ಬೆಲೆ ಏರಿಕೆಯಿಂದ ದಿನನಿತ್ಯವು ಸಂಕಷ್ಟದಲ್ಲಿರುವ ಶ್ರೀಸಾಮಾನ್ಯನಿಗೆ ದಿನನಿತ್ಯದ ಬೆಲೆಗಳು ಬೇಸರ ಮೂಡಿಸಿವೆ. ಜೀವನವನ್ನು ನಡೆಸಲು ತೀವ್ರ ಕಷ್ಟವನ್ನು ಅನುಭವಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಬಹುದು ಎಂಬುವುದಕ್ಕೆ ಗ್ಯಾಸ್ ಬೆಲೆಯಲ್ಲಿ ಮತ್ತೆ ಬದಲಾವಣೆ ಆಗಲಿದೆ ಎಂಬ ವರದಿಗಳು ಕೇಳಿ ಬರುತ್ತಿವೆ.
ಹೌದು ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಎಲ್ಪಿಜಿ ಸಿಲಿಂಡರ್ ಬೆಲೆಯಿಂದ ಪರಿಹಾರ ಕಂಡು ಬರುತ್ತಿದೆ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಮರುಪ್ರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಈ ಪರಿಹಾರವನ್ನು ಜಾರಿಗೆ ತಂದರೆ ನಂತರ ಸಿಲಿಂಡರ್ ಕೇವಲ 587 ರೂ.ಗೆ ಒಂದು ಸಿಲಿಂಡರ್ ಸಿಗಲಿದೆ ಎಂಬ ಮಾತುಗಳು ಸಾರ್ವಜನಿಕರಿಗೆ ಸಿಹಿ ಸುದ್ದಿ ಎಂಬಂತೆ ಕೇಳಿ ಬರುತ್ತಿದೆ.
LPG ಸಿಲಿಂಡರ್ಗಳ ಬೆಲೆಯಲ್ಲಿ ಇಳಿಕೆಯಾಗಿರುವುದು ಜನಸಾಮಾನ್ಯರಿಗೆ ನೆಮ್ಮದಿ ತರಬಹುದು. ಪ್ರಸ್ತುತ, ಏರುತ್ತಿರುವ ಹಣದುಬ್ಬರವು ಶ್ರೀಸಾಮಾನ್ಯರ ಮನೆಯ ಬಜೆಟ್ ಹಾಳು ಮಾಡಿದೆ. ಒಂದೆಡೆ ಹೆಚ್ಚಿದ ಡೀಸೆಲ್, ಪೆಟ್ರೋಲ್ ಬೆಲೆಯಿಂದ ಎಲ್ಲವೂ ಗಗನ ಮುಟ್ಟಲಾರಂಭಿಸಿದ್ದರೆ, ಸಿಲಿಂಡರ್ ಬೆಲೆ ಮನೆಗಳ ಬಜೆಟ್ನ್ನು ಹಾಳು ಮಾಡಿದೆ. ಇತ್ತೀಚಿನ ದಿನಗಳಲ್ಲಿ, ಅಡುಗೆಮನೆಯ ಪ್ರಮುಖ ಅವಶ್ಯಕತೆಯೆಂದರೆ ಗ್ಯಾಸ್ ಸಿಲಿಂಡರ್ ಗ್ಯಾಸ್ ಇಲ್ಲದೆ ಆಹಾರವನ್ನು ತಯಾರಿಸಲಾಗುವುದಿಲ್ಲ. ದೇಶದ ಬಡ ಕುಟುಂಬಗಳಿಗೆ ಸರ್ಕಾರ ಉಚಿತ ಗ್ಯಾಸ್ ಸಂಗ್ರಹಣೆ ಮತ್ತು ಸಿಲಿಂಡರ್ಗಳನ್ನು ನೀಡಿತ್ತು. ಆದರೆ ಸಿಲಿಂಡರ್ ಬೆಲೆ ಏರಿಕೆಯಿಂದ ಜನರಿಗೆ ಸಿಲಿಂಡರ್ ತುಂಬಲು ಸಾಧ್ಯವಾಗುತ್ತಿಲ್ಲ.
ದೇಶದಲ್ಲಿ, ಪೆಟ್ರೋಲಿಯಂ ಕಂಪನಿಯು ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸುತ್ತಲೇ ಇತ್ತು ಮತ್ತು ಕರೋನಾ ಸಮಯದಲ್ಲಿ, ಸರ್ಕಾರವು ಸಹ ಸಬ್ಸಿಡಿಯನ್ನು ನಿಲ್ಲಿಸಿತು. ಕೇಂದ್ರ ಸರ್ಕಾರ ಈಗ ಮತ್ತೆ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಮರುಸ್ಥಾಪಿಸಲು ಹೊರಟಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪ್ರಸ್ತಾವನೆಯನ್ನೂ ಸಿದ್ಧಪಡಿಸಲಾಗಿದ್ದು, ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗಿದೆ. ಇದರ ಅಡಿಯಲ್ಲಿ ಜಾರ್ಖಂಡ್, ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಎಲ್ಪಿಜಿಗೆ ಸಬ್ಸಿಡಿಯನ್ನು ನೀಡುವುದರ ಜೊತೆಗೆ ದೇಶದ ಇತರ ರಾಜ್ಯಗಳಲ್ಲಿ ಇದನ್ನು ಜಾರಿಗೆ ತರಲು ಚಿಂತಿಸಲಾಗುತ್ತಿದೆ.
ಈ ಪ್ರಸ್ತಾವನೆಗೆ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದರೆ, ಕೇಂದ್ರ ಸರ್ಕಾರ ಪೆಟ್ರೋಲಿಯಂ ಕಂಪನಿಗಳಿಗೆ 303 ರೂ. ಸಬ್ಸಿಡಿ ನೀಡಬೇಕಾಗುತ್ತದೆ. ಇದರೊಂದಿಗೆ ಗ್ರಾಹಕರಿಗೆ ಸಿಗುವ ಗ್ಯಾಸ್ ಸಿಲಿಂಡರ್ 1,100 ರೂ. ಬದಲಾಗಿ 587 ರೂ.ಗೆ ಮಾತ್ರ ಲಭ್ಯವಾಗಲಿದೆ. ನೀವು LPG ಸಿಲಿಂಡರ್ನಲ್ಲಿ ಸಬ್ಸಿಡಿಯನ್ನು ಸಹ ಬಯಸಿದರೆ ನೀವು ಮಾಡಬೇಕಾಗಿರುವುದು ನಿಮ್ಮ ಎಲ್ಪಿಜಿ ಸಂಪರ್ಕವನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡುವುದು ಅಗತ್ಯವಾಗಿದೆ.
ನಿಮ್ಮ ಸಂಪರ್ಕವನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ ನಿಮಗೆ ಸಬ್ಸಿಡಿ ಸಿಗುವುದಿಲ್ಲ. ಆದ್ದರಿಂದ ಶೀಘ್ರದಲ್ಲೇ ನಿಮ್ಮ ಎಲ್ಪಿಜಿಯ ಸಂಪರ್ಕವನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಿಬೇಕು ಒಂದು ವೇಳೆ ಕೇಂದ್ರವು ಸಬ್ಸಿಡಿಯನ್ನು ಮರುಸ್ಥಾಪಿಸಲು ಮುಂದಾದರೆ 303 ರೂ. ಸಬ್ಸಿಡಿಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಎಲ್ಪಿಜಿಯ ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರಿಗೆ ಇಗ್ಯಾಸ್ ಡೀಲರ್ಗಳಿಗೆ 303 ರೂ.ವರೆಗೆ ಸಬ್ಸಿಡಿ ನೀಡುತ್ತಿದೆ ಎಂಬ ಸುದ್ದಿ ಬರುತ್ತಿದೆ. ಮೂಲಗಳ ಪ್ರಕಾರ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಮೇಲೆ 303 ರೂ ಸಬ್ಸಿಡಿಯೊಂದಿಗೆ ಸಿಲಿಂಡರ್ ಈಗ 587 ರೂಗಳಿಗೆ ಸಿಗಲಿದೆ ಆದರೆ ಪ್ರಸ್ತುತ ಸಿಲಿಂಡರ್ ಬೆಲೆ 1100 ರೂ. ಇದೆ
ಇಂತಹ ಪರಿಸ್ಥಿತಿಯಲ್ಲಿ ನೀವು ಸಹ ಗ್ಯಾಸ್ ಸಬ್ಸಿಡಿ ಪಡೆಯಲು ಬಯಸಿದರೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿರುತ್ತದೆ. ಆಧಾರ್ ಲಿಂಕ್ ಮಾಡಿದವರ ಖಾತೆಗೆ ಸರ್ಕಾರ ಸಬ್ಸಿಡಿ ಹಣವನ್ನು ಕಳುಹಿಸಲಿದೆ. ಆಧಾರ್ ಲಿಂಕ್ ಇಲ್ಲದವರಿಗೆ ಸಬ್ಸಿಡಿ ಹಣ ಸಿಗುವುದಿಲ್ಲ. ಖಾತೆಯಲ್ಲಿ ಸಬ್ಸಿಡಿ ಹಣವನ್ನು ಸ್ವೀಕರಿಸಿದ ನಂತರವೇ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ನಿಮಗೆ ತಿಳಿಸಲಾಗುತ್ತದೆ.
ಇನ್ನು ಈ ಪ್ರಸ್ತಾವನೆಗೆ ಒಪ್ಪಿಗೆ ಸಿಗಬೇಕಾದರೆ ಕೇಂದ್ರ ಹಣಕಾಸ ಸಚಿವಾಲದ ಮೇಲೆ ಅವಲಂಬಿತವಾಗಿದೆ. ಒಂದು ವೇಳೆ ಈ ಸಚಿವಾಲಯವು ಒಪ್ಪಿಗೆ ಸೂಚಿಸಿದರೆ ಅಥವಾ ಈ ಪ್ರಸ್ತಾವನೆಗೆ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದರೆ, ಪೆಟ್ರೋಲಿಯಂ ಕಂಪನಿಯ ಡೀಲರ್ಗಳಿಗೆ ಸರ್ಕಾರವು 303 ರೂ. ಸಬ್ಸಿಡಿ ನೀಡಲಿದ್ದು, ಅಷ್ಟೇ ರಿಯಾಯಿತಿ ದೊರೆಯಲಿದೆ. ಎಲ್ಪಿಜಿಯ ಸಿಲಿಂಡರ್ ಮೇಲೆ ತೆಗೆದುಕೊಂಡು ಹೋಗುವ ಗ್ಯಾಸ್ ಸಿಲಿಂಡರ್ 587 ರೂ. ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಹಣ ಜಾಸ್ತಿ ಪಾವತಿಸಿದರೆ ಸಬ್ಸಿಡಿ ಹಣ ಗ್ಯಾಸ್ ಖರೀದಿಸಿದ ನಂತರದ ದಿನಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ.