ನಮ್ಮ ಜಗತ್ತಿನಲ್ಲಿರುವ ಒಂದೊಂದು ದೇಶದಲ್ಲಿ ಅದೇ ರೀತಿ ರಾಜ್ಯಗಳಲ್ಲಿ, ಇನ್ನು ಕೆಲವು ಗ್ರಾಮಗಳಲ್ಲಿ ಒಂದೊಂದು ಸಂಪ್ರದಾಯ ಇರುತ್ತದೆ. ಕೆಲವೊಂದು ಸಂಪ್ರದಾಯಗಳಲ್ಲಿ ಅರ್ಥವಿದ್ದರೆ, ಇನ್ನು ಕೆಲವು ಪರಂಪರೆಗೆ ಬುಡ ಮೇಲು ಅನ್ನುವುದು ಇರುವುದಿಲ್ಲ. ಸಾಮಾನ್ಯವಾಗಿ ಒಂದು ಸಂತೆ ಅಥವಾ ಮಾರ್ಕೆಟ್ ಎಂದು ಹೇಳುವುದು ನಾವು ಬಟ್ಟೆ,ಬರೆ, ಹಣ್ಣು, ತರಕಾರಿ, ಮಾಂಸ, ಮುಂತಾದ ವಸ್ತುಗಳನ್ನು ಮಾರಾಟ ಮಾಡುವಂತರ ಸ್ಥಳಕ್ಕೆ. ತರಕಾರಿ, ಹಣ್ಣು ಹಂಪಲು, ಸಾಮಗ್ರಿಗಳು ಕೊಳ್ಳಲು ಸಂತೆ ನಡೆಯುವುದು ತಿಳಿದಿದೆ. ಆದರೆ ಯುವತಿಯರನ್ನು ಮಾರುವ ಸಂತೆ ಇದೆ. ಅದು ಅದ್ದೂರಿಯಾಗಿ ಜಾತ್ರೆಯಂತೆ ನಡೆಯುತ್ತದೆ. ಅಲ್ಲೇ ಸುಂದರ ಸಣ್ಣ ಸಣ್ಣ ವಯಸ್ಸಿನ ಯುವತಿಯರು ಸುಂದರ ಧಿರಿಸಿನಲ್ಲಿ ಕಾಣಬಹುದು. ಇವರನ್ನು ಕೊಳ್ಳಲು ಬರುವವರೆಗೆ ಟ್ರಾಕ್ ಮಾಡುವ ಪರಿಯೇ ಒಂದು ಸಂಪ್ರದಾಯವಾಗಿದೆ.
ಹಾಗಾದರೆ ಈ ಯುವತಿಯರನ್ನು ಎಲ್ಲಿ ಮಾರುತ್ತಾರೆ? ಏನಿದು ಸಂಪ್ರದಾಯ ಅಂತೀರಾ? ಇದರ ಬಗ್ಗೆ ಮಾಹಿತಿ ನೀಡುತ್ತೇವೆ ಈ ಸ್ಟೋರಿನ ಕೊನೆಯವರೆಗೂ ಓದಿ ನಿಮಗೆ ಅರ್ಥವಾಗುತ್ತದೆ. ಯುವತಿಯರನ್ನು ಮಾರುವ ಸಂಪ್ರದಾಯ ಇಂದಿಗೂ ಜೀವಂತವಾಗಿದೆ ಎಂದರೆ ನೀವು ನಂಬಲೇಬೇಕು. ಇದು 21ನೇ ಶತಮಾನದಲ್ಲಿಯೂ ಕಾಣಬಹುದು. ಇಲ್ಲಿ 18 ರಿಂದ 24, 25 ವರ್ಷದ ಸುಂದರ ಕನ್ಯೆಯರು ಮಾರಾಟಕ್ಕೆ ನಿಂತಿರುತ್ತಾರೆ. ಇದಕ್ಕೆ ಕಾನೂನುಗಳಿದ್ದರೂ ಏನನ್ನೂ ಮಾಡಲಾಗದ ಪರಿಸ್ಥಿತಿಯಲ್ಲಿವೆ. ಅಂದಹಾಗೆ ಇದನ್ನು ಯುರೋಪಿನ ಬಲ್ಗೇರಿಯಾ ದೇಶದ ವರ್ಜಿನ್ ಸಂತೆ ಎಂದು ಕರೆಯಲಾಗುತ್ತದೆ.
ಅಂತಹ ಒಂದು ಸಂತೆ ಯುರೋಪಿನ ಬಲ್ಗೇರಿಯಾದಲ್ಲಿ ಇದೆ. ಇಲ್ಲಿ ಪ್ರತಿ ವಸಂತ ಕಾಲದಲ್ಲಿ ಕನ್ಯೆಯರ ವರ್ಜಿನ್ ಸಂತೆ ನಡೆಯುತ್ತದೆ. ಇದು ಅಲ್ಲಿನ ಸಂಪ್ರದಾಯ ಅಂದರೆ ನಂಬಲೇ ಬೇಕು. ಯುರೋಪ್ ಅನ್ನುವುದು ತುಂಬಾ ಮುಂದುವರಿದ ರಾಷ್ಟ್ರ. ಅಲ್ಲೂ ಇಂತಹ ಸಂಪ್ರದಾಯ ಇದೆ ಅಂದರೆ ವಿಚಿತ್ರ ಅನ್ನಿಸದೆ ಇರದು. ಆದರೆ ಇದು ಅಲ್ಲಿನ ಕಲೆಂಜಿ ಜನಾಂಗದವರು ಪರಂಪರೆಯಿಂದ ನಡೆಸಿಕೊಂಡ ಬಂದ ಒಂದು ಸಂಪ್ರದಾಯ. ಈ ಯುರೋಪಿನ ಸ್ಟಾರಾ ಜವಾರ ಸಿಟಿಯಲ್ಲಿ ಪ್ರತಿ ವಸಂತ ಕಾಲಾವಧಿಯಲ್ಲಿ, ಅಲ್ಲಿನ ಸ್ಠಳಿಯ ಕಲೆಂಜಿ ಜನಾಂಗದವರಿಂದ ಭವ್ಯವಾದ ಪೆರಡಲ್ ಮಾರ್ಕೆಟ್ ನಡೆಯುತ್ತದೆ.
ಅಲ್ಲಿ ಬಣ್ಣ ಬಣ್ಣದ ಆಕರ್ಷಕ ಬಟ್ಟೆ ಹಾಕಿಕೊಂಡು ಬಂದ ಸುಂದರವಾದ 18 ರಿಂದ 20 ವರ್ಷದ ಒಳಗಿನ ಯುವತಿಯರನ್ನು ಬಿಡ್ ಮಾಡಿ ಖರೀದಿ ಮಾಡಲಾಗುತ್ತದೆ. ಇಲ್ಲಿ ಡಿಮಾಂಡ್ ಇರುವುದು 18 ರಿಂದ 23 ವರ್ಷದ ಒಳಗಿನ ಯುವತಿಯರಿಗೆ ಮಾತ್ರ. 23 ದಾಟಿದರೆ ಅವರಿಗೆ ವಯಸ್ಸಾಗಿದೆ ಎಂದೇ ಪರಿಗಣಿಸಲಾಗುತ್ತದೆ. ಇನ್ನು ಇಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ಹೆಣ್ಣು ಗ್ರೇಟ್ ಅನ್ನಿಸಿಕೊಳ್ಳುತ್ತಾಳೆ. ಇಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಅತ್ಯಂತ ಮುತುವರ್ಜಿಯಿಂದ ಸಾಕುತ್ತಾರೆ, ಅವರ ವರ್ಜಿನಿಟಿ ಹಾಳಾಗದಂತೆ ನೋಡಿಕೊಳ್ಳುತ್ತಾರೆ.
ಅಲ್ಲಿನ ಹೆಣ್ಣು ಮಕ್ಕಳಿಗೆ ಮುಕ್ತವಾಗಿ ಬದುಕುವ ಸ್ವಾತಂತ್ರ್ಯ ಇರುವುದಿಲ್ಲ.
ಇದು ಸಂಪ್ರದಾಯವಾಗಿ 14ನೇ ಶತಮಾನದಿಂದ ನಡೆದುಕೊಂಡು ಬಂದಿದೆ. ಯುವತಿಯರು ತಮ್ಮ ಸಂಗಾತಿಯನ್ನು ಆಯ್ದುಕೊಳ್ಳಲು ಅವಕಾಶವಿಲ್ಲ. ಬದಲಾಗಿ ತಮ್ಮ ಕನ್ಯತ್ವ ಕಾಪಾಡಿಕೊಳ್ಳುವುದು ಇವರ ಜೀವನದ ಗುರಿ. ಆದ್ದರಿಂದಲೇ ಈ ಜನಾಂಗದಲ್ಲಿ ಹುಟ್ಟಿದ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುವುದಿಲ್ಲ. ಸಂತೆ ನಡೆಯುವ ಮುನ್ನಾ ದಿನ ವರಿಗೆ ಬೇಕಾದಂತಹ ಎಲ್ಲಾ ವಸ್ತುಗಳನ್ನು ಕೊಟ್ಟು ಮಾರಾಟಕ್ಕೆ ನಿಲ್ಲಿಸಲಾಗುತ್ತದೆ. ಇಲ್ಲಿ ನವಯುವಕರು ಬಂದು ತಮಗೆ ಇಷ್ಟವಾದ ಹೆಣ್ಣನ್ನು ದುಬಾರಿ ಮೌಲ್ಯ ಕೊಟ್ಟು ಖರೀದಿ ಮಾಡಿ ಮದುವೆ ಆಗುತ್ತಾರೆ.
ಈ ಜನಾಂಗದ ಹೆಣ್ಣು ಮಕ್ಕಳ ಮದುವೆ ಈ ರೀತಿ ಸಂತೆಯಲ್ಲಿ ಮಾರಾಟ ಮಾಡುವ ಮೂಲಕ ಮಾಡಲಾಗುತ್ತದೆ. ಈ ಕಲೆಂಜಿ ಜನಾಂಗವು ಯುರೋಪಿಗೆ 12 ಹಾಗೂ 14ನೇ ಶತಮಾನದಲ್ಲಿ ವಲಸೆ ಬಂದವರು ಇದೀಗ ಈ ಜನಾಂಗವು ಅಲ್ಲಿ ಕೇವಲ 4 ರಿಂದ 5 ಶೇಖಡಾದಷ್ಟು ಮಾತ್ರ ಇದೆ. ಅದೇ ರೀತಿ ಇರುವ ಹೆಣ್ಣು ಮಕ್ಕಳು ಕೂಡ ಈಗಿನ ಆಧುನಿಕತೆಗೆ ತಕ್ಕನಾಗಿ ಬದಲಾಗಿ ತಮಗಿಷ್ಟವಾದ ಹುಡುಗನನ್ನು ಸಂತೆಗೆ ಬರಲು ಹೇಳಿ ಅವರಿಂದಲೇ ಬಿಡ್ ಮಾಡಿಸಿಕೊಂಡು ಮದುವೆ ಆಗುತ್ತಿದ್ದಾರೆ. ಆದರೆ ಅದೇನೇ ಇರಲಿ ಹೆಣ್ಣನ್ನು ಈ ರೀತಿಯಾಗಿ ಮಾರಾಟದ ವಸ್ತುವಾಗಿ ನೋಡಿಕೊಳ್ಳುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಇಂತಹ ಸಂಪ್ರದಾಯ ಇಂದಿಗೂ ಜೀವಂತವಾಗಿ ಕಾಣಬಹುದಾಗಿದೆ. 2016ರಲ್ಲಿ ಈ ಕುರಿತು ಡೇಕುಮೆಂಟ್ರಿ ಕೂಡಾ ಆಗಿತ್ತು. ಇದೀಗ ಇದು ಒಂದು ಜನಾಂಗದ ಸಂಪ್ರದಾಯವಾಗಿ ಬೆಳೆದುಬಂದಿದೆ. ಇದನ್ನು ಬ್ಯಾನ್ ಮಾಡಿದ್ರೆ ಕಲೇಜಿಯಾ ಜನಾಂಗದ ಸಂಪ್ರದಾಯಕ್ಕೆ ಪೆಟ್ಟು ಬೀಳುತ್ತದೆ ಎಂದು ಇಲ್ಲಿಯ ಕಾನೂನುಗಳು ಕೂಡ ಸೈಲೆಂಟ್ ಆಗಿರಬಹುದು. ಅದೇನೇ ಆಗಲಿ ಯುವತಿಯರಿಗೂ ಶಿಕ್ಷಣ ಸಿಗಬೇಕು. ಜೀವನ ಸಂಗತಿಯನ್ನು ಆಯ್ದುಕೊಳ್ಳಲು ಅವಕಾಶ ಕಲ್ಪಿಸಬೇಕು. ಈ ಕೆಟ್ಟದಾದ ಸಂಪ್ರದಾಯ ಹೋಗಬೇಕು. ಇದಕೆಲ್ಲ ಯುರೋಪ್ ಮೊದಲು ಶಿಕ್ಷಣಕ್ಕೆ ಹೆಚ್ಚಿನ ವತ್ತು ನೀಡಬೇಕಿದೆ. ಆಗ ಮಾತ್ರ ಇಂತಹ ಕೆಟ್ಟದಾದ ಸಂಪ್ರದಾಯ ಹೋಗಲಾಡಿಸಬಹುದು.