ಕಾಂಗ್ರೆಸ್ ಸರ್ಕಾರ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಸರ್ಕಾರ ಘೋಷಣೆ ಮಾಡಿದೆ ಆದರೆ ಬಾಡಿಗೆ ಮನೆಯಲ್ಲಿ ಇರುವವರಿಗೂ ಕೂಡ ವಿದ್ಯುತ್ ಉಚಿತ ನೀಡುತ್ತಾರಾ? ಹೌದು, ಸರ್ಕಾರ ಬಾಡಿಗೆ ಮನೆಯಲ್ಲಿರುವವರಿಗೂ ಕೂಡ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದೆ.
ಐದು ಗ್ಯಾರೆಂಟಿಯಲ್ಲಿ ಒಂದಾದ ಗೃಹಜ್ಯೋತಿ ಯೋಜನೆ, ಮೊದಲಿಗೆ ಎಲ್ಲರೂ ಸರ್ಕಾರ ಈ ಯೋಜನೆಗೆ ನಿಯಮಗಳನ್ನು ಹೊಡ್ದಿ ಸ್ವಲ್ಪ ಜನರಿಗೆ ಮಾತ್ರ ವಿದ್ಯುತ್ ಉಚಿತವಾಗಿ ಕೊಡುತ್ತದೆ ಎಂದು ಅಂದುಕೊಂಡಿದ್ದರು. ಆದರೆ ಸರ್ಕಾರ ಹಾಗೆ ಮಾಡದೆ ಪ್ರತಿಯೊಂದು ಮನೆಗೂ 200 ಯೂನಿಟ್ ಉಚಿತ ವಿದ್ಯುತ್ ಯೋಜನೆ ನೀಡಿದೆ ಹಾಗೆ ಕೆಲವರಿಗೆ ಸಂಶಯ ಇರಬಹುದು ನಾವು ಬಾಡಿಗೆ ಮನೆಯಲ್ಲಿ ಇದ್ದೇವೆ ನಮಗೆ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತದೆಯಾ ಅಥವಾ ಇಲ್ಲವಾ ಎಂದು? ಆದರೆ ಸರ್ಕಾರ ಇದಕ್ಕೂ ಕೂಡ ಸ್ಪಷ್ಟನೆ ನೀಡಿದೆ ಬಾಡಿಗೆ ಮನೆಯಲ್ಲಿದ್ದವರಿಗೂ ಕೂಡ 200 ಯೂನಿಟ್ ವಿದ್ಯುತ್ ಉಚಿತ.
ಕೇವಲ ಬಿಪಿಎಲ್ ಕಾರ್ಡ್ ಹೊಂದಿರುವವರಿಗಷ್ಟೇ ಸೀಮಿತವಲ್ಲದೆ ಎಪಿಎಲ್ ಕಾರ್ಡ್ ರವರು ಕೂಡ 200 ಯೂನಿಟ್ ಗಿಂತ ಕಮ್ಮಿ ಬಳಸಿದರೆ ಅವರಿಗೂ ಕೂಡ ವಿದ್ಯುತ್ ಉಚಿತ ಅಷ್ಟೇ ಅಲ್ಲದೆ ಬಾಡಿಗೆ ಮನೆಯಲ್ಲಿ ಇರುವರಿಗೂ ಕೂಡ 200 ಯೂನಿಟ್ ವಿದ್ಯುತ್ ಉಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನ ವರು ಕ್ಯಾಬಿನೆಟ್ ಸಭೆಯಲ್ಲಿ ಹಾಗೂ ಮಾಧ್ಯಮದ ಮುಂದೆ ಹೇಳಿದ್ದಾರೆ.