Girls love: ಹುಡುಗಿ ಮತ್ತು ಹುಡುಗ ಪ್ರೀತಿ ಮಾಡುವುದು ತುಂಬಾ ಸಹಜ. ಅದೇನೂ ವಿಶೇಷವಲ್ಲ. ಆದರೆ ಹುಡುಗಿಯರು ಹುಡುಗರನ್ನು ಇಷ್ಟ ಪಡುವ ಮೊದಲು ಹುಡುಗರನ್ನು ಕೆಲವು ವಿಷಯಗಳಲ್ಲಿ ಗಮನಿಸುತ್ತಾರೆ. ಹಾಗೆಯೇ ಹುಡುಗರು ಸಹ ಹುಡುಗಿಯರಲ್ಲಿ ಕೆಲವು ವಿಷಯಗಳನ್ನು ಗಮನಿಸುತ್ತಾರೆ. ಆದರೆ ನಾವು ಇಲ್ಲಿ ಹುಡುಗಿಯರು ಹುಡುಗರಲ್ಲಿ ಇಷ್ಟ ಪಡುವ ಐದು ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊದಲನೆಯದು ಬಟ್ಟೆ ಧರಿಸುವ ರೀತಿಯಾಗಿದೆ. ಹುಡುಗಿಯರು ಮೊದಲು ಹುಡುಗರಲ್ಲಿ ಬಟ್ಟೆ ಧರಿಸುವ ರೀತಿಯನ್ನು ನೋಡುತ್ತಾರೆ. ಹುಡುಗರು ಹೆಚ್ಚು ದುಬಾರಿಯ ಬಟ್ಟೆಯನ್ನು ಧರಿಸಬೇಕು ಎನ್ನುವುದು ಇದರ ಅರ್ಥವಲ್ಲ. ಹಾಕುವ ಬಟ್ಟೆ ಅವರಿಗೆ ಒಪ್ಪುವ ಹಾಗೆ ಇರಬೇಕು. ಸರಿಯಾಗಿ ಫಿಟ್ ಇರುವ ಬಟ್ಟೆ ಧರಿಸಬೇಕು.
ಎರಡನೆಯದು ಮುಖದ ಹಾವಭಾವಗಳು. ಹುಡುಗಿಯರು ಮೊದಲ ಬಾರಿ ನೋಡಿದಾಗ ಮುಖದ ಹಾವಭಾವಗಳನ್ನು ಗಮನಿಸುತ್ತಾರೆ. ಯಾವಾಗಲೂ ಸಂತೋಷವಾಗಿ ಇರುವಂತೆ ಮುಖದ ಹಾವಭಾವಗಳು ಇರಬೇಕು.
ಮೂರನೆಯದು ಹೇರ್ ಸ್ಟೈಲ್. ಹುಡುಗಿಯರು ಮೊದಲ ಬಾರಿ ನೋಡಿದಾಗ ಹುಡುಗರ ಹೇರ್ ಸ್ಟೈಲ್ ನೋಡುತ್ತಾರೆ. ಹಾಗಾಗಿ ಮೊದಲು ಭೇಟಿಗೆ ಹೊರಟಾಗ ಒಂದು ಸುಂದರವಾದ ಹೇರ್ ಸ್ಟೈಲ್ ಮಾಡಿಕೊಂಡು ಹೋಗಬೇಕು.
ನಾಲ್ಕನೆಯದು ಬಾಡಿ ಲಾಂಗ್ವೇಜ್. ಹುಡುಗಿಯರು ಮೊದಲ ಬಾರಿ ನೋಡಿದಾಗ ಹುಡುಗರು ಹೇಗೆ ನಡೆಯುತ್ತಾರೆ, ಹುಡುಗರು ಹೇಗೆ ಕುಳಿತುಕೊಳ್ಳುತ್ತಾರೆ, ಮಾತನಾಡುವ ಪದ್ಧತಿ ಯಾವ ರೀತಿಯಲ್ಲಿ ಇರುತ್ತದೆ ಇವೆಲ್ಲವನ್ನೂ ಗಮನಿಸುತ್ತಾರೆ.
ಐದನೆಯ ವಿಷಯ ಎಂದರೆ ಅದು ಎತ್ತರ. ಹುಡುಗಿಯರು ಮೊದಲ ಬಾರಿ ನೋಡಿದಾಗ ಹುಡುಗರ ಎತ್ತರವನ್ನು ನೋಡುತ್ತಾರೆ. ಆದರೆ ಎತ್ತರದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇದು ದೇವರು ಕೊಟ್ಟ ಉಡುಗೊರೆ ಆಗಿದೆ. ಹೆಚ್ಚಾಗಿ ಹುಡುಗಿಯರು ತುಂಬಾ ಎತ್ತರವಿರುವ ಮತ್ತು ತುಂಬಾ ಕುಳ್ಳ ಇರುವ ಹುಡುಗರನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆ.