Free Bus Karnataka: ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿಯಲ್ಲಿ ಒಂದು ಗ್ಯಾರಂಟಿ ಈಗಾಗಲೇ ಜಾರಿಗೊಳಿಸಿದೆ ಅದು ಯಾವುದೆಂದರೆ ಶಕ್ತಿ ಯೋಜನೆ ಅಂದರೆ ಕರ್ನಾಟಕದ ಮಹಿಳೆಯರು ಉಚಿತವಾಗಿ (Free Bus) ಬಸ್ ನಲ್ಲಿ ಪ್ರಯಾಣ ಮಾಡಬಹುದು. ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಗೊತ್ತಿರಬೇಕಾದ ವಿಷಯದಲ್ಲಿ ನಾವು ಇಲ್ಲಿ ತಿಳಿಸಿಕೊಡುತ್ತಿದ್ದೆವೆ.
ಬೆಂಗಳೂರಿನಲ್ಲಿ ಸಿದ್ದರಾಮಯ್ಯನವರು ಹಾಗೂ ಉಳಿದ ಜಿಲ್ಲೆಗಳಲ್ಲಿ ಆ ಜಿಲ್ಲೆಯ ಉಸ್ತುವಾರಿ ಸಚಿವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆ ಮೊದಲಿಗೆ ಮಹಿಳೆಯರಿಗೆ ಮಾತ್ರ ಎಂದು ಹೇಳಿದ್ದರು ಈಗ ತೃತೀಯ ಲಿಂಗದವರಿಗೂ ಕೂಡ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ ಎಂದು ಹೇಳಿದ್ದಾರೆ.
ಮಹಿಳೆಯರು ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಲು ಒಂದು ಸ್ಮಾರ್ಟ್ ಕಾರ್ಡ್ ತೆಗೆದುಕೊಳ್ಳಬೇಕಾಗುತ್ತದೆ ಆ ಕಾರ್ಡಿನ ಹೆಸರು ಶಕ್ತಿ ಸ್ಮಾರ್ಟ್ ಕಾರ್ಡ್. ಈ ಕಾರ್ಡನ್ನು ಮಾಡಿಸಲು ಮೂರು ತಿಂಗಳು ಅವಕಾಶ ನೀಡುತ್ತಾರೆ ಈ ಯೋಜನೆಗೂ ಕೂಡ ಸೇವಾ ಸಿಂಧುವಿನ ಮೂಲಕ ಅರ್ಜಿ ಸಲ್ಲಿಸಿ ಹಾಗೂ ಫಾರ್ಮ್ ತೆಗೆದುಕೊಂಡು ಅದನ್ನು ತುಂಬಿ ಸಾರಿಗೆ ಇಲಾಖೆಗೆ ಕೊಟ್ಟ ನಂತರ ಅವರು ವೆರಿಫಿಕೇಶನ್ ಮಾಡಿ ನಿಮಗೆ ಸ್ಮಾರ್ಟ್ ಕಾರ್ಡ್ ಅನ್ನು ನೀಡುತ್ತಾರೆ. ಸ್ಮಾರ್ಟ್ ಕಾರ್ಡ್ ಕೊಡುವ ತನಕ ನಿಮ್ಮ ಐಡಿ ಪ್ರೂಫ್ ಅನ್ನು ತೋರಿಸಿ ಉಚಿತವಾಗಿ ಬಸ್ ನಲ್ಲಿ ಸಂಚರಿಸಬಹುದು.
ಯಾವ ಯಾವ ಬಸ್ನಲ್ಲಿ ಉಚಿತ ಪ್ರಯಾಣವೆಂದರೆ ನಗರ ಸಾರಿಗೆ, ಕೆ.ಎಸ್.ಆರ್.ಟಿ.ಸಿ (KSRTC) ಬಸ್ ,ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಹಾಗೂ ಎಕ್ಸ್ಪ್ರೆಸ್ ಬಸ್ ಗಳನ್ನು ಕೂಡ ಉಚಿತವಾಗಿ ಸಂಚರಿಸಬಹುದು. ಕರ್ನಾಟಕದ ಒಳಗಡೆ ಸಂಚರಿಸುವ ಬಸ್ಗಳಿಗೆ ಮಾತ್ರ ಈ ಯೋಜನೆ ಸೀಮಿತವಾಗಿರುತ್ತದೆ. ಯಾವುದೇ ಖಾಸಗಿ ಬಸ್ಗಳಿಗೆ ಯೋಜನೆ ಸೀಮಿತವಾಗಿರುವುದಿಲ್ಲ. ಎಲ್ಲರೂ ಈ ಯೋಜನೆಯನ್ನು ಸದುಪಯೋಗ ಸದುಪಯೋಗಪಡಿಸಿಕೊಳ್ಳಿ.