ಅಪರಾಧ ಮಾಡಿದ ಮೇಲೆ ಜೈಲಿಗೆ ಸೇರಲೇಬೇಕು, ಜೈಲುವಾಸವೆಂದರೆ ನರಕಯಾತನೆ. ಆದರೆ ಫೈವ್ ಸ್ಟಾರ್ ಹೋಟೆಲ್ ನಂತ ಸೌಲಭ್ಯ ಜೈಲಿನಲ್ಲಿರುವುದನ್ನು ಕೇಳಿದ್ದೀರಾ. ಫೈವ್ ಸ್ಟಾರ್ ಜೈಲು ಇದೆ. ಅಂತಹ ಜೈಲು ಎಲ್ಲಿದೆ, ಹೇಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಸಾಮಾನ್ಯವಾಗಿ ಜೈಲುವಾಸಿಗಳ ಜೀವನ ಕಲ್ಪನೆ ಮಾಡಲು ಸಾಧ್ಯವಿಲ್ಲ ಯಾವಾಗ ಬಿಡುಗಡೆ ಆಗಿ ಹೊರಗಡೆ ಹೋಗುತ್ತೇವೆ ಎಂದು ಅನಿಸುತ್ತದೆ ಏಕೆಂದರೆ ಜೈಲುವಾಸ ಕಷ್ಟವಾಗುತ್ತದೆ ಅಲ್ಲದೇ ಜೈಲೆಂದರೆ ಕಬ್ಬಿಣದ ಸರಳುಗಳು, ಸ್ವಚ್ಛವಿಲ್ಲದ ಶೌಚಾಲಯಗಳು, ಸ್ನಾನಗೃಹಗಳು ಇರುತ್ತವೆ. ಕಾರಾಗೃಹಗಳಲ್ಲಿ ಮನೆಯಲ್ಲಿರುವಂತ ಸೌಲಭ್ಯವಿರುವುದನ್ನು ನೋಡಲು ಸಾಧ್ಯವಿಲ್ಲ ಆದರೆ ಜಗತ್ತಿನ ಕೆಲವೆಡೆ ಜೈಲುಗಳಿವೆ ಅವು ಫೈವ್ ಸ್ಟಾರ್ ಹೊಟೇಲ್ ಇರುವಂತೆ ಇರುತ್ತದೆ, ಫೈವ್ ಸ್ಟಾರ್ ಜೈಲು ಎಂದು ಹೇಳಬಹುದು. ಆಸ್ಟ್ರಿಯಾದ ಜಸ್ಟೀಸ್ ಸೆಂಟರ್ ಲಿಯೋಬೆನ್ ಜೈಲನ್ನು ವಿಶ್ವದ ಏಕೈಕ ಫೈವ್ ಸ್ಟಾರ್ ಜೈಲು ಎಂದು ಹೇಳಲಾಗುತ್ತದೆ. ಜೈಲು ಆಸ್ಟ್ರಿಯಾದ ಪರ್ವತ ಪ್ರದೇಶವಾದ ಲಿಯೋಬೆನ್ ನಲ್ಲಿದೆ, ಇದನ್ನು 2005 ರಲ್ಲಿ ಪ್ರಾರಂಭಿಸಲಾಯಿತು. ಈ ಕಾರಾಗೃಹವನ್ನು ವಾಸ್ತುಶಿಲ್ಪಿಯಾಗಿರುವ ಜೋಸೆಫ್ ಹೊಹೆನ್ಸಿನ್ ವಿನ್ಯಾಸಗೊಳಿಸಿದ್ದಾರೆ. ಈ ಫೈವ್ ಸ್ಟಾರ್ ಜೈಲಿನಲ್ಲಿ 205 ಕೈದಿಗಳಿಗೆ ವಸತಿ ಇದೆ. ಅವರಿಗೆ ಸ್ಪಾಗಳು, ವಿವಿಧ ಒಳಾಂಗಣ ಆಟಗಳು, ದೂರದರ್ಶನ, ಸಂಪೂರ್ಣ ಸುಸಜ್ಜಿತ ಜಿಮ್, ಬಾಸ್ಕೆಟ್‌ಬಾಲ್ ಕೋರ್ಟ್ ಮತ್ತು ಅನೇಕ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಜೈಲಿನಲ್ಲಿ 13 ಕೈದಿಗಳು ಒಟ್ಟುಗೂಡಬಹುದು ಇದಲ್ಲದೆ ವಿಶೇಷವೆಂದರೆ ಅವರು ಬಯಸಿದ ಸೆರೆಯಾಳುಗಳೊಂದಿಗೆ ತಮ್ಮ ಸೆಲ್ ಹಂಚಿಕೊಳ್ಳಬಹುದು. ಪ್ರತಿ ಕೈದಿಗಳಿಗೆ ಒಂದೇ ಸೆಲ್ ನೀಡಲಾಗುತ್ತದೆ. ಕೈದಿಗಳು ವಾಸಿಸುವ ಸೆಲ್ ಗೆ ಪ್ರತ್ಯೇಕ ಸ್ನಾನಗೃಹ, ಅಡುಗೆಮನೆ ಮತ್ತು ವಾಸದ ಕೋಣೆ ಇದೆ, ಟಿವಿ ಸೌಲಭ್ಯವೂ ಇದೆ. ಇದಲ್ಲದೆ ಕೋಣೆಯಲ್ಲಿ ಫುಲ್ ಸೈಜ್ ಕಿಟಕಿಯೂ ಇದೆ, ಇದರಿಂದಾಗಿ ಕೈದಿಗಳು ಹೊರಗಿನ ನೋಟವನ್ನು ನೋಡಬಹುದು ಆದರೆ ಈ ಜೈಲಿನಲ್ಲಿ ಸಣ್ಣ ಪುಟ್ಟ ತಪ್ಪುಗಳಿಗೆ ಶಿಕ್ಷೆಯನ್ನು ಅನುಭವಿಸುತ್ತಿರುವವರನ್ನು ಇರಿಸಲಾಗುತ್ತದೆ. ಇಲ್ಲಿನ ಕೈದಿಗಳಿಗೆ ತಮ್ಮ ಕುಟುಂಬದೊಂದಿಗೆ ವಾಸಿಸಲು ಅವಕಾಶವಿದೆ.

ಸೆಲ್ ಒಳಗೆ ಸಣ್ಣ ಮಕ್ಕಳಿಗೆ ಗೋಡೆಗಳ ಮೇಲೆ ವ್ಯಂಗ್ಯಚಿತ್ರಗಳನ್ನು ತಯಾರಿಸಲಾಗುತ್ತದೆ. ಅವರಿಗೆ ಶಾಲೆ ಮತ್ತು ಆಟದ ಮೈದಾನವೂ ಇದೆ. ಸಣ್ಣ ಅಪರಾಧಕ್ಕೆ ಕೈದಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವುದರಿಂದ ಅವರು ತಮ್ಮ ಅಪರಾಧದ ಬಗ್ಗೆ ಯೋಚಿಸಬಹುದು ಮತ್ತು ಜೈಲಿನಿಂದ ಹೊರಬಂದ ನಂತರ ಸಾಮಾನ್ಯ ಜೀವನವನ್ನು ನಡೆಸಬಹುದು ಎಂಬ ಉದ್ದೇಶದಿಂದ ಈ ಕಾರಾಗೃಹವನ್ನು ಐಷಾರಾಮಿಯಾಗಿ ಮಾಡಿದ್ದಾರೆ. ಈ ಜೈಲಿನಲ್ಲಿ 100 ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಅವರಿಗೆ ಜೈಲಿನೊಳಗೆ ಟೆನಿಸ್, ಕುದುರೆ ಸವಾರಿ, ಮೀನುಗಾರಿಕೆ ಐಷಾರಾಮಿ ಸೌಲಭ್ಯಗಳಿವೆ. ಈ ಸೌಲಭ್ಯಗಳಿಂದ ಇಲ್ಲಿಗೆ ಬರುವ ಕೈದಿಗಳು ತಾವು ಕೈದಿಗಳೆಂಬುದನ್ನೆ ಮರೆತುಬಿಡುತ್ತಾರೆ ಎನ್ನಲಾಗಿದೆ. ಜನದಟ್ಟಣೆಯಿಂದ ಕುಖ್ಯಾತವಾಗಿದ್ದ ಚಾಂಪ್ ಡಾಲನ್‌ನಲ್ಲಿ ಹೊಸದಾಗಿ ನವೀಕರಿಸಿದ ನಿವಾಸಗಳು ವಿಶಾಲವಾದ ಟ್ರಿಪಲ್-ಆಕ್ಯುಪೆನ್ಸಿ ಸೆಲ್ ಗಳನ್ನು ಹೊಂದಿವೆ. ಇದು ಅಟ್ಯಾಚ್ಡ್ ಸ್ನಾನಗೃಹವನ್ನು ಒಳಗೊಂಡಿದೆ. ಈ ರೀತಿಯ ಸಾಕಷ್ಟು ಸೌಲಭ್ಯಗಳು ಈ ಜೈಲಿನಲ್ಲಿದೆ. ಹೀಗೆ ವಿಶ್ವದಲ್ಲಿ ಹೆಚ್ಚು ಕಡಿಮೆ 9 ಜೈಲುಗಳಲ್ಲಿ ಕೈದಿಗಳಿಗೆ ಇಂತಹ ಸಕಲಸೌಕರ್ಯಗಳನ್ನು ಒದಗಿಸಲಾಗಿದೆ. ಜೈಲಿನಲ್ಲಿ ಇಂತಹ ಸೌಲಭ್ಯ ನೀಡುವ ಮೂಲಕ ಕೈದಿಗಳಿಗೆ ತಮ್ಮ ಬಗ್ಗೆ ಕೀಳು ಭಾವನೆ ಬರುವುದಿಲ್ಲ. ಇದರಿಂದ ಕೈದಿಗಳು ಬದಲಾಗುವ ಸಂಭವ ಇದೆ. ಅಪರಾಧಿಗಳ ಬದಲಾವಣೆಗೆ ಮಾಡಿರುವ ಈ ಪ್ರಯತ್ನ ಯಶಸ್ಸು ಪಡೆಯಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!