ಈ ಒಂದು ಪ್ರಶ್ನೆ ನಮ್ಮಲ್ಲಿ ಸಾಕಷ್ಟು ಜನರಲ್ಲಿ ಇಂದಿಗೂ ಕೂಡ ಕಾಡುತ್ತಲೇ ಇರುತ್ತದೆ. ಗಾಂಧೀಜಿಯವರ ನಂತರ ನಿಜವಾದ ಗಾಂಧಿ ಯಾರು? ಇಂದಿರಾ , ಸೋನಿಯಾ , ರಾಹುಲ್ ಇವರೆಲ್ಲ ನಿಜವಾಗಲೂ ಗಾಂಧಿ ಕುಟುಂಬಕ್ಕೆ ಸೇರಿದವರು ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತಿತ್ತು. ಗಾಂಧಿ ನಂತರ ಅವರ ಕುಟುಂಬ ಹೇಗಿದೆ ಎನ್ನುವುದರ ಬಗ್ಗೆ ಹಾಗೂ ಈ ನಿಯೋ ಗಾಂಧಿಗಳು ಹೇಗೆ ಗಾಂಧಿಗಳು ಆದರೂ ಎನ್ನುವುದನ್ನು ನಾವು ಈ ಲೇಖನದ ಮೂಲಕ ವಿವರವಾಗಿ ತಿಳಿದುಕೊಳ್ಳೋಣ.
ರಾಜೀವ್ ಗಾಂಧಿ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಇವರನ್ನೆಲ್ಲ ಗಾಂಧಿ ಎಂದು ಕರೆಯುವ ಹಾಗೆ ಮಾಡಿದ್ದು ಮಹಾತ್ಮ ಗಾಂಧಿ ಅಲ್ಲ. ಈ ರೀತಿ ಕರೆಯುವ ಹಾಗೆ ಮಾಡಿದ್ದು ಫಿರೋಜ್ ಗಾಂಧಿ. ಇಷ್ಟಕ್ಕೂ ಈ ಫಿರೋಜ್ ಗಾಂಧಿ ಯಾರು ? ಇವರು ಕೂಡ ಗಾಂಧಿ ಕುಟುಂಬಕ್ಕೆ ಸೇರಿದವರಾ? ಫಿರೋಜ್ ಎನ್ನುವಹೆಸರು ಯಾವುದಕ್ಕಾಗಿ ಇದೆ ಹಾಗಿದ್ದರೆ ಅವನು ಇಸ್ಲಾಂ ಧರ್ಮಕ್ಕೆ ಸೇರಿದವನಾ? ಹಾಗಿದ್ದರೆ ರಾಹುಲ್ ಗಾಂಧಿ ಹೇಗೆ ಬ್ರಾಹ್ಮಣ ಧರ್ಮದವನು ಹೇಗೆ ಆಗುತ್ತಾನೆ? ಇನ್ನು ಈ ರೀತಿಯ ಸಾಕಷ್ಟು ಪ್ರಶ್ನೆಗಳು ಇತ್ತೀಚೆಗೆ ಸಾಕಷ್ಟು ಜನರಲ್ಲಿ ಹರಿದಾಡುತ್ತಿವೆ . ಇಲ್ಲಿ ಫಿರೋಜ್ ಕಥೆಯನ್ನು ಕೇಳುವುದರ ಮೂಲಕ ಸಾಕಷ್ಟು ಗೊಂದಲಗಳಿಗೆ ನಾವು ಪೂರ್ಣ ವಿರಾಮವನ್ನು ನೀಡೋಣ. ಈ ಗಾಂಧಿಗಳ ಪೈಕಿ ಅತ್ಯಂತ ನಿಗೂಢವಾಗಿ ಉಳಿದವನು ಅಂದರೆ ಫಿರೋಜ್ ಗಾಂಧಿ. ಫಿರೋಜ್ ಗಾಂಧಿ ಅನ್ನುವ ಹೆಸರನ್ನು ಕೂಡ ಸಾಕಷ್ಟು ಜನರು ಕೇಳಿರಲಿಕ್ಕಿಲ್ಲ. ಇಂದಿರಾಗಾಂಧಿ ಎಂದಾಕ್ಷಣ ನಮಗೆ ನೆನಪಿಗೆ ಬರುವುದು ಅವರ ತಂದೆ ನೆಹರು ಹೊರತು, ಗಂಡ ಫಿರೋಜ್ ಗಾಂಧಿ ಅಲ್ಲ. ನಿಜಕ್ಕೂ ನೆಹರು ಬಯಸಿದ್ದು ಕೂಡ ಇದನ್ನೇ ಆಗಿತ್ತು ಹೀಗಾಗಿ ನೆಹರು ಮದುವೆಯಾದ ನಂತರ ಇಂದಿರಾಗಾಂಧಿ ಅವರಿಗೆ ಪತ್ರವನ್ನು ಬರೆಯುತ್ತಿರುವ ಇಂದಿರಾಪ್ರಿಯದರ್ಶಿನಿ ನೆಹರು ಎಂದು ಉಲ್ಲೇಖಿಸುತ್ತಿದ್ದರೆ ಹೊರತು ಇಂದಿರಾ ಫಿರೋಜ್ ಗಾಂಧಿ ಎಂದು ಎಂದಿಗೂ ಕೂಡ ಬರೆದಿರಲಿಲ್ಲ. ಇಷ್ಟಕ್ಕೂ ಇಂದಿರಾ ಫಿರೋಜ್ ಗಾಂಧಿಯನ್ನು ವಿವಾಹವಾಗುವುದೇ ನೆಹರೂಗೆ ಇಷ್ಟ ಇರಲಿಲ್ಲ ಈ ಕಾರಣಕ್ಕಾಗಿಯೇ ಅಳಿಯ ಮಗಳು ಇಬ್ಬರು ಸುಖವಾಗಿ ಜೀವನ ನಡೆಸುವುದಕ್ಕೆ ಎಂದಿಗೂ ಅವಕಾಶವನ್ನು ಕೂಡ ನೀಡಲಿಲ್ಲ. ಫಿರೋಜ್ ಇಂದಿರಾ ಗಂಡ ಎನ್ನುವುದನ್ನು ಜನರ ನೆನಪಿನಲ್ಲಿ ಯೂ ಕೂಡ ಉಳಿಯದಂತೆ ನೆಹರು ಮಾಡಿದ್ದರು. ಈ ಎಲ್ಲ ಕಾರಣಗಳಿಂದಾಗಿ ಫಿರೋಜ್ ಇಂದಿಗೂ ಕೂಡ ಹಲವಾರು ಜನರಿಗೆ ಅಪರಿಚಿತ. ಸಾಕಷ್ಟು ಜನರು ಇಂದಿಗೂ ಕೂಡ ಫಿರೋಜ್ ಒಬ್ಬ ಮುಸಲ್ಮಾನ ಎಂದು ತಿಳಿದುಕೊಂಡಿದ್ದಾರೆ ಹಾಗೂ ಅದನ್ನು ಪ್ರಚಲಿತ ಕೂಡ ಮಾಡುತ್ತಿದ್ದಾರೆ. ಫಿರೋಜ್ ಗಾಂಧಿಯ ಮೂಲ ಹೆಸರು ಫಿರೋಜ್ ಗ್ಯಾಂಡಿ. ಫಿರೋಜ್ ಗ್ಯಾಂಡಿ ಗಾಂಧಿ ಆಗಿದ್ದು ಹೇಗೆ ಹಾಗೂ ಅವರ ಮೂಲ ಏನು ಎನ್ನುವುದನ್ನು ನಾವೆಲ್ಲ ತಿಳಿದುಕೊಳ್ಳೋಣ.
ಸೆಪ್ಟೆಂಬರ್ ೧೨, ೧೯೧೨ ರಲ್ಲಿ ಮುಂಬೈನಲ್ಲಿ ಜನಿಸಿದ ಫಿರೋಜ್ ಗುಜರಾತ್ ಮೂಲದ ಪಾರ್ಸಿ ಕುಟುಂಬಕ್ಕೆ ಸೇರಿದವರು. ಈ ಪಾರ್ಸಿಗಳು ಮುಸ್ಲಿಮರಲ್ಲ ಇವರದೊಂದು ಜೋರಾಸ್ಟ್ರಿಯನ್ ಧರ್ಮ. ಪರ್ಶಿಯಾ ದೇಶ ಇಸ್ಲಾಂನ ಆಕ್ರಮಣಕ್ಕೆ ಒಳಗಾದಾಗ ಬದುಕು ಕಟ್ಟಿಕೊಳ್ಳುವುದರ ಸಲುವಾಗಿ ಭಾರತಕ್ಕೆ ಬಂದು ಇಲ್ಲಿಯೇ ನೆಲೆ ನಿಂತು ಭಾರತೀಯರಿಗಿಂತ ಹೆಚ್ಚು ಭಾರತೀಯರಾದವರು ಈ ಪಾರ್ಸಿಗಳು. ಪರ್ಶಿಯಾದಿಂದ ವಲಸೆ ಬಂದ ಕಾರಣಕ್ಕೆ ಇವರನ್ನು ಪಾರ್ಸಿಗಳು ಎಂದು ಕರೆಯುತ್ತಾರೆ. ಪಾರ್ಸಿ ಕುಟುಂಬದ ಜೆಹಾಂಗೀರ್ ಫೆರಾಜೋನ್ ಗ್ಯಾಂಡಿ ಮತ್ತು ರತಿಮಾಯಿಯ ಮಗ ಫಿರೋಜ್ ಜೆಹಾಂಗೀರ್ ಗ್ಯಾಂಡಿ. ಫಿರೋಜ್ ಅವರ ತಂದೆ ಇಂಜಿನಿಯರ್ ಆಗಿದ್ದರು ಹಾಗಾಗಿ ಇವರು ತಮ್ಮ ಮೂಲ ಊರು ಗುಜರಾತನ್ನು ಬಿಟ್ಟು ಮುಂಬೈನ ನವರೋಜಿ ಮೊಹಲ್ಲಾದಲ್ಲಿ ನೆಲೆಸಬೇಕಾಯಿತು. ಮುಂದೆ ಸಾವಿರದ ಒಂಭೈನುರಾ ಎಪ್ಪತ್ತರಲ್ಲಿ ಫಿರೋಜ್ ತಂದೆ ತೀರಿಕೊಂಡ ನಂತರ ಫಿರೋಜ್ ಮತ್ತು ಅವರ ತಾಯಿ ಉತ್ತರಪ್ರದೇಶದ ಅಲಹಾಬಾದ್ ಪ್ರದೇಶಕ್ಕೆ ಬಂದು ನೆಲೆಸುತ್ತಾರೆ. ಸಾವಿರ ಒಂಬೈನೂರ ಮುವತ್ತರಲ್ಲಿ ಫಿರೋಜ್ ಸ್ವಾತಂತ್ರ್ಯಹೋರಾಟಕ್ಕೆ ಧುಮುಕುತ್ತಾರೆ. ಕಾಂಗ್ರೆಸ್ನ ಯುವ ದಳವಾಗಿದ್ದ ವಾನರಸೇನೆಯ ಸದಸ್ಯರಾಗುತ್ತಾರೆ. ಇಲ್ಲಿಯ ಇವರಿಗೆ ಇಂದಿರಾಗಾಂಧಿ ಪರಿಚಯವಾಗುತ್ತದೆ ಹಾಗೂ ಆನಂತರದ ಎಲ್ಲಾ ಘಟನೆಗಳು ಕೂಡ ಸಿನಿಮಾ ಕಥೆ ಹಾಗೆಯೇ ನಡೆಯುತ್ತದೆ.
ಫಿರೋಜ್, ಇಂದಿರಾಪ್ರಿಯದರ್ಶಿನಿ ನೆಹರು ಅವರಿಗೆ 16 ವರ್ಷದಲ್ಲಿ ಇರುವಾಗ ಪ್ರಪೋಸ್ ಮಾಡುತ್ತಾರೆ. ಸ್ವಲ್ಪ ದಿನಗಳ ಕಾಲ ಪ್ರೇಮ ಪ್ರಕರಣ ಹಾಗೆಯೇ ನಿಲ್ಲುತ್ತದೆ. ಹಾಗೆ ಸ್ವಲ್ಪ ಸಮಯದ ನಂತರ ಫಿರೋಜ್ ಅವರಿಗೆ ನೆಹರು ಅವರ ಪತ್ನಿ ಕಮಲ ಅವರ ಪರಿಚಯವಾಗುತ್ತದೆ. ನೆಹರು ಕಾಂಗ್ರೆಸ್ ಪಕ್ಷದ ಚಟುವಟಿಕೆಗಳು ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಳೆದುಹೋಗಿದ್ದ ರಿಂದ ಕಮಲಾ ನೆಹರು ಅವರು ಅಂತಹ ಸಂದರ್ಭಗಳಲ್ಲಿ ಅಕ್ಷರಶಹ ಒಬ್ಬಂಟಿ ಆಗಿರುತ್ತಿದ್ದರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದ ಕಮಲ ಅವರಿಗೆ ಅತ್ಯಂತ ಆಪ್ತ ಗೆಳೆಯನಾಗಿ ಮಾನಸಿಕ ಸ್ಥೈರ್ಯ ತುಂಬುತ್ತಿದ್ದು ಇದೇ ಫಿರೋಜ್ ಗ್ಯಾಂಡಿ. ಮುಂದೆ ಕಮಲಾ ನೆಹರು ಅನಾರೋಗ್ಯಕ್ಕೀಡಾದ ಆಗ ಅವರ ಎಲ್ಲಾ ಸೇವೆಗಳನ್ನು ಮಾಡಿದ್ದು ಕೂಡ ಫಿರೋಜ್ ಗ್ಯಾಂಡಿಯೆ . ಈ ಕಾರಣಕ್ಕಾಗಿ ಅವರಿಬ್ಬರ ನಡುವೆ ಏನೇನೋ ಸಂಬಂಧಗಳು ಇದ್ದವು ಎನ್ನುವ ಗಾಳಿಸುದ್ದಿಗಳು ಹಬ್ಬಿದ್ದವು. ಇಂದಿರಾ ಗಾಂಧಿ ಕುರಿತ ಎಷ್ಟೋ ಪುಸ್ತಕಗಳಲ್ಲಿ ಇವರಿಬ್ಬರು ಕುರಿತಾದ ಸಂಬಂಧಗಳ ಕುರಿತು ಉಲ್ಲೇಖವಿದೆ. ಆದರೆ ತನ್ನ ತಾಯಿಯ ಬಗ್ಗೆ ಅಷ್ಟೊಂದು ಕಾಳಜಿಯಿಂದ ಆರೈಕೆ ಮಾಡುತ್ತಿದ್ದ ಫಿರೋಜ್ ಬಗ್ಗೆ ಇಂದಿರಾಗೆ ಆಸಕ್ತಿ ಶುರುವಾಗಿತ್ತು. ಅದು ಪ್ರೀತಿಯಾಗಿ ಬದಲಾಗಿ ಕಮಲನೆಹರು ಸಾವನ್ನಪ್ಪಿದ ನಂತರ ಇಂದಿರಾ ಹಾಗೂ ಫಿರೋಜ್ ನಡುವೆ ಸಂಬಂಧ ಮತ್ತಷ್ಟು ಗಟ್ಟಿಯಾಯಿತು. ಇವರಿಬ್ಬರ ಈ ಪ್ರೇಮಕಥೆಗೆ ವಿಲನ್ ಆಗಿದ್ದು ನೆಹರು. ನೆಹರು ಇಂದಿರಾ ಹಾಗೂ ಫಿರೋಜ್ ಇವರಿಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸುತ್ತಾರೆ ಹಾಗೂ ಗಾಂಧೀಜಿ ಅವರ ಮೂಲಕ ಇಂದಿರಾಗೆ ಬುದ್ಧಿ ಹೇಳುವ ಪ್ರಯತ್ನವನ್ನು ನೆಹರು ಮಾಡುತ್ತಾರೆ ಆದರೆ ಗಾಂಧೀಜಿ ಕೂಡ ಇಂದಿರಾಗೆ ಬುದ್ಧಿ ಹೇಳುವುದರಲ್ಲಿ ವಿಫಲವಾಗುತ್ತಾರೆ. ನಂತರ ಅವರಿಬ್ಬರನ್ನು ದೂರ ಮಾಡುವುದು ಅಸಾಧ್ಯ ಎನ್ನುವುದನ್ನು ಅರಿತ ಗಾಂಧಿ , ನೆಹರು ಅವರನ್ನು ಅವರಿಬ್ಬರ ಮದುವೆಗೆ ಒಪ್ಪಿಸುತ್ತಾರೆ. ಮಾರ್ಚ್ ೨೬ , ೧೯೪೨ ರಲ್ಲಿ ಹಿಂದೂ ಮತ್ತು ಪಾರ್ಸಿ ಸಂಪ್ರದಾಯದ ಪ್ರಕಾರ ಇಂದಿರಾ ಹಾಗೂ ಫಿರೋಜ್ ವಿವಾಹ ನಡೆಯುತ್ತದೆ. ಇಂದಿರಾಪ್ರಿಯದರ್ಶಿನಿ ನೆಹರು ಇದ್ದವರು ಇಂದಿರಾ ಫಿರೋಜ್ ಆಗಿ ಬದಲಾಗುತ್ತಾರೆ. ಇನ್ನು ಫಿರೋಜ ಮಹಾತ್ಮ ಗಾಂಧಿಯ ಪ್ರಭಾವದಿಂದಾಗಿ ಗ್ಯಾಂಡಿ ಎನ್ನುವ ಹೆಸರನ್ನು ಗಾಂಧಿ ಎಂದು ಬದಲಾಯಿಸಿಕೊಂಡರು.
ಮದುವೆಯಾದ ಆರು ತಿಂಗಳಲ್ಲಿಯೇ ಇಂದಿರಾ ಮತ್ತು ಫಿರೋಜ್ ಇಬ್ಬರು ಜೈಲುವಾಸವನ್ನು ಅನುಭವಿಸಬೇಕಾಗುತ್ತದೆ. ಸಾವಿರದ ಒಂಭೈನುರ ನಲವತ್ತ ಎರಡರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ ಪರಿಣಾಮವಾಗಿ ಬ್ರಿಟಿಷರ ಕಡೆಯಿಂದ ಇವರು ಸೆರೆಮನೆ ವಾಸವನ್ನು ಅನುಭವಿಸುತ್ತಾರೆ. ಇದೇ ರೀತಿ ಸಾವಿರದ ಒಂಬೈನೂರ ಮುವತ್ತರಲ್ಲಿ ಫಿರೋಜ್ ಲಾಲ್ ಬಹುದ್ದೂರ್ ಶಾಸ್ತ್ರಿ ಅವರೊಂದಿಗೆ ಕೂಡ ಜೈಲುವಾಸವನ್ನೂ ಅನುಭವಿಸಿದರು ಎನ್ನುವುದನ್ನು ಮರೆಯಲಾಗದು.ಇಂತಹ ಫಿರೋಜ್ ಸಾವಿರದ ಒಂಭೈನೂರ ನಲವತ್ತೆಳರಲ್ಲಿ ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೆಹಲಿಯ ಪಾರ್ಲಿಮೆಂಟ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ರಾಜಕೀಯದಿಂದ ದೂರ ಉಳಿಯಲು ಆರಂಭಿಸಿದರು. ಅಷ್ಟರಲ್ಲಾಗಲೇ ನೆಹರು ಇವರ ಕುಟುಂಬಕ್ಕೆ ಹುಳಿ ಹಿಂಡುವ ಕೆಲಸ ಆರಂಭಿಸಿ ಕೊಂಡಿದ್ದರು . ನಂತರದ ದಿನಗಳಲ್ಲಿ ಇಂದಿರ ಹೆಚ್ಚಿನ ಸಮಯ ತಂದೆ ಜೊತೆ ಕಳೆಯಲು ಆರಂಭಿಸಿದರು ಫಿರೋಜ್ ಮತ್ತು ಇಂದಿರಾ ನಡುವೆ ಅಂತರವನ್ನು ಸೃಷ್ಟಿಸಿತು. ಸ್ವಾಭಿಮಾನಿ ಫಿರೋಜ್ ನೆಹರು ಅವರ ನೆರಳನ್ನು ಕೂಡ ಇಷ್ಟ ಪಡಲಿಲ್ಲ. ಸ್ವಂತ ವರ್ಚಸ್ಸಿನ ಮೇಲೆ ಬೆಳೆದ ಫಿರೋಜ್ ಲೋಕಸಭೆಯಲ್ಲಿ ಅನಧಿಕೃತ ವಿರೋಧಪಕ್ಷದ ನಾಯಕ ಎನಿಸಿಕೊಂಡರು. ಭಾರತದ ಮೊಟ್ಟ ಮೊದಲ ಹಣಕಾಸು ಹಗರಣವನ್ನು ಬಯಲಿಗೆಳೆದರೂ. ನೆಹರು ಅವರನ್ನು ತನ್ನ ಮಾವ ಎನ್ನುವುದನ್ನು ಕೂಡ ಗಮನಿಸದೆ ಸಂಸತ್ತಿನಲ್ಲಿ ತಮ್ಮ ವಾಗ್ದಾಳಿಯ ಮೂಲಕ ಖಂಡಿಸಿದರು. ಇವತ್ತಿನ ಕಾಲದಲ್ಲಿ ರಾಜಕಾರಣಿಗಳು ಹಾಗೂ ಖಾಸಗಿ ಉದ್ಯಮಗಳ ನಡುವೆ ಸಂಬಂಧ ಶುರುವಾಗಿ ಭ್ರಷ್ಟಾಚಾರ ತಲೆ ಎತ್ತಿ ನಿಂತಿತ್ತು. ಆ ದಿನಗಳಲ್ಲಿ ನಡೆದಿದ್ದು ದಾಲ್ಮಿಯ ಹಗರಣ. ಬ್ಯಾಂಕ್ ಹಾಗೂ ಇನ್ಸೂರೆನ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದ ರಾಮಕೃಷ್ಣ ದಾಲ್ಮಿಯಾ ತಮ್ಮ ಪ್ರಭಾವವನ್ನು ಬಳಸಿಕೊಂಡು ಜನರ ಹಣವನ್ನು ತಮ್ಮ ಒಡೆತನದ ಬ್ಯಾಂಕಿಗೆ ಅಕ್ರಮವಾಗಿ ವರ್ಗಾಯಿಸುತ್ತಿದ್ದರು. ಈ ಹಗರಣವನ್ನು ಬಯಲು ಮಾಡಿದ ಫಿರೋಜ್ ಸಂಸತ್ತಿನಲ್ಲಿ ಈ ವಿಷಯದ ಕುರಿತು ಅಬ್ಬರಿಸುತ್ತಾರೆ ಇದರ ಪರಿಣಾಮವಾಗಿ ದಾಲ್ಮಿಯಾ ಗೆ ಎರಡು ವರ್ಷ ಶಿಕ್ಷೆ ಕೂಡ ಆಗಿತ್ತು. ಅವರು ಅಕ್ರಮವಾಗಿ ಹಣವನ್ನು ವರ್ಗಾಯಿಸಿದ ಬೇನದಂಟ್ ಕಾಲ್ಮನ್ ಸಂಸ್ಥೆಯೆಂದರೆ ಇಂದಿನ ಟೈಮ್ಸ್ ಆಫ್ ಇಂಡಿಯಾ. ಈ ಘಟನೆಯ ತರ ಇರೋ ಇನ್ನೊಂದು ಅಕ್ರಮ ಕೆಲಸದ ವಿರುದ್ಧ ಹೋರಾಟ ನಡೆಸುತ್ತಾರೆ. ಅಕ್ರಮ ಕೆಲಸದಲ್ಲಿ ಭಾಗವಹಿಸಿದ ನೆಹರು ಅವರ ವಿರುದ್ಧವೇ ಸಂಸತ್ನಲ್ಲಿ ಮಾತನಾಡುತ್ತಾರೆ. ಹೀಗೆ ಪ್ರತಿಯೊಂದು ಹಂತದಲ್ಲಿಯೂ ಕೂಡ ನೆಹರು ಅವರ ವಿರುದ್ಧ ನಿಲ್ಲುತ್ತ ಇಂದಿರಾ ಇಂದ ಫಿರೋಜ್ ಇದರಿಂದಾಗಿ ದೂರವಾಗುತ್ತಾರೆ ಎನ್ನುವುದನ್ನು ತಿಳಿದು ಕೂಡ ಎಲ್ಲಿಯೂ ರಾಜಿ ಆಗಲಿಲ್ಲ.
ಈ ಪಾರ್ಸಿಗಳ ಮನೆಯ ಸಮಾಜವಾದಿ ಸಿದ್ಧಾಂತದ ಹುಡುಗ ಫಿರೋಜ್ ಅಂಜಿನ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ತರ ಮಹಾತ್ಮ ಗಾಂಧಿಯವರಿಂದ ಪ್ರೇರೆಪಿತರಾಗಿದ್ದರು. ಇಂದಿರಾಳನ್ನು ಮದುವೆಯಾಗುವ ಮೊದಲು ಅಂದರೆ ೧೯೩೦ ರಲ್ಲೀ ಫಿರೋಜ್ ಗ್ಯಾಂಡಿ ಇಂದ ಗಾಂಧಿ ಎಂದು ಬದಲಾಯಿಸಿಕೊಂಡರು. ಹೆಸರು ಬದಲಾವಣೆ ಕೇವಲ ಅಭಿಮಾನಕ್ಕಾಗಿ ಆಗಿತ್ತೇ ಹೊರತು ಯಾವುದೇ ರಾಜಕೀಯಕ್ಕಾಗಿ ಅಲ್ಲ. ಇನ್ನು ತನ್ನ ಮಾವ ನೆಹರು ಪ್ರಧಾನಿಯಾಗಿದ್ದ ಸಮಯದಲ್ಲೂ ಕೂಡ ತನಗಾಗಿ ಯಾವ ಲಾಭವನ್ನು ಫಿರೋಜ್ ಮಾಡಿಕೊಂಡಿರಲಿಲ್ಲ. ಬದಲಿಗೆ ನೆಹರು ಅವರ ವಿರುದ್ಧ ಸಂಸತ್ತಿನ ಒಳಗೂ-ಹೊರಗೂ ಹೋರಾಟವನ್ನು ನಡೆಸುತ್ತಲೇ ಬಂದಿದ್ದಾರೆ. ಅವತ್ತಿನ ಕಾಲದಲ್ಲಿ ನೆಹರು ಅವರ ವಿರುದ್ಧ ಮಾತನಾಡುವುದಕ್ಕೆ ಬಹಳವೇ ಧೈರ್ಯ ಬೇಕಿತ್ತು ಅದು ಫಿರೋಜ್ ಗೆ ಇದ್ದಿತ್ತು. ಫಿರೋಜ್ ಎಲ್ಲಿ ಯಾವ ವಿಷಯದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಂಡು ಬದುಕಿದ ವ್ಯಕ್ತಿ ಅಲ್ಲ. ಫಿರೋಜ್ ಗಾಂಧಿ ಎಂದೂ ಕೂಡ ಹಣಕಾಸಿನ ವಿಷಯದಲ್ಲಿ ಭ್ರಷ್ಟ ಆಗಲಿಲ್ಲ. ಅಧಿಕಾರದ ಆಸೆಗೆ ಬಿದ್ದು ತಮ್ಮ ಸ್ವಾಭಿಮಾನವನ್ನು ಬಿಟ್ಟು ಎಂದಿಗೂ ಕೂಡ ಬದುಕಲಿಲ್ಲ. ಈ ಕಾರಣಕ್ಕಾಗಿ ಫಿರೋಜ್ ಅವರ ನೆರಳು ಕೂಡ ನೆಹರೂಗೆ ಇಷ್ಟವಾಗುತ್ತಿರಲಿಲ್ಲ ಇಂದಿರಾ ಹಾಗೂ ಫಿರೋಜ್ ಇಬ್ಬರೂ ದೂರ ಉಳಿಯುವಂತೆ ನೋಡಿಕೊಂಡರು. ಫಿರೋಜ್ ತಾವು ಬದುಕಿರುವಷ್ಟು ದಿವಸ ಭ್ರಷ್ಟಾಚಾರದ ವಿರುದ್ಧ ಹಾಗೂ ನೆಹರು ಅವರ ವಿರುದ್ಧ ಹಾಗೂ ಅವತ್ತಿನ ಸರ್ಕಾರದ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದ್ದರು. ಹತ್ತು ವರ್ಷ ಸಂಸತ್ತಿನಲ್ಲಿ ಕೆಲಸ ಮಾಡಿ ಅತ್ಯುತ್ತಮ ಸಂಸದೀಯ ಪಟು ಎನಿಸಿಕೊಂಡ ಫಿರೋಜ್ ಗಾಂಧಿ ಅನ್ನೋ ಸಮಾಜವಾದಿ ನಾಯಕ ೧೯೬೦ ರಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗುತ್ತಾರೆ. ಅವರು ಪ್ರತಿನಿಧಿಸುತ್ತಿದ್ದ ಉತ್ತರ ಪ್ರದೇಶದ ಲೋಕಸಭಾ ಕ್ಷೇತ್ರವನ್ನು ಈಗ ಅವರ ಸೊಸೆ ಸೋನಿಯಾಗಾಂಧಿ ಪ್ರತಿನಿಧಿಸುತ್ತಿದ್ದಾರೆ. ಇದು ಫಿರೋಜ್ ಗ್ಯಾಂಡಿ ಗಾಂಧಿ ಆದ ಕಥೆ. ಯಾವ ಫಿರೋಜ್ ಜೇಹಾಂಗಿರ್ ಗ್ಯಾಂಡಿ ಬದುಕಿದ್ದಷ್ಟು ದಿವಸ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಬಂದರು ಅದೇ ವಂಶದ ಮುಂದಿನ ತಲೆಮಾರು ಭ್ರಷ್ಟಾಚಾರವನ್ನು ಮೈಗೂಡಿಸಿಕೊಂಡಿದ್ದು ಮಾತ್ರ ವಿಚಿತ್ರ. ಸ್ವತಂತ್ರ ಭಾರತದ ಮೊಟ್ಟ ಮೊದಲ ಹಗರಣವನ್ನು ಬಯಲಿಗೆಳೆದ ಖ್ಯಾತಿ ಫಿರೋಜ್ ಗ್ಯಾಂಡಿ ಗೆ ಸಲ್ಲುವುದು. ಮುಖ್ಯವಾಗಿ ನಾವೆಲ್ಲ ಡಿಸೆಂಬರ್ 9ರಂದು ಭ್ರಷ್ಟಾಚಾರ ವಿರೋಧಿ ದಿನದಂದು ಇವರನ್ನು ನೆನಪಿಸಿಕೊಳ್ಳಲೇಬೇಕು. ಸ್ವತಂತ್ರ ಭಾರತದ ಮೊಟ್ಟ ಮೊದಲ ಹಗರಣವನ್ನು ಬೆಳಕಿಗೆ ತಂದ ಈ ವ್ಯಕ್ತಿಯನ್ನು ನಾವು ಭ್ರಷ್ಟಾಚಾರ ವಿರೋಧಿ ದಿನದಂದು ನೆನಪಿಸಿಕೊಳ್ಳದೆ ಇನ್ಯಾವ ದಿನ ನೆನಪಿಸಿಕೊಳ್ಳಲು ಸಾಧ್ಯ. ವಿಡಿಯೋ ಕೃಪೆ: ಮೀಡಿಯಾ ಮಾಸ್ಟರ್