Free Bike Schemes in Karnataka: ಸರ್ಕಾರವು ನಮ್ಮ ಜನರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇವುಗಳಿಂದ ಜನರಿಗೂ ಅನುಕೂಲ ಆಗುತ್ತಿದೆ. ಇದೀಗ ಸರ್ಕಾರವು ಆಯ್ದ ವರ್ಗದ ಜನರಿಗೆ ಉಚಿತವಾಗಿ ಬೈಕ್ ವಿತರಣೆ ಮಾಡುವ ಹೊಸ ಯೋಜನೆ ಒಂದನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಬೈಕ್ ವಿತರಣೆ ಮಾಡಲಾಗುತ್ತದೆ, (Free Bike Schemes) ಇದನ್ನು ವಿಶೇಷವಾಗಿ ಅಂಗವಿಕಲರಿಗೆ ಜಾರಿಗೆ ತಂದಿರುವ ಯೋಜನೆ ಆಗಿದೆ.

ನಮಗೆಲ್ಲ ಗೊತ್ತಿರುವ ಬಹಳಷ್ಟು ಜನ ಅಂಗವಿಕಲರು ತಮಗೆ ತೊಂದರೆ ಇದ್ದರು ಸಹ ಸಾಧನೆಗಳನ್ನು ಮಾಡಿದ್ದಾರೆ. ಬದುಕಿನ ಬಗ್ಗೆ ಉತ್ಸಾಹ ಕಳೆದುಕೊಳ್ಳದೆ ಸ್ವಾಭಿಮಾನಾದಿಂದ ಬದುಕು ಸಾಗಿಸುತ್ತಿದ್ದಾರೆ. ಇಂಥವರಿಗೆ ಸರ್ಕಾರವು ತ್ರಿಚಕ್ರ ಬೈಕ್ ಗಳನ್ನು ಉಚಿತವಾಗಿ ನೀಡುವ ನಿರ್ಧಾರ ಮಾಡಿದೆ. 2011ರಲ್ಲಿ ನಮ್ಮ ರಾಜ್ಯದಲ್ಲಿ ಮಾಡಿರುವ ಜನಗಣತಿಯ ಅನುಸಾರ ಒಟ್ಟು 13,24,205 ವಿಕಲಚೇತನರಿದ್ದಾರೆ.

ಇವರ ಪೈಕಿ 4000 ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನವನ್ನು ಕೊಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಜಿಲ್ಲೆಗಳ ಅನುಸಾರ ವಾಹನಗಳನ್ನು ನೀಡಲಾಗುತ್ತದೆ, ಒಂದು ಜಿಲ್ಲೆಯಲ್ಲಿ ಎಷ್ಟು ವಿಕಲಚೇತನರು ಇದ್ದಾರೆ ಎನ್ನುವ ಆಧಾರದ ಮೇಲೆ ಯಾವ ಜಿಲ್ಲೆಗೆ ಎಷ್ಟು ಬೈಕ್ ಕೊಡಬೇಕು ಎನ್ನುವುದು ನಿರ್ಧಾರ ಆಗಲಿದೆ. ಸೊಂಟದ ಮೇಲ್ಭಾಗ ಕೆಲಸ ಮಾಡದ ವಿಕಲಚೇತನರಿಗೆ ತ್ರಿಚಕ್ರ ಬೈಕ್ ಗಳನ್ನು ನೀಡಲಾಗುತ್ತದೆ. ಈ ವಾಹನದ ಸಹಾಯದಿಂದ ಅವರು ಇಂಡಿಪೆಂಡೆಂಟ್ ಆಗಿ ಜೀವನ ನಡೆಸಬಹುದು.

ಕೆಲವು ವಿಕಲಚೇತನರು ಉದ್ಯೋಗ ಮಾಡುತ್ತಿದ್ದಾರೆ, ಅಂಗಡಿ ಇಟ್ಟುಕೊಂಡಿರುತ್ತಾರೆ, ಫೋನ್ ಬೂತ್ ಇಟ್ಟುಕೊಂಡಿರುತ್ತಾರೆ. ಅವರು ತಮ್ಮ ಮನೆಯಿಂದ ಆ ಜಾಗಕ್ಕೆ ಹೋಗಲು ಈ ವಾಹನಗಳಿಂದ ಅನುಕೂಲ ಆಗುತ್ತದೆ. ಈ ಯೋಜನೆಗೆ ಅರ್ಜಿ ಹಾಕುವ ವಿಕಲಚೇತನರ ಹತ್ತಿರ LLR ಇರಬೇಕು. ಹಾಗೆಯೇ ಇವರು ವಿಶೇಷಚೇತನರು ಎನ್ನುವುದಕ್ಕೆ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಇನ್ಕಮ್ ಸರ್ಟಿಫಿಕೇಟ್ ಮತ್ತು ಇನ್ನಿತರ ದಾಖಲೆಗಳು ಬೇಕಾಗುತ್ತದೆ..

ಹಿರಿಯ ನಾಗರೀಕ ಕಲ್ಯಾಣ ಇಲಾಖೆಗೆ ಹೋಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ವಿಶೇಷಚೇತನರಿಗೆ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ. ಇದಕ್ಕಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮುಂದಾಳತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗುತ್ತದೆ. ಇವರಿಗೆ ನೀಡುವ ತ್ರಿಚಕ್ರ ವಾಹನಗಳ ತಯಾರಿಕೆ ಮತ್ತು ವಿತರಣೆಗೆ ಟೆಂಡರ್ ಕರೆಯಲಾಗುತ್ತದೆ. ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು https://dwdsc.karnataka.gov.in/ ಈ ಲಿಂಕ್ ಗೆ ಭೇಟಿ ನೀಡಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!