣಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಸಿಗುತ್ತವೆ. ಇವಿಷ್ಟು ದಾಳಿಂಬೆ ಹಣ್ಣಿನಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳು.