ಬೆಂಗಳೂರು ನಗರದ ಗಾರ್ಮೆಂಟ್ಸ್ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗಳಿಗೆ 2022ರ ಜನವರಿಯಿಂದ ವನಿತಾ ಸಂಗಾತಿ ಯೋಜನೆಯಡಿ ಉಚಿತ ಬಸ್ ಪಾಸ್ ಒದಗಿಸಲು ಬಿಎಂಟಿಸಿ ನಿರ್ಧರಿಸಿದೆ. ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಗಾರ್ಮೆಂಟ್ಸ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಕಾರ್ಮಿಕರಿಗೆ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವುದು ಹಾಗೂ ಆರ್ಥಿಕವಾಗಿ ನೆರವಾಗುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈ ಕಾರ್ಯಕ್ರಮ ಜಾರಿಯಾದ ಬಳಿಕ ಗಾರ್ಮೆಂಟ್ಸ್ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನೌಕರರು ಪ್ರತಿನಿತ್ಯ ತಮ್ಮ ಕರ್ತವ್ಯ ಖಾಸಗಿ ಬಸ್ಸು, ಆಟೋ ಹಾಗೂ ಇತರೆ ಖಾಸಗಿ ಸಂಸ್ಥೆಯ ವಾಹನಗಳನ್ನು ಅವಲಂಬಿಸುವುದು ತಪ್ಪಲಿದೆ. ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರು ಉಚಿತ ಬಸ್ ಪಾಸ್ ಪಡೆಯುವುದು ಹೇಗೆ? ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಈ ಮೂಲಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ನಗರದ ಗಾರ್ಮೆಂಟ್ಸ್ ಮಹಿಳಾ ನೌಕರರಿಗೆ ಬಂಪರ್ ಗಿಫ್ಟ್ ನೀಡಿದೆ. ಬಿಎಂಟಿಸಿಯಿಂದ ನಗರದ 3 ಲಕ್ಷ ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಉಚಿತ ಬಸ್ ಪಾಸ್ ನೀಡಲಾಗುತ್ತಿದೆ. ವನಿತಾ ಸಂಗಾತಿ ಯೋಜನೆಯ ಅಡಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕರಿಗೆ ಪಾಸ್ ವಿತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ. ಇದು ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬಜೆಟ್ ನಲ್ಲಿ ಉಚಿತ ಬಸ್ ಪಾಸ್ ನೀಡುವುದಾಗಿ ಹೇಳಿದ್ದರು. ಅಂದು ಬಜೆಟ್ ಮಂಡಿಸಿದ್ದ ಯಡಿಯೂರಪ್ಪ ಅವರು ವನಿತಾ ಸಂಗಾತಿ ಹೆಸರಿನಲ್ಲಿ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಿದ್ದರು. ಬೆಂಗಳೂರು ನಗರದಲ್ಲಿ 850ಕ್ಕಿಂತಲೂ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳಿವೆ.
ಈ ಗಾಮೆಂಟ್ಸ್ ಸುಮಾರು 3 ಲಕ್ಷಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಶೇ.80 ಕ್ಕಿಂತ ಹೆಚ್ಚು ಮಹಿಳಾ ಕಾರ್ಮಿಕರಿದ್ದು, ಈ ನೌಕರರು ವನಿತಾ ಸಂಗಾತಿ ಯೋಜನ ಫಲಾನುಭವಿಗಳಾಗಬಹುದು. ಈ ಮೂಲಕ ಮಹಿಳಾ ಕಾರ್ಮಿಕರ ಬದುಕಿಗೆ ನೆರವಾಗಲು ಹೊರಟಿರುವ ಸರ್ಕಾರ ಮತ್ತು ಬಿಎಂಟಿಸಿ ಮುಂದಾಗಿದೆ. ಈ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಅನುಕೂಲವಾಗಲು ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುತ್ತಿದೆ. ಪಾಸಿನ ಹಣವನ್ನ ಸರ್ಕಾರ 40% ಗಾರ್ಮೆಂಟ್ಸ್ ಮಾಲೀಕರು 40% ಬಿಎಂಟಿಸಿ 20% ಭರಿಸಲಿದೆ. ಕಾರ್ಮಿಕ ಸಂಘಟನೆಗಳು ಸರ್ಕಾರದ ಆದೇಶವನ್ನು ಸ್ವಾಗತಿಸಿದ್ದಾರೆ.
ಹಾಗಾದರೆ ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರು ಪಾಸ್ ಪಡೆಯುವುದು ಹೇಗೆ? ಎಂದು ನೋಡುವುದಾದರೆ, ವನಿತಾ ಸಂಗಾತಿ ಪಾಸು ಪಡೆಯಲಿಚ್ಚಿಸುವ ಗಾರ್ಮೆಂಟ್ಸ್ ಮಹಿಳಾ ನೌಕರರು ಕರ್ತವ್ಯ ನಿರ್ವಹಿಸುವ ಗಾರ್ಮೆಂಟ್ಸ್ ಕಾರ್ಖಾನೆಯ ಮಾಲೀಕರಿಗೆ ಮನವಿ ಸಲ್ಲಿಸಬೇಕು. ಗಾರ್ಮೆಂಟ್ಸ್ ಮಾಲೀಕರು ಪಾಸು ಪಡೆಯುವ ಮಹಿಳಾ ಕಾರ್ಮಿಕರ ಪಟ್ಟಿಯನ್ನು, ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯ ಇ-ಮೇಲ್ ವಿಳಾಸ [email protected]ಗೆ ಸಲ್ಲಿಸಬೇಕು. ಇವುಗಳ ಜೊತೆಗೆ ಗಾರ್ಮೆಂಟ್ಸ್ ಮಾಲೀಕರು ಮಹಿಳಾ ಉದ್ಯೋಗಿಗಳ ದೃಢೀಕರಣ ಪತ್ರ & ಗುರುತಿನ ಚೀಟಿ ಸಂಗ್ರಹಿಸಬೇಕು.
ಉದ್ಯೋಗಿಗಳ ಪ್ರಮಾಣಪತ್ರದ ಜೊತೆಗೆ ಭಾವಚಿತ್ರ ಸಂಗ್ರಹಿಸುವುದು. ಸಂಗ್ರಹಿಸಿದ ಎಲ್ಲಾ ದಾಖಲೆಯನ್ನು ಗಾರ್ಮೆಂಟ್ಸ್ ಮಾಲೀಕರೇ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಈ-ಮೇಲ್ ಗೆ ಕಳುಹಿಸಬೇಕು. ಇದೇ ವೇಳೆ ಗಾರ್ಮೆಂಟ್ಸ್ ಮಾಲೀಕರು ತಮ್ಮ ಪಾಲಿನ 40% ಪಾಸ್ ಮೊತ್ತ ಆರ್ಟಿಜಿಎಸ್ ಪಾವತಿ ಮಾಡಬೇಕು. ಹೀಗೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಅರ್ಹರ ವಿವರಗಳು ಮಂಡಳಿ BMTCಗೆ ರವಾನೆ ಮಾಡಬೇಕು. ಮಂಡಳಿಯಿಂದ ಪಟ್ಟಿಗನುಸಾರವಾಗಿ BMTC ಪಾಸ್ ವಿತರಣೆ ಮಾಡಲಿದೆ ಮೆಜೆಸ್ಟಿಕ್ ಬಸ್ ನಿಲ್ದಾಣದ ಪಾಸ್ ಕೌಂಟರ್ ಗಳಿಂದ ಫಲಾನುಭವಿಗಳು ಪಾಸ್ ಪಡೆದುಕೊಳ್ಳಬಹುದು. BMTC ಸಾಮಾನ್ಯ ಬಸ್ ಗಳಿಗೆ ಮಾತ್ರ ಪಾಸ್ ಅನ್ವಯವಾಗಲಿದೆ, ವೋಲ್ವೋಗೆ ಅವಕಾಶ ಇರುವುದಿಲ್ಲ.