ಅಡುಗೆಗೆ ಬಳಸುವಂತ ಶುಂಠಿ ಹತ್ತಾರು ರೋಗಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ, ಅಡುಗೆಯ ರುಚಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ದೇಹಕ್ಕೆ ಬೇಕಾಗಿರುವಂತ ಹಲವು ಪೌಷ್ಟಿಕಾಂಶವನ್ನು ನೀಡುತ್ತದೆ. ಶುಂಠಿ ಹೇಗೆಲ್ಲ ಉಪಯೋಗಕಾರಿ ಅನ್ನೋದನ್ನ ಈ ಮೂಲಕ ತಿಳಿಯುವುದಾದರೆ ಮೊದಲನೆಯದಾಗಿ ಮಹಿಳೆಯರಲ್ಲಿ ಋತು ಸ್ರಾವ ಸಮಸ್ಯೆಯನ್ನು ನಿವಾರಿಸುವಲ್ಲಿ ಶುಂಠಿ ಸಹಕಾರಿ ಹೇಗೆ ಅಂದ್ರೆ ಒಂದು ಸಣ್ಣ ತುಂಡು ಹಸಿ ಶುಂಠಿಯನ್ನು ಒಂದು ಬಟ್ಟಲು ನೀರಿನಲ್ಲಿ ೧೫ ನಿಮಿಷ ಕುದಿಸಿ, ಸ್ವಲ್ಪ ಸಕ್ಕರೆ ಹಾಕಿ ದಿನಕ್ಕೆ ೩ ಬಾರಿ ಆಹಾರ ಸೇವನೆ ಮಾಡಿದರೆ ಋತುಸ್ರಾವದ ತೊಂದರೆಗಳಿಗೆ ಪರಿಹಾರ ಕಾಣಬಹುದಾಗಿದೆ.
ಕೆಮ್ಮು ಸಮಸ್ಯೆಗೆ ಶುಂಠಿ ಹೇಗೆ ಪರಿಹಾರ ನೀಡುತ್ತದೆ ಅನ್ನೋದನ್ನ ತಿಳಿಯುವುದಾದರೆ, ಬೆಣ್ಣೆಯೊಡನೆ ಸೇವಿಸಿದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ. ಶುಂಠಿಯನ್ನು ಜಜ್ಜಿ ರಸ ತೆಗೆದು, ಒಂದು ಚಮಚ ತಾಜಾ ರಸಕ್ಕೆ ಜೇನುತುಪ್ಪ ಬೆರೆಸಿ ದಿನಕ್ಕೆ ಮೂರು ಸಲ ಸೇವಿಸಿದರೆ ಕೆಮ್ಮು ಇಲ್ಲದಂತಾಗುತ್ತದೆ. ಅಷ್ಟೇ ಅಲ್ಲದೆ ಅಜೀರ್ಣತೆ ಸಮಸ್ಯೆ ಏನಾದ್ರು ನಿಮ್ಮಲ್ಲಿ ಕಾಡುತ್ತಿದ್ದರೆ ಒಂದು ಚಮಚ ಹಸಿ ಶುಂಠಿ ರಸಕ್ಕೆ ಒಂದು ಚಮಚ ನಿಂಬೆ ರಸ, ಒಂದು ಚಿಟಿಕೆ ಉಪ್ಪು ಬೆರೆಸಿ, ನೀವು ಊಟ ಮಾಡಿದ ನಂತರ ಇದನ್ನು ಸೇವಿಸಿದರೆ ಅಜೀರ್ಣತೆ ಕಾಡೋದಿಲ್ಲ.
ಶೀತ ನೆಗಡಿ ನಿವಾರಣೆಗೆ ಶುಂಠಿ ಶುಂಠಿ ರಸ ಮತ್ತು ಜೇನುತುಪ್ಪಗಳನ್ನು ತೆಗೆದುಕೊಳ್ಳುವುದರಿಂದ ಶೀತ ನೆಗಡಿ ಅಜೀರ್ಣಗಳು ದೂರಾಗುತ್ತವೆ. ಸಕ್ಕರೆ ರೋಗವುಳ್ಳವರು ಜೇನು ತುಪ್ಪಕ್ಕೆ ಬದಲಾಗಿ ಸೈಂಧವ ಲವಣ ವನ್ನು ಉಪಯೋಗಿಸಬಹುದು. ಹೀಗೆ ಹತ್ತಾರು ಲಾಭಗಳನ್ನು ಶುಂಠಿಯಿಂದ ಪಡೆಯಬಹುದಾಗಿದೆ.