Free bus Mysore: ರಾಜ್ಯದಲ್ಲಿ ಇದೀಗ ಎಲ್ಲಿ ನೋಡಿದರು ಕೂಡ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರೆಂಟಿ ಗಳದ್ದೇ ಸುದ್ದಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರೋದೇ ಈ ಗ್ಯಾರಂಟಿಗಳಿಂದ ಎಂಬುದಾಗಿ ಜನರ ಮಾತು, ಇದೀಗ ಗೃಹ ಜ್ಯೋತಿ, ಮಹಿಳೆಯರ ಶಕ್ತಿ ಯೋಜನೆ, ಗೃಹ ಲಕ್ಷ್ಮಿ ಯೋಜನೆಯದ್ದೇ ಹೆಚ್ಚು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಕೂಡ. ಮುಖ್ಯ ವಾಗಿ ವಿಷಯಕ್ಕೆ ಬರೋಣ.

ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ಮಾಡಲಾಗಿದೆ, ಈಗಿರುವಾಗ ಪುರುಷರು ಕೂಡ ನಮಗೂ ಉಚಿತ ಪ್ರಯಾಣ ಘೋಷಣೆ ಮಾಡಿ, ನಾವು ಮತ ಹಾಕಿಲ್ಲವೇ? ಎಂಬುದಾಗಿ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ, ಅಷ್ಟೇ ಅಲ್ಲ ಎಲ್ಲ ಯೋಜನೆಗಳು ಬರಿ ಮಹಿಳೆಯರಿಗೆ ಕೊಟ್ಟರೆ ನಾವು ಏನ್ ಮಾಡಬೇಕು ಅನ್ನೋ ಕೆಲವು ಅಭಿಪ್ರಾಯಗಳ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಈ ಜಿಲ್ಲೆಯಲ್ಲಿ ಪುರುಷರಿಗೂ ಉಚಿತ ಪ್ರಯಾಣ

ಈ ಜಿಲ್ಲೆಯಲ್ಲಿ ಪುರುಷರಿಗೂ ಉಚಿತ ಪ್ರಯಾಣ ಘೋಷಣೆ: ಹೌದು ಮೈಸೂರ್ ಜಿಲ್ಲೆಯ ಜನರಿಗೆ ಅದು ಹೇಗೆ ಅನ್ನೋದನ್ನ ವಿವರಿಸುತ್ತೇವೆ ನೋಡಿ. ಇದೀಗ ರಾಜ್ಯದಲ್ಲಿ ಆಷಾಢ ಮಾಸ ಆರಂಭವಾಗಿದೆ. ಇದರ ಸಲುವಾಗಿ ಭಕ್ತಾದಿಗಳು ಈ ಮಾಸದಲ್ಲಿ ಶ್ರೀ ಚಾಮುಂಡೇಶ್ವರಿ ಮಾತೆಗೆ ವಿಶೇಷವಾಗಿ ಪೂಜೆ ಪುರಸ್ಕಾರಗಳು ಮಾಡುತ್ತಾರೆ. ಆಷಾಢ ಮಾಸದ ಶುಕ್ರವಾರದಂದು ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುವ ಸಂಪ್ರದಾಯ ಇಂದಿನಿಂದ ನಡೆದುಕೊಂಡು ಬಂದಿದೆ.

ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿವೆ ವಿಶೇಷವಾಗಿ ಅನುಕೂಲವಾಗುವಂತೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಪೂರ್ಣನಗರ ಬಸ್ ನಿಲ್ದಾಣದಿಂದ ದಿನವಿಡೀ 56 ಬಸ್‌ಗಳಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಹಿಳೆ ಪುರುಷರಿಗೆ ಎಲ್ಲರಿಗೂ ಇದರಲ್ಲಿ ಉಚಿತ ಇರುತ್ತೆ

ಇಲ್ಲಿನ ಬಸ್ ವ್ಯವಸ್ಥೆ ಹೀಗಿದೆ: ಬೆಳಗಿನ ಜಾವ 3.30ರಿಂದ ರಾತ್ರಿ 11ರವರೆಗೆ ಸಂಚರಿಸಲಿವೆ. ಹೆಚ್ಚಿನ ಬಸ್‌ಗಳ ವ್ಯವಸ್ಥೆ ಪ್ರತಿ ಆಷಾಢ ಶುಕ್ರವಾರ ಹಾಗೂ ತಾಯಿ ಚಾಮುಂಡೇಶ್ವರಿ ವರ್ಧಂತಿಯಂದು ಬೆಟ್ಟಕ್ಕೆ ಹೆಚ್ಚಿನ ಬಸ್‌ಗಳ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ಧವಾಗಿದೆ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!