ಗಣೇಶ್ ಅವರ ಕುಟುಂಬ, ಅವರ ಸಿನಿಮಾ ಹಾಗೂ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಗೋಲ್ಡನ್ ಸ್ಟಾರ್ ಎಂದೇ ಖ್ಯಾತಿಯಾದ ಗಣೇಶ್ ಅವರು ಬೆಂಗಳೂರಿನಲ್ಲಿ 1978 ರಲ್ಲಿ ಹುಟ್ಟಿದರು. ಇವರು ಒಂದು ಬಡ ಕುಟುಂಬದಲ್ಲಿ ಜನಿಸಿದ್ದಾರೆ ಇಂದು ಬಹಳಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇವರ ತಂದೆ ಕಿಶನ್ ಬಹದ್ದೂರ್ ನೇಪಾಳಿ, ಇವರ ತಾಯಿ ಸುಲೋಚನಾ ಕನ್ನಡತಿ. ಗಣೇಶ್ ಅವರು ಚಿಕ್ಕ ವಯಸ್ಸಿನಲ್ಲಿ ಬಹಳ ತುಂಟ, ತರಲೆಯಾಗಿದ್ದರು. ಇವರು ಸಿನಿಮಾ ರಂಗಕ್ಕೆ ಪರಿಚಯವಾಗುವ ಮೊದಲು ಬಹಳ ಕಷ್ಟಪಟ್ಟಿದ್ದಾರೆ. ಇವರು ಮೊದಲು ಸಿನಿಮಾಗಳಲ್ಲಿ ಸೈಡ್ ಆಕ್ಟರ್ ಆಗಿ ನಟಿಸುತ್ತಿದ್ದರು. ನಂತರ ಗಣೇಶ ಅವರು ಕಾಮೆಡಿ ಟೈಮ್ ಶೋಗಳನ್ನು ಮಾಡುವ ಮೂಲಕ ಜನರಿಗೆ ಪರಿಚಯ ಆದರು.
ನಂತರ ಮುಂಗಾರು ಮಳೆ ಚಿತ್ರದ ಮೂಲಕ ನಟಿಸಿ ಕನ್ನಡ ಟಾಪ್ ನಟರಾದರು. ಗಣೇಶ್ ಅವರಿಗೆ ಇಬ್ಬರು ತಮ್ಮಂದಿರು ಇದ್ದಾರೆ. ತಮ್ಮಂದಿರ ಹೆಸರು ಉಮೇಶ್ ಹಾಗೂ ರಮೇಶ್. ರಮೇಶ್ ಅವರು ಹಲವಾರು ಸಿನಿಮಾಗಳಲ್ಲಿ ಸೈಡ್ ಆಕ್ಟರ್ ಆಗಿ ನಟಿಸುತ್ತಿದ್ದರು. ಆದರೆ ಮಹೇಶ್ ಅವರಿಗೆ ಗಣೇಶ್ ಅವರ ತರ ಹೆಸರು ಮಾಡಲು ಆಗಲಿಲ್ಲ. ಮಹೇಶ್ ಅವರು 2012 ರಲ್ಲಿ ಪ್ರೇಮಾ ಅವರನ್ನು ಮದುವೆಯಾಗಿದ್ದಾರೆ. ಇವರಿಗೆ ಒಬ್ಬ ಮಗನಿದ್ದಾನೆ. ಮತ್ತೊಬ್ಬ ತಮ್ಮ ಉಮೇಶ್ ಅವರು ಮಾಧ್ಯಮದ ಮುಂದೆ ಬಂದಿಲ್ಲ. ಗಣೇಶ್ ಅವರು ಶಿಲ್ಪಾ ಅವರನ್ನು ಮದುವೆಯಾಗಿದ್ದಾರೆ. ಗಣೇಶ್ ಅವರು ಕುಟುಂಬದವರು ಸುಖವಾಗಿರಲಿ ಎಂದು ಮನೆಯನ್ನು ಕಟ್ಟಿಸಿಕೊಟ್ಟಿದ್ದಾರೆ. ಇಷ್ಟೇ ಅಲ್ಲದೇ ಮಹೇಶ್ ಆವರಿಗೆ ಸ್ವಂತ ಬಿಸಿನೆಸ್ ಮಾಡಿ ಕೊಟ್ಟಿದ್ದಾರೆ. ಚೆಲುವಿನ ಚಿತ್ತಾರ, ಬೊಂಬಾಟ್, ಚಮಕ್, ಮದುವೆ ಮನೆ ಮೊದಲಾದ ಸಿನಿಮಾಗಳಲ್ಲಿ ನಟನಾಗಿ ನಟಿಸಿದ ಗಣೇಶ್ ಅವರು ಸುಖವಾಗಿರಲಿ ಮತ್ತು ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲೆಂದು ಹಾರೈಸೋಣ.