ಈ ತಳಿಯ ಮೇಕೆ ಸಾಕಾಣಿಕೆ ಮಾಡಿ ತಿಂಗಳಿಗೆ 70 ಸಾವಿರದವರೆಗೆ ಲಾಭಗಳಿಸಿ ಇಲ್ಲಿದೆ ಸಿಂಪಲ್ ಮಾಹಿತಿ

0 1,576

ಈಗಿನ ಕಾಲದಲ್ಲಿ ಹೆಣ್ಣಿರಲಿ ಗಂಡಿರಲಿ ಉದ್ಯೋಗ ಮಾಡಲು ಬಯಸುತ್ತಾರೆ. ಕೆಲವರು ಸ್ವಂತ ಉದ್ಯೋಗ ಮಾಡಲು ಬಯಸುತ್ತಾರೆ ಅದರಲ್ಲಿಯೆ ಸಾಧನೆ ಮಾಡಿದವರು ಇದ್ದಾರೆ. ಸ್ವಂತ ಉದ್ಯೋಗ ಮಾಡಲು ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ ಆದರೆ ಕಡಿಮೆ ಹಣ ಹೂಡಿಕೆ ಮಾಡಿ ಉದ್ಯೋಗ ಮಾಡಬಹುದು ಹಾಗಾದರೆ ಅಂತಹ ಉದ್ಯೋಗದ ಬಗ್ಗೆ ಈ ಲೇಖನದಲ್ಲಿ ನೋಡೋಣ.

ಸಾಮಾನ್ಯವಾಗಿ ಸ್ವಂತ ಉದ್ಯೋಗ ಮಾಡಲು ಬಯಸುತ್ತಾರೆ ಏಕೆಂದರೆ ಸ್ವಂತ ಉದ್ಯೋಗದಲ್ಲಿ ಇನ್ನೊಬ್ಬರ ಹಂಗು ಇರುವುದಿಲ್ಲ. ಈಗಿನ ಕಾಲದಲ್ಲಿ ಸ್ವಂತ ಉದ್ಯೋಗ ಮಾಡಲು ಹಲವು ಮಾರ್ಗಗಳಿವೆ. ವ್ಯಾಪಾರ ಮಾಡುವ ಮೂಲಕ ಉತ್ತಮ ಲಾಭ ಗಳಿಸಲು ಬಯಸಿದರೆ ಪಶು ಸಂಗೋಪನೆ ಕುರಿ ಸಾಕಾಣಿಕೆ ಮೇಕೆ ಸಾಕಾಣಿಕೆ ಮಾಡುವುದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು. ವ್ಯಾಪಾರ ಎಂದರೆ ಹೆಚ್ಚು ಹಣ ಹೂಡಿಕೆ ಮಾಡಬೇಕಾಗುತ್ತದೆ ಎನ್ನುವುದು ಹಲವರ ಭಯವಾಗಿದೆ ಆದರೆ ಕಡಿಮೆ ಹಣವನ್ನು ಹೂಡಿಕೆ ಮಾಡಿ ಮೇಕೆ ಸಾಕಾಣಿಕೆ ಮಾಡಿ ಹೆಚ್ಚು ಆದಾಯವನ್ನು ಗಳಿಸಬಹುದು.

ಈದ್ ಹಬ್ಬದ ಸಮಯದಲ್ಲಿ ಮಾರುಕಟ್ಟೆಯಲ್ಲಿ ಆಡುಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ ಆದ್ದರಿಂದ ಮೇಕೆಗಳನ್ನು ಸಾಕುವುದರಿಂದ ಸುಲಭವಾಗಿ ಮೇಕೆಗಳನ್ನು ಮಾರಾಟ ಮಾಡಬಹುದು. ಮೇಕೆ ಸಾಕಾಣಿಕೆಯ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿರಬೇಕು. ಮೇಕೆ ಸಾಕಾಣಿಕೆಯಲ್ಲಿ ಬೋಯರ್ ಎಂಬ ತಳಿಯ ಮೇಕೆಗಳು ಸಾಕಲು ಉತ್ತಮವಾಗಿದೆ.

ಬೋಯರ್ ತಳಿಯ ಮೇಕೆಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಈ ತಳಿಯ ಮೇಕೆಯ ತೂಕ ಸುಮಾರು 90 ಕೆಜಿಯಿಂದ 110 ಕೆಜಿ ಇರುತ್ತದೆ. ಇದರ ಮಾಂಸ ಗುಣಮಟ್ಟವಾಗಿರುವುದರಿಂದ ಇದಕ್ಕೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಬೋಯರ್ ನೆಸ್ಟ್ ಆಡುಗಳು ವೇಗವಾಗಿ ತೂಕವನ್ನು ಹೆಚ್ಚಿಸಿಕೊಳ್ಳುತ್ತವೆ, ಇದು ಎಲ್ಲಾ ರೀತಿಯ ಮರದ ಎಲೆಗಳನ್ನು ತಿನ್ನುತ್ತದೆ. ಜಾರ್ಖಂಡ್, ರಾಜಸ್ಥಾನ್, ಬಿಹಾರ್, ಉತ್ತರಪ್ರದೇಶ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಈ ಮೇಕೆಯನ್ನು ದೊಡ್ಡ ಪ್ರಮಾಣದಲ್ಲಿ ಸಾಕಲಾಗುತ್ತದೆ.

ಬೋಯರ್ ತಳಿಯ ಮೇಕೆಯ ಇನ್ನೊಂದು ವಿಶೇಷತೆ ಎಂದರೆ ಹೆಚ್ಚು ಪ್ರಮಾಣದ ಹಾಲನ್ನು ಕೊಡುತ್ತದೆ, ಬೋಯರ್ ತಳಿಯ ಮೇಕೆ ದಿನವೊಂದಕ್ಕೆ ನಾಲ್ಕು ಲೀಟರ್ ಹಾಲು ಕೊಡುತ್ತದೆ. ಮೇಕೆಯ ಹಾಲನ್ನು ಮಾರಾಟ ಮಾಡುವುದರಿಂದಲೂ ಲಾಭಗಳಿಸಬಹುದು. ಇಂದು ಮಾರುಕಟ್ಟೆಯಲ್ಲಿ ಹಸುವಿನ ಹಾಲಿನ ಬೆಲೆಗಿಂತ ಮೇಕೆ ಹಾಲಿನ ಬೆಲೆ ಹೆಚ್ಚಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಈ ತಳಿಯ ಮೇಕೆಗೆ ಮಾರುಕಟ್ಟೆಯಲ್ಲಿ 30,000 ರೂಪಾಯಿ ಇದೆ ಹೀಗಾಗಿ ಬೋಯರ್ ಮೇಕೆ ಸಾಕಾಣಿಕೆ ಮಾಡುವುದರಿಂದ ಹೆಚ್ಚು ಲಾಭ ಗಳಿಸಬಹುದು. ಪ್ರತಿ ತಿಂಗಳು 60 ಸಾವಿರ ಆದಾಯವನ್ನು ಗಳಿಸಲು ಕೂಡ ಅವಕಾಶವಿದೆ. ಈ ಮಾಹಿತಿ ನಿಜಕ್ಕೂ ಉತ್ತಮವಾಗಿದೆ ಸ್ವಂತ ಉದ್ಯೋಗ ಮಾಡುವವರು ಅದರಲ್ಲೂ ಹಳ್ಳಿಗಳಲ್ಲಿ ವಾಸಿಸುವವರು ತಪ್ಪದೆ ಈ ಮಾಹಿತಿಯನ್ನು ಪೂರ್ಣವಾಗಿ ಓದಿ ಪ್ರಯೋಜನ ಪಡೆಯಿರಿ.

Leave A Reply

Your email address will not be published.