ಗಳಗನಾಥ ಎಂಬ ಗ್ರಾಮದಲ್ಲಿ ಈ ಅದ್ಭುತ ಆಕೃತಿಯ ದೇವಾಲಯವಿದ್ದು ಇಂದು ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಡುತ್ತಿದೆ ಐತಿಹಾಸಿಕವಾಗಿ ಸಾಕಷ್ಟು ಪ್ರಾಮುಖ್ಯತೆ ಪಡೆದಿರುವ ಈ ದೇವಾಲಯವನ್ನು ಚಾಲುಕ್ಯ ದೊರೆ ವಿಕ್ರಮಾದಿತ್ಯನು ಹನ್ನೊಂದನೆಯ ಶತಮಾನದಲ್ಲಿ ನಿರ್ಮಿಸಿದನೆಂಬುದು ಇತಿಹಾಸದಿಂದ ತಿಳಿದುಬರುತ್ತದೆ.

ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದಲ್ಲಿರುವ ಅತಿ ಸುಂದರ ಕೆತ್ತನೆಗಳ ದೇವಾಲಯಗಳಲ್ಲಿ ಒಂದಾಗಿರುವ ಗಳಗನಾಥೇಶ್ವರ ದೇವಾಲಯವು ತನ್ನ ಶ್ರೀಮಂತವಾದ ಹಾಗೂ ಅಷ್ಟೆ ಸೂಕ್ಷ್ಮವಾದ ಕೆತ್ತನೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೇವಾಲಯದಲ್ಲಿರುವ ಗರ್ಭ ಗುಡಿಯು ಪ್ರದಕ್ಷಿಣೆ ಹಾಕಲು ಅನುಗುಣವಾಗುವಂತೆ ಎಲ್ಲ ಕಡೆಯಿಂದಲೂ ಮುಕ್ತವಾಗಿದ್ದು ಶಿವಲಿಂಗವನ್ನು ಅಚ್ಚುಕಟ್ಟಾಗಿ ಹೊಂದಿದೆ ನಾವು ಲೇಖನದ ಮೂಲಕ ಗಳಗನಾಥ ದೇವಾಲಯದ ಬಗ್ಗೆ ತಿಳಿದುಕೊಳ್ಳೋಣ.

ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯಲ್ಲಿ ದಾರ್ಶನಿಕರ ಬಿಡು ಜಿಲ್ಲೆಯಲ್ಲಿ ಮಠಗಳು ಹೆಚ್ಚಾಗಿ ಕಂಡು ಬರುತ್ತದೆ ಜೊತೆಗೆ ಪುಣ್ಯ ಕ್ಷೇತ್ರಗಳು ಹೆಚ್ಚಾಗಿ ಇದೆ ಧಾರ್ಮಿಕ ಹಾಗೂ ಇತಿಹಾಸಿಕ ಹಿನ್ನೆಲೆಯುಳ್ಳ ಅಪರೂಪದ ದೇವಾಲಯ ಗಳಗನಾಥ ದೇವಾಲಯವಾಗಿದೆ ಪಿರಮಿಡ್ ಆಕಾರದಲ್ಲಿ ಇರುವ ದೇವಸ್ಥಾನ ಪುರಾಣದ ಪ್ರಕಾರ ಪ್ರಸಿದ್ದಿಯನ್ನು ಪಡೆದಿದೆ ಗಳಗನಾಥ ಗರ್ಗೇಶ್ವರ ದೇವಾಲಯದಲ್ಲಿ ಜ್ಯೋತಿರ್ಲಿಂಗ ಇದೆ ಇದಕ್ಕೆ ಯಾವ ಲೋಹ ಸ್ಪರ್ಶಿದರು ಚಿನ್ನ ವಾಗುತ್ತಿತ್ತು ಈಗಾಗಿ ಈ ದೇವಸ್ಥಾನದ ಮೇಲೆ ವಿಗ್ರಹ ಚೋರರ ಭಯವಿತ್ತು

ಇದೆ ಕಾರಣಕ್ಕೆ ತಪಸ್ಸು ಮಾಡುತ್ತಿದ್ದ ಗರ್ಗ ಮುನಿಗಳು ಈ ಲಿಂಗಕ್ಕೆ ಗಳಗ ತೊಡಿಸುವ ಮೂಲಕ ರಕ್ಷಣೆ ನೀಡಿದ್ದರು ಎಂಬ ಪ್ರತೀತಿ ಇದೆ ಅಂದಿನಿಂದ ಇದು ಗಳಗೇಶ್ವರ ದೇವಸ್ಥಾನ ಎಂದು ಐತಿಹ ಪಡೆದುಕೊಂಡಿದೆ ಗಳಗನಾಥ ದೇವಸ್ಥಾನವನ್ನು ಚಾಲುಕ್ಯರ ದೊರೆ ವಿಕ್ರಮಾದಿತ್ಯನು ಹನ್ನೊಂದನೇ ಶತಮಾನದಲ್ಲಿ ನಿರ್ಮಿಸಿದ್ದರು .

ಗುಡಿಯ ಮೇಲೆ ಗುಹೆ ಕೂಡ ಇದೆ ಅಲ್ಲಿ ಹದಿನೈದು ಜನ ಕುಳಿತುಕೊಳ್ಳುವಷ್ಟು ವಿಶಾಲ ಜಾಗವಿದೆ ಅಲ್ಲಿಯೇ ಮುನಿಗಳು ಕುಳಿತು ಕಿಂಡಿಯ ಮೂಲಕ ಜ್ಯೋತಿರ್ಲಿಂಗದ ದರ್ಶನ ಪಡೆಯುತ್ತಿದ್ದರು ಗಳಿಗ ಹಾಕಿದ್ದರಿಂದ ಅಭಿಷೇಕಕ್ಕೆ ತೊಂದರೆ ಆಗುತ್ತದೆ ಎಂದು ಕೊಂಡು ಗಳಗಕ್ಕೆ ರಂಧ್ರ ಮಾಡಿ ಅಭಿಷೇಕ ಮಾಡಲಾಗುವ ಸಂಪ್ರದಾಯ ಬಂದಿತು ನಾಡಿನ ನದಿ ಎಂದೇ ಪ್ರಸಿದ್ಧರಾಗಿರುವ ತುಂಗೆ ಭದ್ರೆ ವರದೆ ಕುಮದ್ವತಿ ನದಿಗಳು ಹಾವೇರಿ ಜಿಲ್ಲೆಯ ಮೇವುಂಡಿ ಬಳಿ ಸಂಗಮ ವಾಗುತ್ತದೆ ಕೂಗಳತೆಯ ದೂರದಲ್ಲಿರುವ ಗಳಗನಾಥ ನ ಬಳಿ ಸ್ನಾನ ಮಾಡಿ ದರ್ಶನ ಪಡೆಯುತ್ತಾರೆ. ಈ ಕಾರಣಕ್ಕಾಗಿ ಪಂಚ ಲಿಂಗೇಶ್ವರ ಎಂಬ ಬಿರುದನ್ನು ಪಡೆದುಕೊಂಡಿದೆ ಗಳಗನಾಥ ದೇವಾಲಯ ಇಪ್ಪತ್ತು ಅಡಿ ಉದ್ದ ಹಾಗೂ ಹದಿನಾಲ್ಕು ಮೀಟರ್ ಅಗಲವಿದೆ .

ನಾಲ್ಕು ಸುಂದರ ಸ್ತಂಭಗಳು ಇದೆ ದೇವಾಲಯದ ಸುತ್ತಲೂ ಪೌರಾಣಿಕ ಕಥೆಗಳನ್ನು ಕೆತ್ತಲಾಗಿದೆ ಈ ದೇವಾಲಯದ ಆಕಾರ ಪಿರಮಿಡ್ ನಂತೆ ಇದೆ ನದಿಯ ನೆರೆ ಹಾವಳಿಯನ್ನು ಈ ದೇವಾಲಯವು ರಕ್ಷಿಸುತ್ತದೆ. ಇಲ್ಲಿನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಅನೇಕ ಸಮಾಧಿಗಳು ಬೆಳಕಿಗೆ ಬಂದಿದೆ ದಕ್ಷಿಣ ಭಾರತದ ಅದರಲ್ಲಿ ಕರ್ನಾಟಕದಲ್ಲಿ ಇರುವ ದೇವಾಲಯದಲ್ಲಿ ಈ ದೇವಾಲಯವು ಪ್ರವಾಸಿಗರನ್ನು ಆಕರ್ಷಿಸುತ್ತದೆ

ಶಿವ ಲಿಂಗವನ್ನು ಅಚ್ಚು ಕಚ್ಚಾಗಿ ನಿರ್ಮಿಸಲಾಗಿದೆ ದೇವಾಲಯದ ಒಳ ಗೋಡೆಗಳ ಮೇಲೆ ಹಲವಾರು ಶಿಲ್ಪ ಕಲೆಗಳನ್ನು ಕೆತ್ತಲಾಗಿದೆ ಅದರಲ್ಲಿ ಪಂಚ ತಂತ್ರದ ಕಥೆಗಳನ್ನು ಕೆತ್ತಲಾಗಿದೆ ವಿಶೇಷವಾಗಿ ಗಣಪತಿಯ ಸನ್ನಿಧಿಯನ್ನು ಕಾಣಬಹುದು ಹಲವು ದೇವತೆಗಳ ಪಂಚ ಲಿಂಗಗಳ ಕೆತ್ತನೆಯನ್ನು ಕಾಣಬಹುದು ಹಾವೇರಿ ನಗರದಿಂದ ನಲವತ್ತೈದು ಕಿಲೋಮೀಟರ್ ದೂರದಲ್ಲಿದೆ ಹಾಗೆಯೇ ರಾಣಿ ಬೆನ್ನುರಿನಿಂದ ಸುಮಾರು ಹದಿನಾಲ್ಕು ಕಿಲೋಮೀಟರ್ ದೂರದಲ್ಲಿದೆ ಹೀಗೆ ಈ ದೇವಾಲಯವು ಆಕರ್ಷಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!