Free Gas Scheme: ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇಲ್ಲ ಎಂದರೆ, ಉಚಿತವಾಗಿ ಗ್ಯಾಸ್ ಸಿಲಿಂಡರ್ (Free Gas Scheme) ಪಡೆಯುವುದಕ್ಕೆ ಸರ್ಕಾರದಿಂದ ನಿಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಇದೀಗ ಸರ್ಕಾರ ನೀಡಿರುವ ಈ ಅವಕಾಶದಿಂದ ನೀವು ಗ್ಯಾಸ್ ಸಿಲಿಂಡರ್ ಗಾಗಿ ಅರ್ಜಿ ಸಲ್ಲಿಸಿ ಸುಲಭವಾಗಿ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಆನ್ಲೈನ್ ಮೂಲಕ ಗ್ಯಾಸ್ ಸಿಲಿಂಡರ್ ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರವೇ ನೀಡಿದೆ.
ನೀವು ಅರ್ಜಿ ಸಲ್ಲಿಸಿ, ಗ್ಯಾಸ್ ಸಿಲಿಂಡರ್ ಪಡೆಯುವುದು ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಮೂಲಕ. ಮಹಿಳೆಯರಿಗೆ ಈ ಯೋಜನೆಯ ಸಹಾಯ ಸಿಗಲಿದ್ದು, ಒಲೆಯಲ್ಲಿ ಅಡುಗೆ ಮಾಡುವಾಗ ಹೊಗೆ, ಧೂಳು ಮತ್ತು ಇನ್ನಿತರ ಕಾರಣಕ್ಕೆ ಮಹಿಳೆಯರಿಗೆ ಅನಾರೋಗ್ಯ ಕೂಡ ಉಂಟಾಗುತ್ತಿತ್ತು, ಆದರೆ ಪಿಎಮ್ ಅವರ ಈ ಹೊಸ ಯೋಜನೆಯ ಕಾರಣ ಇನ್ನುಮುಂದೆ ಯಾರಿಗೆ ಉಜ್ವಲ ಯೋಜನೆಯ ಫಲದಿಂದ ಯಾರು ಕೂಡ ತೊಂದರೆ ಅನುಭವಿಸುವ ಅವಶ್ಯಕತೆ ಇಲ್ಲ. ಇದು ಎಲ್ಲಾ ಮಹಿಳೆಯರಿಗೆ ಸಹಾಯ ಆಗುತ್ತಿರುವ ಯೋಜನೆ ಆಗಿದೆ.
ಮಹಿಳೆಯರಿಗಾಗಿ ಬಂದಿರುವ ಈ ಯೋಜನೆಗೆ ಈಗಾಗಲೇ 10.30 ಕೋಟಿ ಮಹಿಳೆಯರು ಅರ್ಜಿ ಸಲ್ಲಿಸಿ, ಉಚಿತ ಗ್ಯಾಸ್ ಸಂಪರ್ಕ ಪಡೆದಿದ್ದಾರೆ. ಹಾಗೆಯೇ ಈ ವರ್ಷ ಇನ್ನು 75 ಲಕ್ಷ ಜನರು ಅರ್ಜಿ ಸಲ್ಲಿಸಿದ್ದು, ಅವರಿಗು ಗ್ಯಾಸ್ ಸಂಪರ್ಕ ಸಿಕ್ಕಿದೆ. ಬಹಳಷ್ಟು ಜನರು ಈ ಯೋಜನೆಯ ಅನುಕೂಲ ಪಡೆದುಕೊಂಡಿದ್ದಾರೆ. ಈ ಯೋಜನೆಯಲ್ಲಿ ವರ್ಷಕ್ಕೆ 12 ಸಿಲಿಂಡರ್, 300 ಸಬ್ಸಿಡಿ ಸಹ ಸಿಗುತ್ತದೆ. ಈ ಯೋಜನೆಯ ಮೂಲಕ 6000 ರೂಪಾಯಿಗಳಿಗೆ ಸಿಲಿಂಡರ್ ಪಡೆಯಬಹುದು.
ಈ ಯೋಜನೆಯ ಸೌಲಭ್ಯ ಪಡೆಯಲು ಬೇಕಾಗುವ ಅರ್ಹತೆಗಳು ಏನೇನು ಎಂದು ನೋಡುವುದಾದರೆ.. *ಅರ್ಜಿ ಸಲ್ಲಿಸುವವರ ವಯಸ್ಸು 18 ವರ್ಷ ದಾಟಿರಬೇಕು. *ಮನೆಯಲ್ಲಿ ಮೊದಲೇ ಗ್ಯಾಸ್ ಸಿಲಿಂಡರ್ ಇದ್ದರೆ, ಮತ್ತೊಮ್ಮೆ ಕನೆಕ್ಷನ್ ಸಿಗುವುದಿಲ್ಲ. ಎಸ್ಸಿ, ಎಸ್ಟಿ, ಹಾಗೂ ಇನ್ನಿತರ ಹಿಂದುಳಿದ ವರ್ಗಕ್ಕೆ ಸೇರಿದವರು ಈ ಯೋಜನೆಯ ಸೌಲಭ್ಯ ಪಡೆಯಬಹುದು. ಬಡತನದ ರೇಖೆಗಿಂತ ಕಡಿಮೆ ಇರುವವರಿಗೆ ಮಾಡಿರುವ ಯೋಜನೆ ಇದು. ಅಂತ್ಯೋದಯ ಕಾರ್ಡ್ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಇದಕ್ಕಾಗಿ ಬೇಕಾಗುವ ದಾಖಲೆ ಯಾವುವು ಎಂದರೆ..
ಆಧಾರ್ ಕಾರ್ಡ್ ಐಡಿ, ರೇಶನ್ ಕಾರ್ಡ್, ಅಡ್ರೆಸ್ ಪ್ರೂಫ್, ಕೆವೈಸಿ ಆಗಿರುವ ಬ್ಯಾಂಕ್ ಅಕೌಂಟ್ ಡೀಟೇಲ್ಸ್, ಫೋನ್ ನಂಬರ್. ಈ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ ದಾಖಲೆಗಳನ್ನು ಸಲ್ಲಿಸಿ, ಹೊಸ ಸಿಲಿಂಡರ್ ಗೆ ಅರ್ಜಿ ಸಲ್ಲಿಸಬಹುದು.
ಈ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ ಎಂದರೆ..
https://www.pmuy.gov.in/ujjwala2.html ಮೊದಲು ಈ ವೆಬ್ಸೈಟ್ ಲಿಂಕ್ ಓಪನ್ ಮಾಡಿ. ಇಲ್ಲಿ ಉಜ್ವಲಾ 2.0 ಯೋಜನೆಯನ್ನು ಆಯ್ಕೆ ಮಾಡಿ, ಇಲ್ಲಿ ನಿಮಗೆ ಯಾವ ಕಂಪನಿ ಗ್ಯಾಸ್ ಕನೆಕ್ಷನ್ ಬೇಕು ಎಂದು ಸೆಲೆಕ್ಟ್ ಮಾಡಿ. ಈಗ Click here to apply ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ಈಗ ಅಪ್ಲಿಕೇಶನ್ ನಲ್ಲಿ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ. ಉಚಿತ ಗ್ಯಾಸ್ ಕನೆಕ್ಷನ್ ಪಡೆಯುವುದಕ್ಕೆ ಕೆವೈಸಿ ಮಾಡಿಸುವುದು ಕಡ್ಡಾಯ ಆಗಿದೆ, ಹಾಗಾಗಿ ಆನ್ಲೈನ್ ಮೂಲಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ.