ಪ್ರತೀ ದಿನ ಒಂದು ಲೋಟ ಮೇಕೆ ಹಾಲು ಕುಡಿಯೋದರಿಂದ ಎಷ್ಟೊಂದು ಉಪಯೋಗ ಇದೆ ಗೊತ್ತಾ? ಮೇಕೆಯ ಹಾಲಿನಲ್ಲಿ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವ ಶಕ್ತಿ ಇದೆ ಅಜೀರ್ಣ ಸಮಸ್ಯೆಯನ್ನ ದೂರ ಮಾಡತ್ತೆ. ಚಿಕ್ಕ ಮಕ್ಕಳಿಗೆ ಎಮ್ಮೆ ಹಾಲಿಗಿಂತ ಮೇಕೆಯ ಹಾಲು ತುಂಬಾ ಒಳ್ಳೆಯದು ಯಾಕಂದ್ರೆ ಅದು ಬೇಗ ಜೀರ್ಣ ಆಗತ್ತೆ. ತಾಯಿಯ ಹಾಲು ಕಡಿಮೆ ಇದ್ದರೆ, ಪ್ಯಾಕೆಟ್ ಹಾಲು ಅಥವಾ ಪೌಡರ್ ಹಾಲನ್ನು ಕೊಡುತ್ತಾರೆ ಆದರೆ ಅದಕ್ಕಿಂತ ತುಂಬಾ ಒಳ್ಳೆಯದು ಈ ಮೇಕೆಯ ಹಾಲು. ಇದರಲ್ಲಿ ಕೊಬ್ಬಿನ ಅಂಶ ತುಂಬಾ ಕಡಿಮೆ ಇರುವುದರಿಂದ ಬೇಗ ಜೀರ್ಣ ಆಗತ್ತೆ. ಇದರಲ್ಲಿ ಪ್ರೊಟೀನ್ ಕೂಡ ಹೆಚ್ಚು ಇದೆ. ಬೇಗ ಸಣ್ಣ ಆಗಬೇಕು ಅಂತ ಇರುವವರು ಮೇಕೆಯ ಹಾಲನ್ನು ಕುಡಿಯಬೇಕು. ಬೇರೆ ಹಾಲಿಗೆ ಹೋಲಿಸಿದರೆ, ಮೇಕೆಯ ಹಾಲಿನಲ್ಲಿ ಕ್ಯಾಲ್ಸಿಯಂ ಅತೀ ಹೆಚ್ಚು ಇರತ್ತೇ. ಕ್ಯಾಲ್ಸಿಯಂ ಸಮಸ್ಯೆ ಅಂದರೆ, ಮೂಳೆ ಸವೆತ, ಬೆನ್ನು ನೋವು ಇಂತ ಸಮಸ್ಯೆ ಇದ್ರೇ ಪ್ರತೀ ದಿನ ಮೇಕೆ ಹಾಲು ಕುಡಿಯುವುದರಿಂದ ಈ ಎಲ್ಲ ಸಮಸ್ಯೆಗಳೂ ಬೇಗ ಕಡಿಮೆ ಆಗತ್ತೆ.
ಮೇಕೆ ಹಾಲಿನಲ್ಲಿ ಇರುವ ಸೆಲಿನಿಯಂ ಎಂಬ ಅಂಶ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ನಮ್ಮ ಶರೀರಕ್ಕೆ ಯಾವುದೇ ರೀತಿಯ ಇನ್ಫೆಕ್ಷನ್ಸ್ ಆಗಲ್ಲ. ಇದರಲ್ಲಿರುವ ಬಯೋ ಆರ್ಗ್ಯಾನಿಕ್ ಪೋಷಕಾಂಶ ನಮ್ಮ ದೇಹದ ಕೀಲು ನೋವು ಹಾಗೂ ಯಾವುದೇ ರೀತಿಯ ನೋವು ಇದ್ದರೂ ಸಹ ಕಡಿಮೆ ಮಾಡತ್ತೆ. ನಮ್ಮ ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆಂಟಿ ಅಲೆರ್ಜಿಕ್ ಅನ್ನೋ ವಿಶೇಷ ಗುಣ ಇದೆ ಹಾಗಾಗಿ ನಮಗೆ ಯಾವುದೇ ಅಲರ್ಜಿ ಆಗದಂತೆ ಕಾಪಾಡತ್ತೆ. ನಮ್ಮ ಮೆದುಳಿಗೂ ಸಹ ಚುರುಕು ಆಗಿರಲು ಸಹಾಯ ಮಾಡತ್ತೆ. ಹೊಟ್ಟೆ ಉರಿ, ಅಲ್ಸರ್, ಗ್ಯಾಸ್ಟ್ರಿಕ್ ಸಮಸ್ಯೆ ಏನೇ ಇದ್ದರೂ ಸಹ ಕಡಿಮೆ ಆಗತ್ತೆ. ಇದರಲ್ಲಿ ವಿಟಮಿನ್ ಬಿ 12 ಹಾಗಿ ಐರನ್ ಅಂಶ ಜಾಸ್ತಿ ಇರತ್ತೆ.
ಮೇಕೆಯ ಹಾಲು ನಮ್ಮ ದೇಹಕ್ಕೆ ಅಲ್ಲದೆ ಮುಖಕ್ಕೂ ಕೂಡಾ ಒಳ್ಳೆಯದು. ಮೇಕೆಯ ಹಾಲಿನಿಂದ ಮುಖಕ್ಕೆ ಮಸಾಜ್ ಮಾಡುತ್ತ ಬಂದರೆ, ಮುಖ ಕಾಣಿಯುತ ಆಗಿ ಕಾಣತ್ತೆ. ಯಾವುದೇ ರೀತಿಯ ಚರ್ಮದ ಸಮಸ್ಯೆ ಬರಲ್ಲ. ಅದೂ ಅಲ್ಲದೆ ನಿಮ್ಮ ಕೂದಲಿಗೆ ವಾರದಲ್ಲಿ 2 / 3 ಬಾರಿ ಹಚ್ಚುವುದರಿಂದ ಕೂದಲು ಚೆನ್ನಾಗಿ ಬೆಳೆಯತ್ತೆ ಹಾಗೂ ಹೊಳಪಾಗಿಯೂ ಇರತ್ತೆ. ಇಷ್ಟೆಲ್ಲ ಆರೋಗ್ಯ ಗುಣ ಇರಬೇಕಾದ್ರೆ ಮೇಕೆಯ ಹಾಳನ್ನ ಕುಡಿಯಬಹುದು ಅಲ್ವಾ? ಪ್ರತೀ ದಿನ ಸಿಗದೆ ಇದ್ದರೂ ಸಹ ವಾರಕ್ಕೆ 2 ರಿಂದ ಮೂರು ಬಾರಿ ಆದರೂ ಕುಡಿಯಬಹುದು. ಆರೋಗ್ಯ ಕಾಪಾಡಿಕೊಳ್ಳಬಹುದು.