Fish Farming Subsidy ದೇಶದ ಆದಾಯಕ್ಕೆ ಮೀನುಗಾರಿಕೆಯು ಅತ್ಯುತ್ತಮ ಕೊಡುಗೆಯನ್ನ ನೀಡುತ್ತದೆ ಇದೇ ಮೀನುಗಾರಿಕೆಯಲ್ಲಿ ತೊಡಗಿಕೊಂಡು ಅನೇಕ ಜನರು ತಮ್ಮ ಜೀವನೋಪಾಯವನ್ನು ನಡೆಸುತ್ತಿದ್ದಾರೆ ಅನೇಕ ಜನರ ಬದುಕು ಮೀನುಗಾರಿಕೆಯ ಮೇಲೆ ಅವಲಂಬಿತವಾಗಿದೆ ಅಷ್ಟೇ ಅಲ್ಲದೆ ಭಾರತವು ಮೀನುಗಾರಿಕೆಗೆ ಯೋಗ್ಯವಾದ ಕರಾವಳಿ ಭಾಗವನ್ನು ಹೊಂದಿದ್ದು, ಇದರ ಸದುಪಯೋಗವನ್ನ ಪಡೆದುಕೊಂಡು ದೇಶದ ಆದಾಯವನ್ನು ಹೆಚ್ಚಿಸುವಲ್ಲಿ ಮೀನುಗಾರಿಕೆಯ ಪಾತ್ರ ಹೆಚ್ಚಬೇಕು ಎನ್ನುವ ಕಾರಣದಿಂದ ಕೇಂದ್ರ ಸರ್ಕಾರವು ಹೊಸ ಯೋಜನೆಯ ಹಮ್ಮಿಕೊಂಡಿದೆ ಈ ಯೋಜನೆಯ ಹೆಸರು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ.

2020 ಸೆಪ್ಟೆಂಬರ್ ಹತ್ತನೇ ತಾರೀಖಿನಂದು ಬಿಹಾರದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಮತ್ಸ್ಯ ಸಂಪದ ಯೋಜನೆಯನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದರು. ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವವರಿಗೆ ಅನುಕೂಲಕರ ವ್ಯವಸ್ಥೆಯನ್ನು ಮಾಡಿಕೊಡುವುದರ ಮೂಲಕ ದೇಶದ ಒಟ್ಟು ಆದಾಯವನ್ನು ಹೆಚ್ಚಿಸಬೇಕು ಎಂಬುದು ಈ ಯೋಜನೆಯ ಉದ್ದೇಶವಾಗಿದೆ ಈ ಯೋಜನೆಯ ಅಡಿಯಲ್ಲಿ 2023 -24 ನೇ ಸಾಲಿನಲ್ಲಿ ಮೀನುಗಾರಿಕೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡುವ ಉದ್ದೇಶದಿಂದ ಹಾಗೂ ಮೀನುಗಾರಿಕೆಯ ವಿವಿಧ ಘಟಕಗಳ ನಿರ್ಮಾಣಕ್ಕೆ ಸಹಾಯಧನ ಕೇಂದ್ರ ಸರ್ಕಾರದಿಂದ ನೀಡಲಾಗುತ್ತಿದೆ.

ದೇಶವು ವಾರ್ಷಿಕವಾಗಿ 70 ಟನ್ ಗಳಷ್ಟು ಮೀನು ರಫ್ತು ಮಾಡಿ ಒಂದು ಲಕ್ಷ ಕೋಟಿ ಆದಾಯವನ್ನ ಗಳಿಸಬೇಕು ಹಾಗೂ ಮೀನಿನ ನಷ್ಟ ಪ್ರಮಾಣವನ್ನು 20 ಪರ್ಸೆಂಟ್ ನಿಂದ 10% ವರೆಗೆ ಇಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಆಗಿರುತ್ತದೆ. ಇದರ ಜೊತೆಗೆ ಮೀನುಗಾರಿಕೆಯಿಂದ ಆಹಾರ ಕೊರತೆ ನೀಗಿಸುವುದರೊಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿ ಮಾಡುವುದು ಕೂಡ ಈ ಯೋಜನೆಯ ಒಂದು ಭಾಗವಾಗಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಮೀನುಗಾರಿಕೆಯನ್ನ ಪ್ರಮುಖವಾಗಿಸಿಕೊಂಡಂತಹ ಕೆಲ ರಾಜ್ಯಗಳ ಆಯ್ದ ಜಿಲ್ಲೆಗಳ ಫಲಾನುಭವಿಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟಾರೆಯಾಗಿ ಈ ಮಧ್ಯ ಸಂಪದ ಯೋಜನೆಯ ಅಡಿಯಲ್ಲಿ ಒಟ್ಟು 29 ಸೌಲಭ್ಯಗಳನ್ನ ಒದಗಿಸಲಾಗುತ್ತಿದೆ ಅವುಗಳು ಯಾವುವು ಎಂದು ನೋಡುವುದಾದರೆ.

Fish Farming Subsidy 2023

ಮೀನು ಕೃಷಿ ಕೊಳಗಳ ನಿರ್ಮಾಣ, ಬಯೋ ಬ್ಲಾಕ್ ಘಟಕ ಸ್ಥಾಪನೆ , ಮಂಜುಗಡ್ಡೆ ಸಾವರ ನಿರ್ಮಾಣ, ಮಂಜುಗಡ್ಡೆ ಸ್ಥಾವರ ನವೀಕರಣಕ್ಕೆ ಸಹಾಯಧನ, ಕಡಲ ಚಿಪ್ಪೆ ಕೃಷಿಗೆ ಸಹಾಯಧನ, ಸಾಂಪ್ರದಾಯಿಕ ಮತ್ತು ಯಾಂತ್ರಿಕ ಮೀನುಗಾರಿಕಾ ಹಡಗುಗಳ ಖರೀದಿ ಮಾಡಲು ಸಹಾಯಧನ, ಜೊತೆಗೆ ದುರಸ್ತಿಗೆ ಸಹಾಯಧನ, ಮೀನುಗಾರರ ಸುರಕ್ಷಿತ ಕಿಟ್ ಗಳು, ಮೀನುಗಾರರ ದೋಣಿಗಳ ಬದಲಿ ವ್ಯವಸ್ಥೆ ಹಾಗೂ ಬಲೆಗಳು ಇತ್ಯಾದಿ ಸೇರಿದಂತೆ ಮೀನುಗಾರಿಕೆ ಸಂಬಂಧಿಸಿ ದಂತೆ ಸಹಾಯಧನವನ್ನು ನೀಡಲಾಗುತ್ತಿದೆ ಇದರಲ್ಲಿ ಎಸ್ ಸಿ ಎಸ್ ಟಿ ಮತ್ತು ಮಹಿಳೆಯರ ಘಟಕ ವೆಚ್ಚಕ್ಕೆ 60% ಸಹಾಯಧನ ನೀಡಲಾಗುತ್ತಿದ್ದು ಇನ್ನುಳಿದ ವರ್ಗಗಳಿಗೆ 40% ಸಹಾಯಧನ ಸಿಗುತ್ತದೆ.

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿಯನ್ನು ಹೊಂದಿದ್ದವರು ಸಂಬಂಧಪಟ್ಟ ದಾಖಲೆಗಳನ್ನ ಮೀನುಗಾರಿಕಾ ಇಲಾಖೆಗೆ ನೀಡಿ ಅರ್ಜಿಯನ್ನ ಸಲ್ಲಿಸಬಹುದು ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಮೀನುಗಾರಿಕೆ ಸಹಾಯಕ ನಿರ್ದೇಶಕ ರನ್ನ ಸಂಪರ್ಕಿಸಬೇಕು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಆಗಸ್ಟ್ 27 ದಿನಾಂಕವಾಗಿದ್ದು ನಿಮ್ಮ ಹತ್ತಿರದ ಸಹಾಯವಾಣಿ ಕೇಂದ್ರಗಳಿಗೆ ಕರೆ ಮಾಡಿ ಈ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಿ ಕೆಲವು ಸಹಾಯವಾಣಿ ಕೇಂದ್ರಗಳ ನಂಬರ್ ಗಳನ್ನು ಈ ಕೆಳಗೆ ನೀಡಲಾಗಿದೆ.

ಹಾಸನ – 8296125312
ಸಕಲೇಶಪುರ – 9986398624
ಹೊಳೆನರಸೀಪುರ – 8792747119
ಬೇಲೂರು – 7411278429
ಅರಸಿಕೆರೆ – ೮೫೪೯೯೩೩೪೧೧

ಚನ್ನರಾಯಪಟ್ಟಣ – 8147806919
ಆಲೂರು – 9008419748
ಅರಕಲಗೂಡು – 9741520760
ಮೈಸೂರು – 9448425462

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!