ನಾವು ಆಗಾಗ ಕಾಲಿ ಕುಳಿತಾಗಲೆಲ್ಲ ಬೆರಳಲ್ಲಿ ಲಟಿಕೆ ತೆಗೆಯುತ್ತಿರುತ್ತೇವೆ. ಆದರೆ ಈ ಲಟಿಕೆ ತೆಗೆಯುವುದು ನಮಗೆ ಅಷ್ಟೊಂದು ಒಳ್ಳೆಯದೇನೋ ಅಲ್ಲ. ಲಟಿಕೆ ತೆಗೆಯುವುದು ಬಹಳ ಅಪಾಯಕಾರಿ. ಹಾಗಾದ್ರೆ ಲಟಿಕೆ ತೆಗೆಯುವುದರಿಂದ ಏನಾಗಬಹುದು ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಲಟಿಕೆ ತೆಗೆಯುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದೇ. ಆದರೆ ಇದು ಎಷ್ಟೋ ಜನರಿಗೆ ಒಂದು ಚಟವೂ ಕೂಡ ಆಗಿರುತ್ತದೆ . ಪ್ರತಿಯೊಬ್ಬರೂ ಕೂಡ ದಿನದಲ್ಲಿ ಒಂದು ಬಾರಿಯಾದರೂ ಲಟಿಕೆ ತೆಗೆಯುತ್ತಲೇ ಇರುತ್ತಾರೆ. ಹೀಗೆ ಮಾಡಿದಾಗ ಮನೆಯಲ್ಲಿರುವ ವಯಸ್ಸಾದವರು ಅಥವಾ ಹಿರಿಯರು ಈ ಲಟೀಕೆ ತೆಗೆಯುವ ಅಭ್ಯಾಸ ಒಳ್ಳೆಯದಲ್ಲ ಇದು ಅಪಶಕುನ ಎಂದು ಬಯ್ಯುತ್ತಿರುತ್ತಾರೆ. ಆದರೆ ಸಂಪ್ರದಾಯದ ಪ್ರಕಾರ ಇದು ಅಪಶಕುನವೋ ಅಥವಾ ಶುಭಶಕುನವೋ ತಿಳಿಯದು ವೈಜ್ಞಾನಿಕವಾಗಿ ನೋಡುವುದಾದರೆ ಲಟಿಕೆ ತೆಗೆಯುವುದು ನಮ್ಮ ಮೂಳೆಗಳಿಗೆ ಒಳ್ಳೆಯದಲ್ಲ. ನಮ್ಮ ದೇಹವು ಕೂಡ ಒಂದು ಯಂತ್ರ ಇದ್ದಹಾಗೆ ನಮ್ಮ ದೇಹದಲ್ಲಿ ಕೂಡ ಹಲವಾರು ರೀತಿಯ ಜಾಯಿಂಟ್ ಗಳು ಇರುತ್ತವೆ. ನಮ್ಮ ದೇಹದಲ್ಲಿರುವ ಪ್ರತಿಯೊಂದು ಜಾಯಿಂಟ್ ಗಳ ಮಧ್ಯೆ ಸೈನೋವೈಲ್ ಫ್ಲ್ಯೂಡ್ ಎನ್ನುವ ಲಿಕ್ವಿಡ್ ಇರುತ್ತದೆ. ಇದು ಮಷೀನ್ ಗಳಲ್ಲಿ ಗ್ರೀಸ್ ಹೇಗೆ ಕೆಲಸ ಮಾಡುತ್ತದೆಯೋ ಅದೇ ರೀತಿ ನಮ್ಮ ದೇಹದಲ್ಲಿ ಕೂಡ ಸೈನೋವೈಲ್ ಫ್ಲ್ಯೂಡ್ ಎನ್ನುವ ಲಿಕ್ವಿಡ್ ನಮ್ಮ ದೇಹದಲ್ಲಿ ಮೂಳೆಗಳು ಒಂದಕ್ಕೊಂದು ತಾಗಿ ಸವೆದಂತೆ ಹಾಳಾಗದಂತೆ ನೋಡಿಕೊಳ್ಳುವ ಕೆಲಸವನ್ನು ಮಾಡುತ್ತದೇ. ಮೂಳೆಗಳಲ್ಲಿ ಘರ್ಷಣೆ ಉಂಟಾಗದಂತೆ ನೋಡಿಕೊಳ್ಳುತ್ತದೆ.
ನಾವು ಲಟಿಕೆ ತೆಗೆದಾಗ ಶಬ್ದ ಬರುವುದು ಯಾಕೆ? ನಾವು ಲಟಿಕೆ ತೆಗೆದಾಗ ಶಬ್ದ ಬರಲು ಕಾರಣ ಈ ಸೈನೋವೈಲ್ ಫ್ಲ್ಯೂಡ್ ಎನ್ನುವ ಲಿಕ್ವಿಡ್ ನಲ್ಲಿ ಕಾರ್ಬನ್ ಡೈ ಆಕ್ಸೈಡ್ ಸಂಗ್ರಹವಾಗಿರುತ್ತದೆ. ಇದು ನಮ್ಮ ದೇಹದಲ್ಲಿ ಲಿಕ್ವಿಡ್ ನ ಜೊತೆಗೆ ಒಂದು ರೀತಿಯ ಗುಳ್ಳೆಗಳ ಹಾಗೆ ಇರುತ್ತವೆ ನಾವು ನೆಟ್ಟಿಗೆ ತೆಗೆದಾಗ ಈ ಗುಳ್ಳೆಗಳು ಬ್ಲಾಸ್ಟ್ ಆಗಿ ಅದರಿಂದ ಶಬ್ದ ಬರುತ್ತದೆ.
ಒಮ್ಮೆ ಲಟೀಕೆ ತೆಗೆದ ನಂತರ ಮತ್ತೆ ಲಟಿಕೆ ತೆಗೆಯಲು ಬರುವುದಿಲ್ಲ ಯಾಕೆ? ನಾವು ಒಮ್ಮೆಲೆ ಏಟಿಗೆ ತೆಗೆದ ನಂತರ ಮತ್ತೆ ಅದೇ ಸಮಯದಲ್ಲಿ ಲಟಿಕೆ ತೆಗೆಯಲು ಪ್ರಯತ್ನಿಸಿದರೆ ಬರುವುದಿಲ್ಲ. ಏಕೆಂದರೆ ನಾವು ಒಮ್ಮೆ ಲಟಿಕೆ ತೆಗೆದಾಗ ಅಲ್ಲಿ ಇರುವಂತಹ ಕಾರ್ಬನ್ ಡೈಯಾಕ್ಸೈಡ್ ಗುಳ್ಳೆಗಳು ಬ್ಲಾಸ್ಟ್ ಆಗಿರುತ್ತವೆ ಈ ಕಾರ್ಬನ್ ಡೈಆಕ್ಸೈಡ್ ಗುಳ್ಳೆಗಳು ಮತ್ತೆ ನಮ್ಮ ದೇಹದಲ್ಲಿ ಸಂಗ್ರಹವಾಗಬೇಕು ಎಂದರೆ ಸಾಮಾನ್ಯವಾಗಿ 15ರಿಂದ 20 ನಿಮಿಷಗಳು ಬೇಕಾಗುವುದು. ಹಾಗಾಗಿ ಅರ್ಧಗಂಟೆಯ ನಂತರ ಮತ್ತೆ ಲಟಿಕೆ ತೆಗೆದರೆ ಶಬ್ದ ಬರುತ್ತದೆ.
ಲಟಿಕೆ ತೆಗೆಯುವುದು ಅಪಾಯಕಾರಿ ಅಂತ ಹೇಳುತ್ತಾರೆ ಆದರೆ ಯಾಕೆ? ನಾವು ಆಗಾಗ ಲಟಿಕೆ ತೆಗೆಯುತ್ತಾ ಇರುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಸೈನೋವೈಲ್ ಫ್ಲ್ಯೂಡ್ ಎನ್ನುವ ಲಿಕ್ವಿಡ್ ಕ್ರಮೇಣವಾಗಿ ಕಡಿಮೆಯಾಗುತ್ತ ಹೋಗುತ್ತದೆ. ಇದು ಕಡಿಮೆಯಾದಾಗ ನಮಗೆ ವಯಸ್ಸಾದಂತೆ ನಮ್ಮ ಮೂಳೆಗಳಲ್ಲಿ ನೋವು ಹಾಗೂ ಸವೆತ ಹೆಚ್ಚಾಗುತ್ತದೆ. ಮೂಳೆಗಳು ಒಂದಕ್ಕೊಂದು ತಾಗಿಕೊಂಡು ಉಜ್ಜಿ ಸವೆತ ಉಂಟಾಗುತ್ತದೆ. ಹಾಗಾಗಿ ಈ ಕಾರಣದಿಂದಾಗಿ ನಾವು ಪದೇ-ಪದೇ ಲಟಿಕೆ ತೆಗೆಯುವ ಅಭ್ಯಾಸವನ್ನು ಹೊಂದಿದ್ದರೆ ಅದನ್ನು ಬಿಡುವುದು ಉತ್ತಮ.