ದೇಶದಲ್ಲಿ ಕೊರೋನಾ ವೈರಸ್ ಮಹಾಮಾರಿ ಮರಣ ಮೃದಂಗ ಬಾರಿಸುತ್ತಿರುವ ಹಿನ್ನಲೆಯಲ್ಲಿ ದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಇದರ ನಡುವೆ ತಮ್ಮ ಪ್ರಾಣದ ಹಂಗನ್ನು ತೊರೆದು ವೈದ್ಯರು ಪೊಲೀಸ್ ಇಲಾಖೆಯವರು ಹಾಗೂ ಅರೋಗ್ಯ ಇಲಾಖೆಯವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದೇಶದಲ್ಲಿ ಕೊರೋನಾ ವಿರುದ್ಧ ಹೋರಾಡಲು ಕೆಲವರು ಕೋಟಿ ಗಟ್ಟಲೆ ಹಣವನ್ನು ದೇಣಿಗೆ ನೀಡಿದ್ದಾರೆ ಅಲ್ಲದೆ ಸ್ವಯಂ ಸೇವಕರು ಬಡವರಿಗೆ ನಿರ್ಗತಿಕರಿಗೆ ಆಹಾರ ರೇಷನ್ ಇತ್ಯಾದಿಗಳನ್ನು ಹಂಚುತ್ತಿದ್ದಾರೆ ಹೀಗಿರುವಾಗ ಶಿಮೊಗ್ಗದ ಸಹ್ಯಾದ್ರಿ ಪೆಟ್ರೋಲ್ ಮಾಲೀಕರು ಕೊರೋನಾ ವಾರಿಯರ್ಸ್ ಗಳಿಗೆ ಉಚಿತವಾಗಿ ಒಂದು ಲೀಟರ್ ಪೆಟ್ರೋಲ್ ನೀಡುತ್ತಿದ್ದಾರೆ.
ಹೌದು ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಪೊಲೀಸರು ಹಾಗು ವೈದ್ಯರು ನರ್ಸ್ ಗಳು ಆಸ್ಪತ್ರೆ ಸಿಬ್ಬಂದಿಗಳಿಗೆ ಹೀಗಾಗಲೇ ಒಂದು ಲೀಟರ್ ಉಚಿತ ಪೆಟ್ರೋಲ್ ನೀಡುತ್ತಿದ್ದಾರೆ ಇನ್ನು ಮುಂದಿನ ದಿನಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಹಾಗೂ ಹೋಂ ಗಾರ್ಡ್ ಹಾಗೂ ಕೊರೋನಾ ವಿರುದ್ಧ ಹೋರಾಡುತ್ತಿರುವ ವ್ಯಕ್ತಿಗಳಿಗೆ ಪೆಟ್ರೋಲ್ ಉಚಿತವಾಗಿ ನೀಡುವುದಾಗಿ ಹೇಳಿದ್ದಾರೆ.
ಇನ್ನು ಉಚಿತ ಪೆಟ್ರೋಲ್ ಪಡೆಯಲು ಕರೋನಾ ವಾರಿಯರ್ಸ್ ಗಳು ತಮ್ನ ಗುರುತಿನ ಚೀಟಿಯನ್ನು ತೋರಿಸಿ ಈ ಅನುಕೂಲವನ್ನು ಪಡೆಯಬಹುದಾಗಿದೆ, ದೇಶ ಕಷ್ಟದ ಸ್ಥಿತಿಯಲ್ಲಿದೆ ಹಾಗಾಗಿ ನೀವು ಕೂಡ ನಿಮಗೆ ಆಗುವ ಮಟ್ಟಿಗೆ ಸ್ವಲ್ಪ ಆದ್ರೂ ಸಹಾಯ ಮಾಡಿ ಎಂಬುದಾಗಿ ಶಿವಮೊಗ್ಗದ ಬಾಲರಾಜ್ ಅರಸು ರಸ್ತೆಯಲ್ಲಿ ಇರುವ ಸಹ್ಯಾದ್ರಿ ಪೆಟ್ರೋಲ್ ಬಂಕ್ನ ಮಾಲೀಕರು ತಿಳಿಸಿದ್ದಾರೆ.