ಗಾಯತ್ರಿ ಮಂತ್ರವನ್ನು ಯಾಕೆ ಪಠಿಸಬೇಕು ಇದರಿಂದ ಏನು ಲಾಭವಿದೆ ಗೊತ್ತೇ

0 222

ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಪ್ರತಿನಿತ್ಯ ಅನೇಕ ಮಂತ್ರಗಳನ್ನು ಪಠಿಸುತ್ತೇವೆ ಯಾಕಂದ್ರೆ ನಮ್ಮ ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ನೋಡುವುದಾದರೆ ಮಂತ್ರಗಳಿಗೆ ಇರುವ ಶಕ್ತಿ ಅಪಾರವಾದದ್ದು ಅಸಾಧ್ಯವಾದದ್ದನ್ನು ಸಾಧಿಸುವ ಶಕ್ತಿ ಈ ಮಂತ್ರಗಳಿಗೆ ಇದೆ ಎಂಬುದು ನಮ್ಮ ನಂಬಿಕೆಯಷ್ಟೆ ಅಲ್ಲದೇ ಅದನ್ನು ನಂಬಲೇ ಬೇಕಾದಂತಹ ಉದಾಹರಣೆಗಳನ್ನು ನಾವು ಇಂದಿನ ದಿನಗಳಲ್ಲಿ ನಮ್ಮ ಕಣ್ಣ ಮುಂದೆಯೇ ಕಾಣಬಹುದಾಗಿದೆ, ಜಗತ್ತು ಆಧುನಿಕತೆಯೆಡೆಗೆ ಎಷ್ಟೇ ಮುಂದುವರೆದರೂ ಕೂಡಾ ನಮ್ಮ ಹಿಂದೂ ಧರ್ಮದ ಮಂತ್ರಗಳು ನೀಡುವ ಶಕ್ತಿಯನ್ನು ಯಾವ ವಿಜ್ಞಾನವೂ ಯಾವ ವಿಜ್ಞಾನಿಗಳೂ ನೀಡಲಾಗುವುದಿಲ್ಲ.

ಬಹಳ ಹಿಂದಿನ ಕಾಲದಲ್ಲಿ ನಾವು ನೋಡುವುದಾದರೆ ಎಲ್ಲ ಮಂತ್ರಗಳನ್ನು ಗುರುಕುಲಗಳಲ್ಲಿ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಉಪದೇಶ ಮಾಡಿಸಲಾಗುತ್ತಿತ್ತು ಆದರೆ ಇಂದಿನ ದಿನಗಳಲ್ಲಿ ನೋಡೋಣವೆಂದರೂ ಸಹ ಒಂದೂ ಗುರುಕುಲಗಳು ಸಿಗುವುದಿಲ್ಲ, ಆದರೆ ಎಲ್ಲಾ ಶಾಲೆಗಳಲ್ಲಿಯೂ ಸಹ ಸಾಮಾನ್ಯವಾಗಿ ಸರಸ್ವತಿ ಮಂತ್ರ ಕರ ಮಂತ್ರ ಗಾಯತ್ರಿ ಮಂತ್ರ ಗುರು ಮಂತ್ರ ಸೇರಿದಂತೆ ಹೀಗೆ ಕೆಲವೊಂದು ಮಂತ್ರಗಳನ್ನು ಅವಶ್ಯಕವಾಗಿ ಮಕ್ಕಳಿಗೆ ಕಲಿಸಿರುತ್ತಾರೆ.

ಅಷ್ಟೇ ಅಲ್ಲದೇ ಎಲ್ಲಾ ಮಂತ್ರಗಳಿಗೂ ಮಿಗಿಲಾಗಿ ಗಾಯತ್ರಿ ಮಂತ್ರಕ್ಕೆ ನಾವು ವಿಶೇಷ ಮಹತ್ವವನ್ನು ಕೊಟ್ಟಿದ್ದೇವೆ ಯಾಕಂದ್ರೆ ಈ ಮಂತ್ರದಲ್ಲಿ ಬರುವ ಎಲ್ಲಾ ವೇದಗಳು ಬ್ರಹ್ಮನ ಮುಖೇನ ಹೊರಹೊಮ್ಮಿದವು ಎಂಬುದನ್ನು ನಮ್ಮ ಪುರಾಣಗಳು ಸ್ಪಷ್ಟವಾಗಿ ಹೇಳುತ್ತವೆ, ಗಾಯತ್ರಿ ಮಂತ್ರವನ್ನು ಯಾಕೆ ನಾವು ಪಠಿಸಬೇಕು ಎಂಬುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನೀಡುತ್ತೇವೆ ಬನ್ನಿ.

ಗಾಯತ್ರಿ ಮಂತ್ರವು ಹಿಂದೂ ಧರ್ಮದ ಅತೀ ಶ್ರೇಷ್ಠ ಮಂತ್ರಗಳಲ್ಲಿ ಒಂದಾಗಿದ್ದು ಈ ಮಂತ್ರವನ್ನು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಪಠಣೆ ಮಾಡುವುದರಿಂದ ಮುಕ್ಕೋಟಿ ದೇವತೆಗಳನ್ನು ಪ್ರಸನ್ನ ಗೊಳಿಸಬಹುದು, ಅಷ್ಟೇ ಅಲ್ಲದೇ ಮಾನಸಿಕವಾಗಿ ನೆಮ್ಮದಿ ಮತ್ತು ದೈಹಿಕವಾಗಿ ಉತ್ತಮವಾದ ಆರೋಗ್ಯವನ್ನು ಪಡೆದುಕೊಳ್ಳಬಹುದು ಇನ್ನು ಉಪನಯನ ಸಂಸ್ಕಾರ ಮಾಡಿಸಿಕೊಳ್ಳುವ ಮಗುವಿಗೆ ಈ ಮಂತ್ರವನ್ನು ಉಪದೇಶ ಮಾಡುವುದರಿಂದ ಆ ಮಗುವು ವಿಪ್ರನಾಗುತ್ತಾನೆ.

ನಾವು ಮೊದಲೇ ಹೇಳಿರುವಂತೆ ಗಾಯತ್ರಿ ಮಂತ್ರವು ಸಕಲ ವೇದಗಳ ಸಾರವಾದದ್ದು ಮತ್ತು ಪರಬ್ರಹ್ಮ ಸ್ವರೂಪ ಎಂದು ಮನುಸ್ಮೃತಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ ಸಂಧ್ಯಾಕಾಲಗಳಲ್ಲಿ ಈ ಪವಿತ್ರ ಮಂತ್ರವನ್ನು ಜಪ ಮಾಡುವುದರಿಂದ ಸಾವಿರ ಪುಣ್ಯದ ಫಲಗಳು ಲಭಿಸುತ್ತವಲ್ಲದೆ ನಿಮ್ಮ ಪೂರ್ವ ಜನ್ಮದ ಪಾಪ ಕರ್ಮಗಳು ನಶಿಸಿ ಹೋಗುತ್ತವೆ, ಅಲ್ಲದೆ ವೈದಿಕ ಕಾಲದಿಂದಲೂ ಗಾಯತ್ರಿ ಮಂತ್ರವು ಯಾವುದೇ ಜಾತಿ ವರ್ಗಕ್ಕೆ ಅಥವಾ ಲಿಂಗಕ್ಕೆ ಸೀಮಿತವಾಗಿಲ್ಲದ ಕಾರಣ ಯಾರು ಬೇಕಾದರೂ ಈ ಪವಿತ್ರ ಮಂತ್ರವನ್ನು ಪಠಣೆ ಮಾಡಬಹುದೆಂಬುದು ಅನೇಕ ಧರ್ಮ ಶಾಸ್ತ್ರಜ್ಞರ ಮಾತಾಗಿದೆ.

ವಿಶ್ವಾಮಿತ್ರರ ಪ್ರಕಾರ ಗಾಯತ್ರಿ ಮಂತ್ರಕ್ಕೆ ಸಮನಾದ ಮಂತ್ರ ವೇದಗಳಲ್ಲಿ ಮತ್ತೊಂದಿಲ್ಲ ಅಲ್ಲದೆ ಭಗವಾನ್ ಮನು ಹೇಳುವಂತೆ ಗಾಯತ್ರಿ ಮಂತ್ರದ ಮೂರು ಚರಣಗಳಲ್ಲಿ ಮೂರು ವೇದಗಳ ಸಾರವನ್ನು ಬ್ರಹ್ಮ ದೇವನು ತುಂಬಿಸಿಕೊಟ್ಟಿರುವನಂತೆ ಗಾಯತ್ರಿ ಮಂತ್ರವನ್ನು ಅಲ್ಲಗಳೆದು ಬೇರೆ ಮಂತ್ರಗಳನ್ನು ಪಠಿಸುವವರು ಪಕ್ವಾನ್ನವನ್ನು ಬಿಟ್ಟು ಬಿಕ್ಷೆಯನ್ನು ಸ್ವೀಕರಿಸುವ ಮೂರ್ಖರಿಗೆ ಸಮ ದಿನದಲ್ಲಿ 108 ಬಾರಿ ಈ ಗಾಯತ್ರಿ ಮಂತ್ರವನ್ನು ಪಠಣೆ ಮಾಡುವುದರಿಂದ ವಿದ್ಯಾರ್ಥಿಗಳ ಸ್ಮರಣ ಶಕ್ತಿ ಹೆಚ್ಚಾಗುತ್ತದೆ, ಎಂದು ಪುರಾಣದ ಶಾಸ್ತ್ರಗಳಲ್ಲಿ ಸ್ಪಷ್ಟ ಉಲ್ಲೇಖವಿದೆ ಆದ್ದರಿಂದ ಗಾಯತ್ರಿ ಮಂತ್ರವನ್ನು ನಿಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಪಠಿಸುವುದು ಒಳಿತು.

Leave A Reply

Your email address will not be published.