ಬೆಳ್ಳುಳ್ಳಿ ಇದನ್ನು ತರಕಾರಿಗಳಲ್ಲಿ ಒಂದು ಎಂದು ಹೇಳಬಹುದು. ಇದನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೆಯೇ ದೇಹದ ತೂಕವನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. ಹಾಗೆಯೇ ನೆಗಡಿ ಮತ್ತು ಕೆಮ್ಮು ಆದಾಗ ಇದನ್ನು ಔಷಧಿಗಳಲ್ಲಿ ಬಳಸಲಾಗುತ್ತದೆ. ಹಾಗೆಯೇ ಹಸಿ ಬೆಳ್ಳುಳ್ಳಿಯನ್ನು ತಿಂದರೆ ಬಹಳ ಒಳ್ಳೆಯದು. ಆದರೆ ಹಸಿ ಬೆಳ್ಳುಳ್ಳಿಯನ್ನು ತಿನ್ನಲು ಯಾರೂ ಇಷ್ಟಪಡುವುದಿಲ್ಲ. ಒಗ್ಗರಣೆಗೆ ಹಾಕಿ ಬಳಸುವವರೇ ಹೆಚ್ಚು. ಆದ್ದರಿಂದ ನಾವು ಇಲ್ಲಿ ಬೆಳ್ಳುಳ್ಳಿಯ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇದನ್ನು ಸೇವನೆ ಮಾಡುವುದರಿಂದ ಹಲವಾರು ಪ್ರಯೋಜನಗಳು ಇವೆ. ಹಸಿ ಬೆಳ್ಳುಳ್ಳಿ ಮೊಗ್ಗು ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಬೆಳ್ಳುಳ್ಳಿ ಬೇಯಿಸಿದಾಗ ಎಲ್ಲಾ ಪೋಷಕಾಂಶಗಳು ಕಡಿಮೆಯಾಗುತ್ತವೆ. ಇದರಿಂದ ಆರೋಗ್ಯಕರ ಪ್ರಯೋಜನ ಕೂಡ ಕ್ಷೀಣಿಸುತ್ತದೆ. ಹಾಗೆಯೇ ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನೊಂದಿಗೆ ಪ್ರತಿದಿನ ಎರಡು ಮೊಗ್ಗು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಹಾಗೆಯೇ ದೇಹದ ರಕ್ತ ಪರಿಚಲನೆ ಕೂಡ ಉತ್ತಮ ರೀತಿಯಲ್ಲಿ ನಡೆಯುತ್ತದೆ.

ಇದು ರಕ್ತವನ್ನು ತೆಳುವಾಗಿಸುವ ನೈಸರ್ಗಿಕ ಗುಣಗಳನ್ನು ಹೊಂದಿದೆ. ಹೀಗಾಗಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದಲ್ಲದೆ ದೇಹದಿಂದ ವಿಷವನ್ನು ತೆಗೆದುಹಾಕುವ ಕೆಲಸವನ್ನು ಸಹ ಬೆಳ್ಳುಳ್ಳಿ ಮಾಡುತ್ತದೆ. ಬೆಳ್ಳುಳ್ಳಿ ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳನ್ನು ಸಹ ಗುಣಪಡಿಸಬಹುದು. ಹಸಿ ಬೆಳ್ಳುಳ್ಳಿ ಮೊಗ್ಗುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಜೀರ್ಣಕ್ರಿಯೆ ಮತ್ತು ಹಸಿವಿನ ಕೊರತೆಯ ಸಮಸ್ಯೆ ಸುಧಾರಿಸುತ್ತದೆ. ಬೆಳ್ಳುಳ್ಳಿಯಲ್ಲಿ ಗಾಮಾ-ಗ್ಲುಮಿಲ್ಸಿಸ್ಟೈನ್ ಎಂಬ ರಾಸಾಯನಿಕವಿದೆ. ಇದು ಹೃದಯದ ಅಪಧಮನಿಗಳಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ತೆಗೆದುಹಾಕುತ್ತದೆ.

ಇದು ಹೃದಯದ ರಕ್ತನಾಳಗಳನ್ನು ತೆರೆಯುತ್ತದೆ ಮತ್ತು ಹೃದಯದ ಬ್ಲಾಕ್​ ಅನ್ನು ತಡೆಯುತ್ತದೆ. ಪ್ರತಿದಿನ ಎರಡು ಮೊಗ್ಗು ಹಸಿ ಬೆಳ್ಳುಳ್ಳಿಯನ್ನು ಬಿಸಿ ನೀರಿನೊಂದಿಗೆ ಅಗೆದು ತಿನ್ನುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ಚಳಿಗಾಲದಲ್ಲಿ ಮತ್ತು ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಶೀತಗಳಿಗೆ ಬೆಳ್ಳುಳ್ಳಿ ಉತ್ತಮ ಪರಿಹಾರ. ಆಸ್ತಮಾ, ಬ್ರಾಂಕೈಟಿಸ್, ನ್ಯುಮೋನಿಯಾ, ಕೆಮ್ಮು ಮುಂತಾದ ಉಸಿರಾಟದ ಕಾಯಿಲೆಗಳು ತ್ವರಿತವಾಗಿ ಗುಣವಾಗಲು ಬಿಸಿ ನೀರಿನೊಂದಿಗೆ ಪ್ರತಿದಿನ ಬಿಸಿ ನೀರಿನೊಂದಿಗೆ ಬೆಳ್ಳುಳ್ಳಿ ಸೇವಿಸುವುದು ಉತ್ತಮ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!