ಇವತ್ತಿನ ದಿನ ನಮಗೆ ತರತರವಾದ ಹೂವುಗಳು ಕಾಣಸಿಗುತ್ತವೆ ಹೆಣ್ಣುಮಕ್ಕಳಿಗೆ ಹೂವು ಎಂದರೆ ಆಸೆ. ಕೆಲವರಿಗೆ ಹೂವಿನ ಮಾಲೆ ಅಂದರೆ ತುಂಬಾ ಇಷ್ಟ. ಕೆಲವರಿಗೆ ಹೂವುಗಳನ್ನು ಬಳಸಿ ಮಾಲೆಯನ್ನು ಕಟ್ಟುವುದಕ್ಕೆ ಇಷ್ಟ ಆದರೆ ಅದನ್ನು ಕಟ್ಟುವುದು ಹೇಗೆ ಎಂಬುದು ಗೊತ್ತಿರುವುದಿಲ್ಲ. ಆದರೆ ನಾವು ಇವತ್ತು ಸುಲಭವಾಗಿ ಹೂವಿನ ಮಾಲೆ ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ನಾವು ಇವತ್ತು ನಿಮಗೆ ಸುಲಭವಾಗಿ ಹೇಗೆ ಹೂವು ಕಟ್ಟುವುದು ಎಂಬುದನ್ನು ತಿಳಿಸುತ್ತೇವೆ ಇದನ್ನು ಚಿಕ್ಕಮಕ್ಕಳು ಕಟ್ಟಬಹುದು. ಮೊದಲು ನೀವು ಒಂದು ಉದ್ದವಾದ ಸೌಟು ಅಥವಾ ಉದ್ದವಾದ ಕೊಲನ್ನು ತೆಗೆದುಕೊಳ್ಳಬೇಕು. ನಂತರ ಹೂ ಕಟ್ಟುವ ದಾರವನ್ನು ತೆಗೆದುಕೊಳ್ಳಬೇಕು ಒಂದು ವೇಳೆ ನಿಮ್ಮ ಬಳಿ ಹೂ ಕಟ್ಟುವ ದಾರ ಇರದಿದ್ದರೆ ಬಟ್ಟೆಹೊಲೆಯುವ ನೂಲನ್ನು ಬಳಸಬಹುದು.
ನೀವು ತೆಗೆದುಕೊಂಡಿರುವ ಉದ್ದವಾದ ಸೌಟು ಅಥವಾ ಉದ್ದವಾದ ಕೊಲಿಗೆ ಉದ್ದವಾಗಿ ನೀವು ತೆಗೆದುಕೊಂಡಿರುವ ದಾರವನ್ನು ಬಿಗಿಯಾಗಿ ನಾಲ್ಕು ಸುತ್ತು ಸುತ್ತಬೇಕು ನಂತರ ಅದನ್ನು ಗಂಟು ಹಾಕಿಕೊಳ್ಳಬೇಕು. ನಂತರ ನೀವು ತೆಗೆದುಕೊಂಡಿರುವ ಸೌಟು ಅಥವಾ ಕೊಲಿನಷ್ಟು ಉದ್ದವಿರುವ ಇನ್ನೊಂದು ದಾರವನ್ನು ತೆಗೆದುಕೊಂಡು ಅದನ್ನು ಕೊನೆಯಲ್ಲಿ ಗಂಟು ಹಾಕಿ ಕಟ್ಟಿಕೊಳ್ಳಬೇಕು ಈ ರೀತಿ ಸೌಟು ಅಥವಾ ಕೋಲನ್ನು ತಯಾರಿಸಿ ಕೊಟ್ಟರೆ ಚಿಕ್ಕಮಕ್ಕಳು ಸುಲಭವಾಗಿ ಹೂವನ್ನು ಕಟ್ಟುತ್ತಾರೆ.
ಇಗ ನೀವು ಹೂವನ್ನು ತೆಗೆದುಕೊಂಡು ಸೌಟು ಅಥವಾ ಕೊಲಿಗೆ ನೀವು ಸುತ್ತಿರುವ ನಾಲ್ಕು ಸುತ್ತಿನಲ್ಲಿ ಎರಡೆರಡು ದರಗಳ ಮದ್ಯೆ ಹೂವನ್ನು ಹಾಕಿ ಕೊನೆಯಲ್ಲಿ ಕಟ್ಟಿರುವ ದಾರದಿಂದ ನಾಲ್ಕು ಸುತ್ತನ್ನು ಸೇರಿಸಿ ಒಳಗಿನಿಂದ ದಾರವನ್ನು ಹಾಕಿ ಕಟ್ಟಿ ಆಧಾರವನ್ನು ನಿಧಾನವಾಗಿ ಎಳೆದುಕೊಳ್ಳಬೇಕು.
ಹೀಗೆ ಮತ್ತೆ ಆ ದಾರದ ಮದ್ಯೆ ಹೂವನ್ನು ಇಡಬೇಕು ನೀವು ಒಂದು ಬದಿಯಾದರು ಹೂವನ್ನು ತೆಗೆದುಕೊಳ್ಳಬಹುದು ಎರಡು ಬದಿಯಾದರೂ ತೆಗೆದುಕೊಳ್ಳಬಹುದು. ನಾಲ್ಕು ದಾರಗಳಮದ್ಯೆ ಹೂವನ್ನಿಟ್ಟು ಮತ್ತೊಂದು ದಾರವನ್ನು ಆ ನಾಲ್ಕು ದರಗಳ ಸುತ್ತ ಸುತ್ತಿ ನಿಧಾನವಾಗಿ ಎಳೆದಾಗ ಹೂವು ಸರಳವಾಗಿ ಬಿಗಿಯಾಗಿ ಕುಳಿತಿರುತ್ತದೆ
ಇದೆ ರೀತಿ ನೀವು ಹೂವುಗಳನ್ನು ತೆಗೆದುಕೊಂಡು ಎಸ್ಟು ಉದ್ದಬೇಕಾದರು ಕಟ್ಟಿಕೊಳ್ಳಬಹುದು. ನೀವು ಬೇಕಾದರೆ ಮೊದಲು ಕಾಗದವನ್ನು ಬಳಸಿ ಇದನ್ನು ಕಟ್ಟಿ ನೋಡಿ ಸರಿ ಎನಿಸಿದರೆ ನಂತರ ಹೂವಿನಿಂದ ಕಟ್ಟಬಹುದು. ಬೆರಳುಗಳನ್ನು ಬಳಸಿ ಹೂವುಗಳನ್ನು ಕಟ್ಟುತ್ತಾರೆ ಆದರೆ ಆರಂಭದಲ್ಲಿ ಈ ಸರಳ ವಿಧಾನವನ್ನು ಬಳಸುವುದರಿಂದ ನಿಮಗೆ ಹೂ ಕಟ್ಟುವುದು ಕಷ್ಟ ಎನಿಸುವುದಿಲ್ಲ.