ಕೆಲವೊಂದು ಸಂಸ್ಥೆಗಳು ತಮಗೆ ಅಭ್ಯರ್ಥಿಗಳು ಬೇಕಾದಾಗ ಅಧಿಸೂಚನೆಯನ್ನು ಹೊರಡಿಸುತ್ತವೆ. ಆದರೆ ಎಲ್ಲಾ ಸಂಸ್ಥೆಗಳು ಅಧಿಸೂಚನೆ ಹೊರಡಿಸುವುದಿಲ್ಲ. ಏಕೆಂದರೆ ಅವುಗಳು ಅವರಿಗೆ ಬೇಕಾದಂತೆ ಅಭ್ಯರ್ಥಿಗಳನ್ನು ತುಂಬಿಸಿಕೊಳ್ಳುತ್ತಾರೆ. ಹಾಗೆಯೇ ಕೇಂದ್ರ ಲೋಕಸೇವಾ ಆಯೋಗವು ಇದರ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿದೆ. ಆದ್ದರಿಂದ ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕೇಂದ್ರ ಲೋಕಸೇವಾ ಆಯೋಗದಿಂದ ಅರಣ್ಯ ಇಲಾಖೆಯಲ್ಲಿ ಅಭ್ಯರ್ಥಿಗಳಿಗಾಗಿ ನೇಮಕಾತಿಯನ್ನು ಕರೆಯಲಾಗಿದೆ. ಈ ಆಯೋಗವು ಪ್ರತಿವರ್ಷ ನೇಮಕಾತಿಯನ್ನು ಮಾಡಿಕೊಳ್ಳುತ್ತದೆ. ಆಯ್.ಎಫ್.ಎಸ್. ಎಂದರೆ ಭಾರತೀಯ ಅರಣ್ಯ ಸೇವೆ. ಈಗಾಗಲೇ ಆನ್ಲೈನ್ ಅರ್ಜಿಗಳನ್ನು ತುಂಬಿಸಿಕೊಳ್ಳಲು ಆಗುತ್ತಿದೆ. ಒಟ್ಟಾರೆಯಾಗಿ 110 ಹುದ್ದೆಗಳಿಗೆ ನೇಮಕಾತಿಯನ್ನು ನಡೆಸಲಾಗುತ್ತಿದೆ. ಹಾಗೆಯೇ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಯಾರು ಬೇಕಾದರೂ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
ಇದೇ ತಿಂಗಳು ಮೂರನೇ ತಾರೀಖಿನಿಂದ ಅರ್ಜಿಯನ್ನು ತುಂಬಿಸಿಕೊಳ್ಳಲು ಆಗುತ್ತಿದೆ. ಹಾಗೆ ಇದೇ ತಿಂಗಳು 24 ನೇ ತಾರೀಖಿನವರೆಗೆ ತುಂಬಬಹುದು. ಹಾಗೆಯೇ ಇದೆ ತಾರೀಕು ಕೂಡ ಅರ್ಜಿ ಸಲ್ಲಿಸಲು ಮತ್ತು ಪಾವತಿಯನ್ನು ಮಾಡಲು ಕೊನೆಯ ದಿನಾಂಕ ಆಗಿದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಿಎಸ್ಸಿ ಪದವಿಯನ್ನು ಪಡೆದಿರಬೇಕು. ಹಾಗೆಯೇ ಕನಿಷ್ಠ ಎಂದರೆ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ ಎಂದರೆ 32ವರ್ಷ ಹೊಂದಿರಬೇಕು.
ಸಾಮಾನ್ಯ ಹಾಗೂ ಒಬಿಸಿ ವಿದ್ಯಾರ್ಥಿಗಳಿಗೆ ನೂರು ರೂಪಾಯಿಗಳನ್ನು ಅರ್ಜಿಶುಲ್ಕವನ್ನು ಇಡಲಾಗಿದೆ. ಹಾಗೆಯೇ ಎಸ್ಸಿ.ಎಸ್ಟಿ. ಮತ್ತು ಮಹಿಳಾ ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಅರ್ಜಿ ಶುಲ್ಕವಿಲ್ಲ. ಆಯ್ಕೆ ವಿಧಾನದ ಬಗ್ಗೆ ಹೇಳುವುದಾದರೆ ಎರಡು ಲಿಖಿತ ಪರೀಕ್ಷೆಗಳನ್ನು ಮಾಡಿ ಸಂದರ್ಶನವನ್ನು ನಡೆಸಲಾಗುತ್ತದೆ. ಎರಡು ಲಿಖಿತ ಪರೀಕ್ಷೆಗಳಲ್ಲಿ ಪಾಸಾದವರಿಗೆ ಮಾತ್ರ ಸಂದರ್ಶನವನ್ನು ಮಾಡಲಾಗುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವವರು ಆದಷ್ಟು ಬೇಗ ಸಲ್ಲಿಸಬಹುದು.