ಈಗಿನ ಆಧುನಿಕ ಯುಗದಲ್ಲಿ ಹಿಮ್ಮಡಿ ಒಡಕು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಮೊದಲು ಕೇವಲ ದೊಡ್ಡವರಿಗೆ ಮಾತ್ರ ಆಗುತ್ತಿತ್ತು.ಆದರೆ ಈಗ ಚಿಕ್ಕ ಮಕ್ಕಳಿಗೂ ಸಹ ಆಗುತ್ತಿದೆ. ಹಿಮ್ಮಡಿ ಒಡಕು ಇದು ಸೌಂದರ್ಯದ ಪ್ರಶ್ನೆ ಕೂಡ ಆಗಿದೆ. ಹಿಮ್ಮಡಿ ಒಡಕು ಆದರೆ ಬಹಳ ನೋವಾಗುತ್ತದೆ. ಆರೋಗ್ಯದ ಏರುಪೇರಿನ ಪ್ರತಿಫಲನ ಇದು ಎಂದು ಕೂಡ ಹೇಳಬಹುದು. ಆದ್ದರಿಂದ ನಾವು ಇಲ್ಲಿ ಹಿಮ್ಮಡಿ ಒಡಕಿನ ಪರಿಹಾರ ಉಪಾಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕೆಲವೊಮ್ಮೆ ಪೋಷಕಾಂಶಗಳ ಕೊರತೆಯಿಂದ ಹಿಮ್ಮಡಿ ಒಡಕು ಕಾಣಿಸಿಕೊಂಡಾಗ Omega-3 ಯನ್ನು ಬೆಳಗ್ಗೆ ಒಂದು ಮತ್ತು ಸಂಜೆ ಒಂದು ತೆಗೆದುಕೊಳ್ಳುವುದರಿಂದ ಹಿಮ್ಮಡಿ ಒಡಕು ಒಂದು ಅಥವಾ ಎರಡು ತಿಂಗಳಲ್ಲಿ ಕಡಿಮೆಯಾಗುತ್ತದೆ. ಹಾಗೆಯೇ ದೇಹಕ್ಕೆ ಚರ್ಮಕ್ಕೆ ಬೇಕಾದ ಪೋಷಕಾಂಶಗಳ ಅವಶ್ಯಕತೆ ಇರುತ್ತದೆ. ಬಾದಾಮಿ, ಶೇಂಗಾ, ಪಿಸ್ತಾ, ಉತ್ತುತ್ತೇ, ಮುಂತಾದ ನಟ್ಸ್ ಗಳನ್ನು ಸೇವಿಸುತ್ತಿರಬೇಕು.
ಹಾಗೆಯೇ ಹಣ್ಣುಗಳ ಬಗ್ಗೆ ಹೇಳುವುದಾದರೆ ಎಲ್ಲಾ ರೀತಿಯ ಹಣ್ಣುಗಳು ಕೂಡ ಅಮೃತಕ್ಕೆ ಸಮಾನ. ಆದ್ದರಿಂದ ಎಲ್ಲಾ ಹಣ್ಣುಗಳನ್ನು ಸೇವಿಸಬೇಕು. ಹಸಿರು ತರಕಾರಿಗಳು ಅದರಲ್ಲೂ ಬೇಯಿಸಿದ ಪಲ್ಯಗಳನ್ನು ಸೇವಿಸಬೇಕು. ಹಾಗೇ ತೆಂಗಿನಕಾಯಿಯ ಹಾಲು ಮತ್ತು ತೆಂಗಿನ ಎಣ್ಣೆ. ತಾಯಿಯ ಎದೆ ಹಾಲಿನಲ್ಲಿರುವ ಎಲ್ಲಾ ಅಂಶಗಳನ್ನು ಹೊಂದಿರುವ ಏಕ್ಯೆಕ ಆಹಾರ ಔಷಧಿ ಎಂದರೆ ಅದು ಶುದ್ಧ ತೆಂಗಿನ ಎಣ್ಣೆ.
ಹಿಮ್ಮಡಿ ಒಡಕಿಗೆ ಮನೆಯಲ್ಲಿ ಮಾಡುವ ಒಂದು ಸುಲಭವಾದ ಉಪಾಯ ಇದೆ. ಅದೇನೆಂದರೆ ಮೊದಲು ಜೇನಿನ ಮೇಣವನ್ನು ತಂದುಕೊಳ್ಳಬೇಕು. ನಂತರ ಅರಿಶಿನ ಪುಡಿ ಹಳ್ಳಿಯಲ್ಲಿ ತಯಾರಿಸಿದ್ದು ಆದರೆ ಬಹಳ ಒಳ್ಳೆಯದು. ನಂತರ ಶುದ್ಧ ಕೊಬ್ಬರಿ ಎಣ್ಣೆ ಬೇಕಾಗುತ್ತದೆ. ಈಗ ಮಾಡುವ ವಿಧಾನವೇನೆಂದರೆ ಮೊದಲು ಒಂದು ಬಾಣಲೆಗೆ ಜೇನಿನ ಮೇಣ ಹಾಕಿದಾಗ ಅದು ಕರಗುತ್ತದೆ.ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಬೇಕು. ಆಮೇಲೆ ಸ್ವಲ್ಪ ಬಿಸಿಯಾದಾಗ ಎರಡೂ ಮಿಶ್ರಣಗೊಳ್ಳುತ್ತದೆ. ನಂತರ ಅದಕ್ಕೆ ಅರಿಶಿನ ಪುಡಿ ಹಾಕಬೇಕು. ಇದನ್ನು ಚೆನ್ನಾಗಿ ಕಲಸಿದಾಗ ಅದು ಒಂದು ಮುಲಾಮ್ ತರ ಆಗುತ್ತದೆ.
ಅದನ್ನು ರಾತ್ರಿ ಮಲಗುವಾಗ ಚೆನ್ನಾಗಿ ಹಿಮ್ಮಡಿ ತೊಳೆದುಕೊಂಡು ಹಚ್ಚಿಕೊಳ್ಳಬೇಕು. ಇದರಿಂದ ಹಿಮ್ಮಡಿ ಒಡಕು ದೂರವಾಗುತ್ತದೆ. ಒಣ ಚರ್ಮ ಇರುವವರು ಹೆಚ್ಚು ತುಪ್ಪ, ಹಾಲು ಉಪಯೋಗ ಮಾಡಬೇಕು.ಅಲೋವೆರಾ ಜೆಲ್ ನ್ನು ಕೂಡ ಹಿಮ್ಮಡಿಗೆ ಹಚ್ಚುವುದರಿಂದ ಹಿಮ್ಮಡಿ ಒಡಕು ಕಡಿಮೆ ಆಗುತ್ತದೆ. ಆದ್ದರಿಂದ ಇವೆಲ್ಲವುಗಳ ಬಗ್ಗೆ ತಿಳಿದು ಇವುಗಳ ಬಳಕೆ ಮಾಡಿ ಇದರ ಪ್ರಯೋಜನ ಪಡೆದುಕೊಳ್ಳಿ.