ಇತ್ತೀಚಿನ ದಿನಗಳಲ್ಲಿ ನಾವು ತಿನ್ನುವ ಆಹಾರ ಪದಾರ್ಥಗಳು ಮತ್ತು ಒತ್ತಡದ ಜೀವನದಿಂದಾಗಿ ದೇಹದಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಇವುಗಳಲ್ಲಿ ಹೆಚ್ಚಿನದಾಗಿ ಅನುಭವಿಸುತ್ತಿರುವ ಸಮಸ್ಯೆಗಳಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಒಂದು. ಹಾಗಾಗಿ ಗ್ಯಾಸ್ ಟ್ರಬಲ್ ಮತ್ತು ಎಸಿಡಿಟಿ ತಕ್ಷಣ ಕಡಿಮೆಯಾಗುವುದಕ್ಕೆ ನಾವಿಂದು ನಿಮಗೆ ಒಂದು ಮನೆಮದ್ದನ್ನು ತಿಳಿಸಿ ಕೊಡುತ್ತೇವೆ.

ಜೊತೆಗೆ ಈ ಟಿಪ್ಸ್ ಗಳನ್ನು ನೀವು ಪಾಲಿಸಿದರೆ ಅಸಿಡಿಟಿ ಸಮಸ್ಯೆ ಜೀವನದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗಾದರೆ ಅಸಿಡಿಟಿ ಉಂಟಾಗುವುದಕ್ಕೆ ಕಾರಣ ಏನು ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ತಿಂದ ಆಹಾರ ಜೀರ್ಣ ಆಗಲು ಹೈಡ್ರೋಕ್ಲೋರಿಕ್ ಆಸಿಡ್ ಎನ್ನುವ ಆಸಿಡ್ ಬೇಕಾಗುತ್ತದೆ. ಕೆಲವೊಮ್ಮೆ ಕೆಲವೊಂದು ಕಾರಣಗಳಿಂದ ಹೈಡ್ರೋಕ್ಲೋರಿಕ್ ಆಸಿಡ್ ತುಂಬಾ ಜಾಸ್ತಿ ಆಗುತ್ತದೆ ಆಗ ಅಸಿಡಿಟಿ ಅಥವಾ ಗ್ಯಾಸ್ಟ್ರಬಲ್ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಅಜೀರ್ಣವಾಗುತ್ತದೆ.

ಆಗ ಹೊಟ್ಟೆನೋವು ವಾಂತಿ ತಲೆಸುತ್ತು ಎದೆ ಉರಿ ಬರುತ್ತದೆ ಊಟ ಆದ ತಕ್ಷಣ ಹೊಟ್ಟೆ ಭಾರ ಆಗುತ್ತದೆ ಹುಳಿತೇಗು ಬರುತ್ತದೆ. ಪದೇಪದೇ ತೇಗು ಬರುತ್ತದೆ ಜೊತೆಗೆ ಹೊಟ್ಟೆ ಉಬ್ಬರಿಸುತ್ತದೆ ಕೆಲವೊಮ್ಮೆ ಕೇಟ್ಟ ವಾಸನೆ ಬಾಯಿಯಿಂದ ಬರುತ್ತದೆ. ಅಸಿಡಿಟಿ ಉಂಟಾಗುವುದಕ್ಕೆ ಇನ್ನೊಂದು ಕಾರಣ ಸರಿಯಾಗಿ ನಿದ್ದೆ ಮಾಡದಿರುವುದು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡದೆ ರಾತ್ರಿಯೆಲ್ಲಾ ಎಚ್ಚರ ವಿರುವುದು ಹಾಗೂ ಹಗಲು ನಿದ್ದೆ ಮಾಡುವುದರಿಂದ ಗ್ಯಾಸ್ಟ್ರಿಕ್ ಆಗುವ ಸಾಧ್ಯತೆ ಇದೆ.

ತುಂಬಾ ಒತ್ತಡದ ಕೆಲಸವನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಿರುವವರು ಮತ್ತು ತುಂಬಾ ಚಿಂತಿಸುತ್ತಿರುವವರಿಗೆ ಗ್ಯಾಸ್ಟ್ರಿಕ್ ಆಗುವ ಸಾಧ್ಯತೆ ಇರುತ್ತದೆ. ತುಂಬಾ ಊಟ ಮಾಡುವುದು ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವುದು ಮತ್ತು ಊಟದ ಪ್ರಮಾಣ ಮತ್ತು ಗುಣಮಟ್ಟದ ಸರಿಯಾಗಿಲ್ಲದಿದ್ದರೆ ಅಥವಾ ಖಾರವಾದ ಪದಾರ್ಥ ಸೇವನೆ ಎಣ್ಣೆಯಲ್ಲಿ ಕರಿದ ಪದಾರ್ಥ ಸೇವನೆ ಇನ್ನೂ ಹಲವಾರು ಕಾರಣಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆ ಆಗುತ್ತದೆ.

ಹಾಗಾದರೆ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಪಡಿಸುವುದಕ್ಕೆ ಯಾವ ರೀತಿಯಾಗಿ ಮನೆಮದ್ದನ್ನು ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಮೊದಲನೆಯದಾಗಿ ಶುಂಠಿಯನ್ನು ತೆಗೆದುಕೊಂಡು ಅದನ್ನು ತುರಿದು ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಎರಡು ಚಮಚ ಹಾಕಿ ಚಿಕ್ಕ ನಿಂಬೆ ಹಣ್ಣಿನ ತುಂಡನ್ನು ಅಥವಾ ಎರಡರಿಂದ ಮೂರು ಹನಿ ನಿಂಬೆಹಣ್ಣಿನ ರಸವನ್ನು ಹಾಕಿ ಹತ್ತರಿಂದ ಹದಿನೈದು ನಿಮಿಷ ಹಾಗೆ ಮುಚ್ಚಿಡಬೇಕು ನಂತರ ಅದನ್ನು ಸೋಸಿ ಜೇನುತುಪ್ಪ ಅಥವಾ ಬೆಲ್ಲದ ಜೊತೆ ಮಿಶ್ರಣ ಮಾಡಿ ಕುಡಿಯಬಹುದು.

ಇದನ್ನು ಯಾವ ಪ್ರಮಾಣದಲ್ಲಿ ಹಾಗೂ ಯಾವ ಸಮಯದಲ್ಲಿ ತೆಗೆದುಕೊಳ್ಳಬೇಕು ಎಂದರೆ ಚಿಕ್ಕ ಮಕ್ಕಳಿಗಾದರೆ ಎರಡು ಚಮಚವನ್ನು ದೊಡ್ಡವರು ಅರ್ಧ ಲೋಟವನ್ನು ಸೇವಿಸಬಹುದು ಇದನ್ನು ಬೆಳಿಗ್ಗೆ ತಿಂಡಿಯಾದ ನಂತರ ಮತ್ತು ರಾತ್ರಿ ಊಟದ ನಂತರ ಅರ್ಧ ಲೋಟ ಕುಡಿಯಬೇಕು. ಈ ರೀತಿ ದಿನಕ್ಕೆ ಎರಡು ಬಾರಿ ಸೇವಿಸಬೇಕು ಶುಂಠಿಯನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿ ಆಗುತ್ತದೆ.

ಎರಡನೆಯದಾಗಿ ಎರಡು ಚಮಚ ಜೀರಿಗೆ ತೆಗೆದುಕೊಳ್ಳಬೇಕು ಜೀರಿಗೆ ತಿಂದ ಆಹಾರ ಜೀರ್ಣ ಮಾಡುವುದರ ಜೊತೆಗೆ ತಿಂದ ಆಹಾರವನ್ನು ಕೊಬ್ಬಾಗಿ ಪರಿವರ್ತನೆ ಮಾಡಲು ಬಿಡುವುದಿಲ್ಲ ಜೊತೆಗೆ ಓಮಿನ ಕಾಳು ಅಥವಾ ಅಜ್ವಾನ ಗ್ಯಾಸ್ಟ್ರಿಕ್ಗೆ ತುಂಬಾನೇ ಸಹಾಯಕಾರಿ. ಪದೇಪದೇ ಆಹಾರ ತಿಂದಾಗ ಗ್ಯಾಸ್ ಆಗುವುದು ಹುಳಿ ತೇಗು ಬರುವುದು ಹೊಟ್ಟೆ ಉಬ್ಬರಿಸುವಿಕೆ ವಾಕರಿಕೆ ಊಟ ಸೇರದೇ ಇರುವುದು ಇಂತಹ ಸಮಸ್ಯೆಗಳಿಗೆ ಓಮಿನ ಕಾಳು ತುಂಬಾ ಸಹಾಯಕ.

ಎರಡು ಚಮಚ ಓಮಿನ ಕಾಳು ಎರಡು ಚಮಚ ಜೀರಿಗೆಯನ್ನು ಸೇರಿಸಿ ಮಿಶ್ರಣಮಾಡಿ ಪುಡಿ ಮಾಡಬೇಕು. ಗ್ಯಾಸ್ಟ್ರಿಕ್ ಆದಾಗ ಇದನ್ನು ಊಟಕ್ಕಿಂತ ಮೊದಲು ತೆಗೆದುಕೊಳ್ಳಬೇಕು. ಮಕ್ಕಳಾದರೆ ಊಟದ ಮೊದಲು ಕಾಲು ಚಮಚ ದೊಡ್ಡವರಾದರೆ ಊಟದ ಮೊದಲು ಒಂದು ಚಮಚ ತೆಗೆದುಕೊಳ್ಳಬೇಕು ನೀರಿನ ಜೊತೆ ಮಿಶ್ರಣ ಮಾಡಿ ಅಥವಾ ಹಾಗೆಯೇ ನೇರವಾಗಿಯೂ ಕೂಡ ಸೇವನೆ ಮಾಡಬಹುದು.

ಜೊತೆಗೆ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಹೆಚ್ಚು ನೀರನ್ನು ಸೇವನೆ ಮಾಡಬೇಕು. ನಾವು ತಿನ್ನುವ ಆಹಾರವನ್ನು ಸಮಾಧಾನದಿಂದ ಜೊತೆಗೆ ಚೆನ್ನಾಗಿ ಅಗಿದು ನಿಧಾನವಾಗಿ ಸೇವನೆ ಮಾಡಬೇಕು ಆಗ ಮಾತ್ರ ತಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥ ಅಥವಾ ಜಂಕ್ ಫುಡ್ ಅನ್ನು ಜಾಸ್ತಿ ಸೇವನೆ ಮಾಡಬಾರದು ಅಪರೂಪಕ್ಕೆ ತಿಂದರೆ ಯಾವುದೇ ತೊಂದರೆ ಇಲ್ಲ. ತುಂಬಾ ಜನರಿಗೆ ಗ್ಯಾಸ್ಟ್ರಿಕ್ ಆಗಲು ಮುಖ್ಯ ಕಾರಣ ಅವರ ಮನಸ್ಥಿತಿ ಸರಿ ಇಲ್ಲದೆ ಇರುವುದು ತುಂಬಾ ಚಿಂತೆ ದುಗುಡ ಮಾಡಿಕೊಂಡರೆ ಗ್ಯಾಸ್ಟ್ರಿಕ್ ಆಗುತ್ತದೆ.

ಜೊತೆಗೆ ಧೂಮಪಾನ ಮತ್ತು ಮದ್ಯಪಾನ ಮಾಡುವವರಿಗೆ ಗ್ಯಾಸ್ಟ್ರಿಕ್ ಪ್ರಮಾಣ ಜಾಸ್ತಿ ಆಗುವ ಸಾಧ್ಯತೆ ಇದೆ. ಊಟ ಮಾಡುವ ಸಮಯ ಪ್ರಮಾಣ ಮತ್ತು ಗುಣಮಟ್ಟದ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳುವುದನ್ನು ರೂಢಿಸಿ ಕಂಡಾಗ ಗ್ಯಾಸ್ಟ್ರಿಕ್ ನಿಂದ ಹೊರಬರಬಹುದು. ನಿಮಗೂ ಕೂಡ ಗ್ಯಾಸ್ಟ್ರಿಕ್ ನ ಸಮಸ್ಯೆ ಇದ್ದರೆ ನಾವು ಮೇಲೆ ತಿಳಿಸಿರುವ ಮನೆಮದ್ದುನ್ನು ತೆಗೆದುಕೊಳ್ಳುವವುದರ ಮೂಲಕವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ದೂರ ಮಾಡಿಕೊಳ್ಳಿರಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!