ಹಲವಾರು ಧಾರ್ಮಿಕ ಗುರುಗಳು ಅಥವಾ ಧಾರ್ಮಿಕ ಚಿಂತಕರು ಬೆಳ್ಳುಳ್ಳಿಯನ್ನು ಬಳಕೆ ಮಾಡಬಾರದು ಎಂದು ಹೇಳುತ್ತಾರೆ ಹಾಗೆ ಕೆಲವು ಜನಾಂಗಗಳಲ್ಲಿ ಕೂಡ ಬೆಳ್ಳುಳ್ಳಿಯನ್ನು ಬಳಕೆ ಮಾಡಬಾರದು ಎಂದು ಹೇಳುತ್ತಾರೆ. ಆದರೆ ಬೆಳ್ಳುಳ್ಳಿಯಲ್ಲಿ ಏನಾದರೂ ಔಷಧೀಯ ಗುಣಗಳು ಇದೆಯೋ ಇಲ್ಲವೋ ಇದನ್ನು ಬಳಕೆ ಮಾಡಬೇಕೊ ಬೇಡವೋ ಯಾರು ಬೆಳ್ಳುಳ್ಳಿಯನ್ನು ಬಳಕೆ ಮಾಡಬಾರದು ಹಾಗೂ ಯಾರು ಬೆಳ್ಳುಳ್ಳಿಯನ್ನು ಬಳಕೆ ಮಾಡಬೇಕು? ಇದು ಎಷ್ಟು ಔಷಧಿಯ ಗುಣಗಳನ್ನು ಹೊಂದಿದೆ ಎನ್ನುವ ವಿಚಾರದ ಬಗ್ಗೆ ಕೂಲಂಕುಶವಾಗಿ ಇಲ್ಲಿ ನೋಡೋಣ.
ಆಧ್ಯಾತ್ಮ ಚಿಂತಕರು ಹಾಗೂ ಆಧ್ಯಾತ್ಮದ ನೆಲೆಯಲ್ಲಿ ನಡೆಯುವಂತಹ ಜನರು ಬೆಳ್ಳುಳ್ಳಿಯನ್ನು ನಿಷೇಧಿಸುತ್ತಾರೆ ಕಾರಣ ಬೆಳ್ಳುಳ್ಳಿ ಒಂದು ಕಾಮೋತ್ತೇಜಕ ಪದಾರ್ಥವಾಗಿದೆ. ತಮ್ಮ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಲು ತಮ್ಮ ಮನಸ್ಸನ್ನು ಕೇಂದ್ರೀಕರಿಸಿ ಕೊಳ್ಳಲು ದೈವದತ್ತ ಮನಸ್ಸನ್ನು ತೆಗೆದುಕೊಂಡು ಹೋಗುವುದರ ಸಲುವಾಗಿ ಬೆಳ್ಳುಳ್ಳಿಯನ್ನು ಧಾರ್ಮಿಕ ಚಿಂತಕರು ಅಥವಾ ಆಧ್ಯಾತ್ಮಿಕ ಚಿಂತಕರು ನಿಷೇಧಿಸುತ್ತಾರೆ. ಈ ಕಾರಣದಿಂದಾಗಿ ಕೇವಲ ಬ್ರಹ್ಮಚಾರಿ ಗಳಿಗಾಗಿ ಮಾತ್ರ ಬೆಳ್ಳುಳ್ಳಿಯನ್ನು ಬಳಕೆ ಮಾಡಬಾರದು ಎಂದು ಹೇಳಿದ್ದಾರೆ ಹೊರತು ಉಳಿದವರು ಯಾರಿಗೂ ಹೇಳಿಲ್ಲ.
ಬೆಳ್ಳುಳ್ಳಿಯಲ್ಲಿ ನಮ್ಮ ದೇಹದಲ್ಲಿ ಇರುವಂತಹ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವಂತಹ ಶಕ್ತಿ ಇದೆ. ಸ್ತ್ರೀಯರಲ್ಲಿ ಆಗುವಂತಹ ಮುಟ್ಟಿನ ಸಮಸ್ಯೆಗಳು, ಎಲ್ಲಾ ರೀತಿಯ ಗರ್ಭಕೋಶದ ಸಮಸ್ಯೆಗಳು , ಅನಾವಶ್ಯಕವಾಗಿ ಆಗುವಂತಹ ಕೊಬ್ಬುಗಳು ಇವುಗಳನ್ನು ಕರಗಿಸಲು ಬೆಳ್ಳುಳ್ಳಿ ಬಹಳ ಸಹಾಯಕಾರಿ ಆಗಿರುತ್ತದೆ. ಹೃದಯದಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾದಾಗ ಹೃದಯ ಸಂಬಂಧಿ ಕಾಯಿಲೆಗಳಿಗೆ ಬೆಳ್ಳುಳ್ಳಿಯನ್ನು ಹೆಚ್ಚಾಗಿ ಬಳಕೆ ಮಾಡುವುದು ಬಹಳ ಉತ್ತಮ. ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಯಾವುದೇ ಅಡೆತಡೆ ಇಲ್ಲದೆ ರಕ್ತಸಂಚಾರ ಉಂಟಾಗುವುದು. ಬೆಳ್ಳುಳ್ಳಿಯಲ್ಲಿ ಜೀರ್ಣಕಾರಕ ಅಂಶವಿದ್ದು ನಾವು ತೆಗೆದುಕೊಂಡಂತಹ ಆಹಾರವನ್ನು ಸಂಪೂರ್ಣವಾಗಿ ಜೀರ್ಣ ಮಾಡುವ ಅಂಶ ಇದರಲ್ಲಿದೆ. ಇದು ನಮಗೆಲ್ಲ ತಿಳಿದಿರುವ ಹಾಗೆ ಬೆಳ್ಳುಳ್ಳಿ ಆಹಾರದ ರುಚಿಯನ್ನು ಕೂಡ ಹೆಚ್ಚಿಸುತ್ತದೆ ಹಾಗೂ ಇದೊಂದು ಕ್ರಿಮಿನಾಶಕ ಕೂಡ ಆಗಿದ್ದು ನಮ್ಮ ಹೊಟ್ಟೆಯಲ್ಲಿರುವಂತಹ ಕ್ರಿಮಿಗಳನ್ನು ನಾಶ ಮಾಡಲು ಕೂಡ ಬೆಳ್ಳುಳ್ಳಿ ಸಹಾಯಕಾರಿಯಾಗುತ್ತದೆ. ಹಸಿ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿರುವ ಎಲ್ಲಾ ಜಂತುಗಳು ಹೊರಹೋಗುತ್ತವೆ.
ಇಷ್ಟೊಂದು ಪ್ರಯೋಜನಕಾರಿ ಆಗಿರುವಂತಹ ಬೆಳ್ಳುಳ್ಳಿಯನ್ನು ಬ್ರಹ್ಮಚಾರಿಗಳು ಹಾಗೂ ಸನ್ಯಾಸಿಗಳು ಅವರವರ ಅನುಕೂಲಕ್ಕಾಗಿ ತ್ಯಜಿಸಬಹುದು. ಅವರವರ ರೀತಿ ನೀತಿ ಗೆ ಅನುಸಾರವಾಗಿ ಆಹಾರದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಬಹುದು. ಹಾಗಾಗಿ ಬ್ರಹ್ಮಚಾರಿಗಳು ಹಾಗೂ ಸನ್ಯಾಸಿಗಳನ್ನು ಹೊರತುಪಡಿಸಿ ಉಳಿದವರು ಯಾವುದೇ ಅಡ್ಡಿ ಆತಂಕ ಇಲ್ಲದೆ ಬೆಳ್ಳುಳ್ಳಿಯನ್ನು ಬಳಕೆ ಮಾಡಬಹುದು.