Free Laptop Scheme 2023: ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೂತನ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ (Free Laptop Scheme) ಸಿಗುತ್ತದೆ ಈಗಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಬೇಕಾಗುವ ದಾಖಲಾತಿಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡುತ್ತೇವೆ. ಇದು ಕಂಪ್ಯೂಟರ್ ಯುಗ ನಾವು ಯಾವುದೇ ರೀತಿಯ ಮಾಹಿತಿ ಹಾಗೂ ಕೆಲಸ ಕಾರ್ಯ ಮಾಡಲು ನಮಗೆ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್, ಇಂಟರ್ನೆಟ್ (Internet) ಅವಶ್ಯಕತೆ ಇದ್ದೇ ಇರುತ್ತದೆ ಹಾಗಾಗಿ ವಿದ್ಯಾರ್ಥಿಗಳಿಗೂ ಉಪಯೋಗವಾಗಲಿ ಎಂದು ದ್ವಿತೀಯ ಪಿಯುಸಿ ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರ ಉಚಿತ ಲ್ಯಾಪ್ಟಾಪ್ ನೀಡುತ್ತಿದೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ತೊಂದರೆ ಹಾಗೂ ತಾಂತ್ರಿಕ ಶಿಕ್ಷಣದಿಂದ ಹಿಂದುಳಿಯಬಾರದೆಂದು ಸರ್ಕಾರ ಉಚಿತ ಲ್ಯಾಪ್ಟಾಪ್ ಕಾರ್ಯವನ್ನು ಹಮ್ಮಿಕೊಂಡಿದೆ. ಈ ಕೂಡಲೇ ಅರ್ಜಿ ಸಲ್ಲಿಸಿ.
ಈ ಅರ್ಜಿ ಸಲ್ಲಿಸಲು ಕೆಲವು ಅರ್ಹತೆಯನ್ನು ಹೊಂದಿರಬೇಕು ಅದು ಏನೆಂದರೆ
ಮೊದಲನೇದಾಗಿ ವಿದ್ಯಾರ್ಥಿಯು ಪಿಯುಸಿಯಲ್ಲಿ 75% ಶ್ರೇಣಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಪಿಯುಸಿ ಮುಗಿದ ನಂತರ ಇಂಜಿನಿಯರಿಂಗ್ (Engineering) ಅಥವಾ ವೈದ್ಯಕೀಯ ಕೋರ್ಸ್, ಪಾಲಿಟೆಕ್ನಿಕ್ ಕೋರ್ಸ್ ಗಳಿಗೆ ಸೇರಿರಬೇಕು. ಅರ್ಜಿ ಸಲ್ಲಿಸುವ ಸಮಯದಲ್ಲಿ ಕೆಲವು ಪೂರಕ ಮಾಹಿತಿಗಳನ್ನು ನೀವು ಒದಗಿಸಬೇಕಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಗೂಗಲ್ ಗೆ ಹೋಗಿ ಈ ವೆಬ್ಸೈಟ್ dce.karnataka.gov.in ಸರ್ಚ್ ಮಾಡಬೇಕು ಆಗ ಹೋಂ ಪೇಜ್ ನಲ್ಲಿ ಕರ್ನಾಟಕ ಉಚಿತ ಲ್ಯಾಪ್ಟಾಪ್ ಯೋಜನೆ 2023 ಎನ್ನುವುದನ್ನು ಕ್ಲಿಕ್ ಮಾಡಿ. ನಂತರ ಲಾಗಿನ್ ಆಗಿ ಅಲ್ಲಿ ಕೇಳಿರುವಂತಹ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇನ್ನು ಕೆಲವು ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ. ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಒಂದು ಸಲ ಎಲ್ಲವನ್ನು ಪರಿಶೀಲನೆ ಮಾಡಿ ಸಬ್ಮಿಟ್ ಅನ್ನು ಪ್ರೆಸ್ ಮಾಡಿ ಅಲ್ಲಿಗೆ ನಿಮ್ಮ ಅಪ್ಲಿಕೇಷನ್ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು
ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಾತಿ ಪ್ರಮಾಣ ಪತ್ರ, ವಯಸ್ಸಿನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ ಹಾಗೂ ದ್ವಿತೀಯ ಪಿಯುಸಿ ಮುಗಿದ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ದಾಖಲಾಗಿರುವ ಬಗ್ಗೆ ಪುರಾವೆ ಇಷ್ಟು ದಾಖಲಾತಿಗಳು ಅರ್ಜಿ ಸಲ್ಲಿಸಲು ಬೇಕಾಗುತ್ತದೆ. Govt Scheme: ಕೇಂದ್ರ ಸರ್ಕಾರದಿಂದ ಹೊಸ ಯೋಜನೆ, ತಿಂಗಳಿಗೆ 5000 ರೂ. ಸಿಗಲಿದೆ ಆದ್ರೆ ಈ ದಾಖಲೆ ಕಡ್ಡಾಯ