free gas scheme in india: ಈಗಿನ ಕಾಲದಲ್ಲಿ ನಮ್ಮ ದೇಶದಲ್ಲಿ ಹಣದುಬ್ಬರ ಹೆಚ್ಚಾಗಿ, ದಿನಬಳಕೆ ವಸ್ತುಗಳ ಬೆಲೆ ಏರಿಕೆ ಇಂದ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ LPG ಸಿಲಿಂಡರ್ ಗಳ ಬೆಲೆ ಕೂಡ ಜಾಸ್ತಿಯಾಗಿ ಕೊಂಡುಕೊಳ್ಳುವುದು ಕಷ್ಟ ಆಗುತ್ತಿತ್ತು. ಅದೇ ವೇಳೆಯಲ್ಲೇ ಕೇಂದ್ರ ಸರ್ಕಾರ ಈಗ ಗುಡ್ ನ್ಯೂಸ್ ಒಂದನ್ನು ನೀಡಿದೆ. ಇದೀಗ ಮತ್ತೊಮ್ಮೆ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಿದೆ. ರಕ್ಷಾಬಂಧನ ಹಬ್ಬದ ವೇಳೆ ಹೆಣ್ಣುಮಕ್ಕಳಿಗೆ ಗಿಫ್ಟ್ ಎಂದು ಪಿಎಮ್ ಮೋದಿ ಅವರು ಮನೆಯಲ್ಲಿ ಬಳಸುವ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಮಾಡಿತು.
ಪಿಎಮ್ ಮೋದಿ ಉಜ್ವಲ ಯೋಜನೆಯ ಅಡಿಯಲ್ಲಿ ಸಿಲಿಂಡರ್ ಪಡೆದಿರುವವರಿಗೆ ಈಗಾಗಲೇ ವಾರ್ಷಿಕವಾಗಿ 12 ಸಿಲಿಂಡರ್ ಗಳ ಮೇಲೆ ಸಬ್ಸಿಡಿ ಸಿಗುತ್ತಿದೆ. ಇದರಿಂದ ಈಗಾಗಲೇ 200 ರೂಪಾಯಿ ಸಬ್ಸಿಡಿ ಸಿಗುತ್ತಿದೆ. ಇದರ ಜೊತೆಗೆ ಇನ್ನು 200 ರೂಪಾಯಿಗಳ ಸಬ್ಸಿಡಿ ಸಿಗಲಿದ್ದು, ಒಟ್ಟಾರೆಯಾಗಿ 400 ರೂಪಾಯಿ ಸಬ್ಸಿಡಿ ಸಿಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ನಮ್ಮ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ದೇಶದ ಜನರಿಗೆ ಅನುಕೂಲ ಅಗುವಂಥ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಅವುಗಳಲ್ಲಿ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆ ಆಗಿದೆ, ಈ ಯೋಜನೆಯ ಉದ್ದೇಶ ದೇಶದ ಯಾವುದೇ ಮಹಿಳೆಯು ಅಡುಗೆ ಮಾಡುವಾಗ ಹೊಗೆ ಇರಬಾರದು ಎಂದು, ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಪಿಎಮ್ ಉಜ್ವಲ ಯೋಜನೆ ಇಂದ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಕೊಡುವ ನಿರ್ಧಾರ ಮಾಡಲಾಯಿತು. ಉಜ್ವಲ ಯೋಜೆನೆಗೆ ಅಪ್ಲೈ ಮಾಡಿದವರಿಗೆ ಫಿಲ್ ಆಗಿರುವ ಗ್ಯಾಸ್ ಸಿಲಿಂಡರ್, ಗ್ಯಾಸ್ ಸ್ಟವ್, ಗ್ಯಾಸ್ ಲೈಟರ್ , ರೆಗ್ಯುಲೇಟರ್ ಮತ್ತು Instruction Manual ಇದಿಷ್ಟನ್ನು ಉಚಿತವಾಗಿ ಕೊಡಲಾಗುತ್ತದೆ.
ಈ ಯೋಜನೆಯ ಸೌಲಭ್ಯ 8 ಕೋಟಿ ಜನರಿಗೆ ತಲುಪಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿತ್ತು, ಆದರೆ ಇಲ್ಲಿಯವರೆಗೂ ಸುಮಾರು 10 ಲಕ್ಷ ಜನರನ್ನು ತಲುಪಿದೆ. ಈ ವರ್ಷ 2023-24ನೇ ಸಾಲಿನಲ್ಲಿ ಸುಮಾರು 75 ಲಕ್ಷ ಕುಟುಂಬಕ್ಕೆ ಈ ಯೋಜನೆ ತಲುಪಬೇಕು ಎಂದು ಸರ್ಕಾರ ಕಾರ್ಯ ನಿರ್ವಹಿಸುತ್ತದೆ. ಈ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಮಾಹಿತಿ ನೀಡಿ, ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಉಜ್ವಲ ಯೋಜನೆಯಲ್ಲಿ ಗ್ಯಾಸ್ ಪಡೆಯುವವರಿಗೆ ಹೆಚ್ಚುವರಿಯಾಗಿ 200 ರೂಪಾಯಿ ಸಬ್ಸಿಡಿ ಸಿಗುತ್ತದೆ.
ಆದರೆ ವರ್ಷಕ್ಕೆ 12 ಸಿಲಿಂಡರ್ ಗಳ ಮೇಲೆ ಮಾತ್ರ ಸಬ್ಸಿಡಿ ಸಿಗುತ್ತದೆ. ಇನ್ನು ಈ ಯೋಜೆನೆಯ ಮೂಲಕ ಕನೆಕ್ಷನ್ ಪಡೆಯಬೇಕು ಎಂದರೆ ಕೆಲವು ಅರ್ಹತೆ ಇದೆ, ಆ ಕುಟುಂಬದವರು ಇದಕ್ಕಿಂತ ಮೊದಲು ಗ್ಯಾಸ್ ಕನೆಕ್ಷನ್ ಪಡೆದಿರಬಾರದು. ಉಜ್ವಲ ಯೋಜನೆಯ ಸೌಲಭ್ಯ ಸಿಗುವುದು, ಮೊದಲ ಸಾರಿ ಗ್ಯಾಸ್ ಕನೆಕ್ಷನ್ ಪಡೆಯುವುದಕ್ಕೆ ಮಾತ್ರ. ನೀವು ಉಜ್ವಲ ಯೋಜನೆಯಲ್ಲಿ ಗ್ಯಾಸ್ ಕನೆಕ್ಷನ್ ಪಡೆಯಬೇಕು ಎಂದರೆ, ನಿಮಗೆ ಹತ್ತಿರ ಇರುವ ಗ್ಯಾಸ್ ಏಜೆನ್ಸಿಗೆ ಹೋಗಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಮತ್ತು ಇನ್ನಿತರ ಕೆಲವು ಮಾಹಿತಿಗಳನ್ನು ಕೊಟ್ಟು ಅಪ್ಲಿಕೇಶನ್ ಹಾಕಬೇಕು.
ನಿಮ್ಮ ಅಪ್ಲಿಕೇಶನ್ ಅಪ್ರೂವ್ ಆದ ನಂತರ ನಿಮ್ಮ ಆಯ್ಕೆಯ ಗ್ಯಾಸ್ ಏಜೆನ್ಸಿ ಇಂದ ಗ್ಯಾಸ್ ಕನೆಕ್ಷನ್ ಸಿಗುತ್ತದೆ. ಆನ್ಲೈನ್ ಸಹ ಅಪ್ಲಿಕೇಶನ್ ಹಾಕಬಹುದು. ಇದಕ್ಕಾಗಿ ಆಕ್ಟೊಬರ್ ಇಂದ ವೆಬ್ಸೈಟ್ ಓಪನ್ ಆಗಲಿದೆ, ಆಗ ಆನ್ಲೈನ್ ಮೂಲಕ ಅಪ್ಲೈ ಮಾಡಿ, ಈ ಯೋಜನೆಯ ಸೌಲಭ್ಯ ಪಡೆಯಬಹುದು.