ಯಾವುದೇ ವಸ್ತು ಇರಲಿ ಬೆಲೆ ಇಳಿದಾಗಲೇ ಖರೀದಿಸುವುದು ಜಾಣತನ. ಇಳಿಕೆ ಎಂಬುದು ಏರಿಕೆಗೆ ಮೂಲವಾಗಿದ್ದು ಇದಕ್ಕೆ ಬಂಗಾರವೂ ಹೊರತಲ್ಲ. ಬಂಗಾರದ ಬೆಲೆ ಇಳಿದಿದೆ ಅಯ್ಯೋ ಇನ್ನಷ್ಟು ಇಳಿದರೆ ಏನು ಗತಿ ? ಕೊಂಡ ಬಂಗಾರದ ಮೌಲ್ಯ ಕಡಿಮೆಯಾಗುತ್ತದಲ್ಲಾ, ಎಂಬ ಆತಂಕ ಎಲ್ಲರಿಗೂ ಇದ್ದೆ ಇರುತ್ತದೆ. ಚಿನ್ನ ಅಥವಾ ಬಂಗಾರವನ್ನು ನಾವು ಆಪತ್ಬಾಂಧವ ಎಂದು ಕರೆಯುತ್ತೇವೆ. ಕಷ್ಟ ಕಾಲದಲ್ಲಿ ನೆರವಿಗೆ ಬರುವ ಬಂಗಾರದ ಬೆಲೆ ಇತ್ತೀಚಿನ ದಿನಗಳಲ್ಲಿ ಕುಸಿತ ಕಂಡಿದೆ. ಚಿನ್ನದ ಬೆಲೆ ಇಳಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಹ ಹಲವಾರು ಕಾರಣಗಳಿವೆ. ಹೀಗಿದ್ದಾಗ ಚಿನ್ನದ ಬೆಲೆಯಲ್ಲಿ ಮತ್ತೆ ದಾಖಲೆಯ ಕುಸಿತ ಕಂಡುಬಂದಿದ್ದು ಯಾವ ದರದಲ್ಲಿ ಇಳಿಕೆ ಆಗಿದೆ ಹಾಗೂ ಇಂದಿನ ಚಿನ್ನದ ದರ ಎಷ್ಟಿದೆ ಎಂಬುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ದೀಪಾವಳಿಗೆ ತೆರೆ ಚಿನ್ನದ ದರವೂ ಇಳಿಕೆ. ಎರಡು ದಿನ ಕೊಂಚ ಏರಿದ್ದ ಚಿನ್ನದ ಬೆಲೆ ಮತ್ತೆ ಕುಸಿತ ಹೀಗಿದೆ ನೋಡಿ ಇಂದು ಅಂದರೆ, ನವೆಂಬರ್ ಗೋಲ್ಡ್‌ ರೇಟ್ ಈ ರೀತಿಯಾಗಿವೆ. ಭಾರತದಲ್ಲಿ ಅತಿ ಹೆಚ್ಚು ಸಡಗರದಿಂದ ಆಚರಿಸಲಾಗುವ ದೀಪಾವಳಿ ಹಬ್ಬ ಕೊನೆಗೊಂಡಿದೆ. ದೀಪಾವಳಿ ವೇಳೆಗೆ ಚಿನ್ನದ ಬೆಲೆ ಕಡಿಮೆಯಾಗಬಹುದೆಂದು ಭಾವಿಸಿದ್ದರೂ ಈ ನಿರೀಕ್ಷೆ ಹುಸಿಯಾಗಿತ್ತು. ದೀಪಾವಳಿಗೂ ಮುನ್ನ ಭಾರೀ ಏರಿಕೆ ಕಂಡಿದ್ದ ಚಿನ್ನದ ದರವು ಇಳಿಕೆಯ ಹಾದಿಯನ್ನು ಹಿಡಿದಿದ್ದು ಗ್ರಾಹಕರಿಗೆ ಭಾರೀ ಖುಷಿ ಕೊಟ್ಟಿದೆ. ಕೊರೋನಾ ನಡುವೆ ಏರಿದ್ದ ಚಿನ್ನದ ರೇಟ್ ಹಬ್ಬ ಮುಗಿಯುತ್ತಿದ್ದಂತೆಯೇ ಕುಸಿದಿದೆ. ಕೊರೋನಾ ಕಾಲದಲ್ಲಿ ಉದ್ಯಮಗಳು ನೆಲ ಕಚ್ಚಿದಾಗ ಹೆಚ್ಚಿನ ಮಂದಿ ಚಿನ್ನದಲ್ಲಿ ಹಣ ಹೂಡಿಕೆ ಮಾಡಿದ್ದೇ ಬೆಲೆ ಏರಿಕೆಗೆ ಕಾರಣವಾಗಿತ್ತು.ಆದರೆ ದೀಪಾವಳಿ ಹಬ್ಬಕ್ಕೆ ತೆರೆ ಬಿದ್ದ ಬೆನ್ನಲ್ಲೇ ಚಿನ್ನದ ದರ ಕುಸಿದಿದ್ದು, ಗ್ರಾಹಕರಿಗೆ ಖುಷಿ ನೀಡಿದೆ. 

ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 900 ರೂಪಾಯಿ ಕುಸಿದು 46,200 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 980 ರೂಪಾಯಿ ಇಳಿಕೆಯಾಗಿ 50,400 ರೂಪಾಯಿ ಆಗಿದೆ. ಇನ್ನು ಇತ್ತ ಬೆಳ್ಳಿ ದರದಲ್ಲೂ 800 ರೂಪಾಯಿ ಇಳಿಕೆಯಾಗಿದ್ದು, ಒಂದು ಕೆಜಿ ಬೆಳ್ಳಿ ದರ 62,300 ರೂಪಾಯಿ ಆಗಿದೆ.

ಒಂದು ವಾರದಲ್ಲಿ ದಾಖಲೆಯ ಇಳಿಕೆ ಕಂಡಿದ್ದು, ದೀಪಾವಳಿ ಕೊನೆಗೊಂಡ ಮರುದಿನದಿಂದಲೇ ಚಿನ್ನದ ದರ ಇಳಿಕೆ ಕಾಣಲಾರಂಭಿಸಿದೆ. ಈ ಮೂಲಕ ಕಳೆದ ಒಂಭತ್ತು ದಿನಗಳಿಂದ 22 ಕ್ಯಾರೆಟ್ ಚಿನ್ನದ ದರ ಒಟ್ಟು 1800 ರೂಪಾಯಿ ಗೆ ಇಳಿಕೆ ಕಂಡಿದೆ. ಆದರೆ ಇನ್ನೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಲಿದೆ ಎಂಬ ಸುದ್ದಿಯೂ ಹರಡುತ್ತಿದ್ದು 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಇದರಿಂದ ಆರ್ಥಿಕತೆ ಮೇಲೆ ಭಾರೀ ಪರಿಣಾಮ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿ ಇದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

ಭಾರತದಂತಹ ದೇಶದಲ್ಲಿ ಮದುವೆ ಸೇರಿದಂತೆ ಸಮಾರಂಭಗಳಲ್ಲಿ ಸ್ವರ್ಣಾಭರಣದ ಕಳೆಯಿಲ್ಲದಿದ್ದರೆ ಎಲ್ಲವೂ ಸಪ್ಪೆ. ದರ ಇಳಿಯಲಿ ಬಿಡಲಿ ಮದುವೆಗಂತೂ ಚಿನ್ನ ಬೇಕೇ ಬೇಕು. ಹೀಗಾಗಿ ಬೆಲೆ ಕಡಿಮೆಯಾದ ಈ ಸಂದರ್ಭವನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುವುದು ಜಾಣತನ. ಆದರೆ ಕೊನೆ ಕ್ಷಣಕ್ಕಾಗಿ ಕಾಯದೆ ಈಗಿನಿಂದಲೇ ಬಂಗಾರವನ್ನು ಹಂತ ಹಂತವಾಗಿ ಖರೀದಿಸಿದರೆ ಬೆಲೆ ಇಳಿಕೆಯ ಬಿಸಿಯೂ ಸಹ ನಿಮಗೆ ತಟ್ಟುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!