ಕೊರೋನ ವೈರಸ್ ದಿನೆ ದಿನೆ ವೇಗವಾಗಿ ಹರಡುತ್ತಿದೆ. ಜ್ವರ, ನೆಗಡಿ, ತಲೆನೋವು ಕೊರೋನ ವೈರಸ್ ನ ಲಕ್ಷಣವಾಗಿದೆ. ನಮಗೆ ವಾತಾವರಣ, ನೀರು ಇತ್ಯಾದಿ ಕಾರಣದಿಂದ ಬರುವ ಸಹಜ ನೆಗಡಿ, ಕೆಮ್ಮು, ಜ್ವರಕ್ಕೆ ಹೆದರಬೇಕಾಗಿದೆ. ಕೆಲವೊಮ್ಮೆ ವಾತಾವರಣದ ಬದಲಾವಣೆಯಿಂದ ನೆಗಡಿ, ಕೆಮ್ಮು, ಜ್ವರ ಬರುವುದು ಸಹಜವಾಗಿದೆ. ಈಗಿನ ಸಮಯದಲ್ಲಿ ಆಸ್ಪತ್ರೆಗಳಿಗೆ ಹೋಗಲು ಜನರು ಹೆದರುತ್ತಿದ್ದಾರೆ ಆದ್ದರಿಂದ ಜ್ವರ, ನೆಗಡಿ, ಕೆಮ್ಮು, ಗಂಟಲು ನೋವು ಒಂದೆ ದಿನದಲ್ಲಿ ನಿವಾರಣೆ ಆಗಲು ಮನೆಯಲ್ಲಿ ಸಿಗುವ ಸಾಮಗ್ರಿಗಳನ್ನು ಬಳಸಿ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಆರೋಗ್ಯಕ್ಕ ಯಾವುದೆ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಹಾಗಾದರೆ ಒಂದೆ ದಿನದಲ್ಲಿ ಜ್ವರ, ನೆಗಡಿ, ಕೆಮ್ಮು ನಿವಾರಣೆ ಮಾಡುವಂತಹ ಅತಿ ಸುಲಭವಾದ ಕಷಾಯ ಮಾಡುವ ವಿಧಾನ ಹಾಗೂ ಬೇಕಾಗಿರುವ ಸಾಮಗ್ರಿಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಜ್ವರ, ನೆಗಡಿ, ಕೆಮ್ಮು ನಿವಾರಣೆಗೆ ಮನೆಯಲ್ಲಿ ಮಾಡಿಕೊಳ್ಳಬಹುದಾದ ಕಷಾಯಕ್ಕೆ ಬೇಕಾಗುವ ಸಾಮಗ್ರಿಗಳು ತುಳಸಿ ಎಲೆ, ಲವಂಗ, ಕಾಳುಮೆಣಸು, ಶುಂಠಿ, ಅರಿಶಿಣ, ಹಾಲು, ನೀರು, ಬೆಲ್ಲ. ಈ ಕಷಾಯವನ್ನು ಮಾಡುವ ವಿಧಾನವೆಂದರೆ ಮೊದಲು ಒಂದು ಪಾತ್ರೆಗೆ ಒಂದು ಲೋಟ ಅಂದರೆ 150ಎಂಎಲ್ ಹಾಲನ್ನು ಹಾಕಬೇಕು. ನಂತರ ಒಂದು ಕಪ್ ನೀರನ್ನು ಹಾಕಬೇಕು ಒಂದು ಕುದಿ ಬರುವವರೆಗೆ ಕಾಯಿಸಬೇಕು. ನಂತರ ಕುದಿದ ಹಾಲಿಗೆ 8-10 ತುಳಸಿ ಎಲೆ, 4 ಲವಂಗ, 6 ಕಾಳುಮೆಣಸು, ಒಂದು ಏಲಕ್ಕಿ ಸಿಪ್ಪೆ ತೆಗೆದು ಹಾಕಬಹುದು ಅಥವಾ ಸಿಪ್ಪೆ ತೆಗೆಯದೆ ಹಾಕಬಹುದು. ನಂತರ 1 ಸ್ಪೂನ್ ಹೆಚ್ಚಿದ ಶುಂಠಿ, 1 ಸ್ಪೂನ್ ಬೆಲ್ಲ ಹಾಕಬೇಕು ನಂತರ ಚೆನ್ನಾಗಿ ಕುದಿಸಬೇಕು ಕುದಿಯುತ್ತಿರುವಾಗ ಕಾಲು ಸ್ಪೂನ್ ಅರಿಶಿಣವನ್ನು ಹಾಕಿ ಮಿಕ್ಸ್ ಮಾಡಿದ ನಂತರ ಐದು ನಿಮಿಷಗಳ ಕಾಲ ಚೆನ್ನಾಗಿ ಕುದಿಸಬೇಕು.
ನಂತರ ಒಂದು ಲೋಟಕ್ಕೆ ಸೋಸಿಕೊಳ್ಳಬೇಕು. ಜ್ವರ, ನೆಗಡಿ, ಕೆಮ್ಮು, ಗಂಟಲುನೋವು ಬಂದಾಗ ದಿನದಲ್ಲಿ ಎರಡು ಬಾರಿ ಕುಡಿದರೆ ಒಂದೆ ದಿನದಲ್ಲಿ ಜ್ವರ, ಗಂಟಲು ನೋವು, ಕೆಮ್ಮು, ನೆಗಡಿ ಮಾಯವಾಗುತ್ತದೆ. ಈ ಕಷಾಯದಲ್ಲಿ ಹಾಕಿರುವ ತುಳಸಿ, ಶುಂಠಿ ಗಂಟಲು ನೋವು ನಿವಾರಣೆ ಮಾಡುತ್ತದೆ. ಅರಿಶಿಣ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಷಾಯ ಮಾಡಿಕೊಳ್ಳುವಾಗ ಕೆಲವರು ಸಕ್ಕರೆ ಹಾಕಿಕೊಳ್ಳುತ್ತಾರೆ, ಸಕ್ಕರೆ ಬದಲು ಬೆಲ್ಲವನ್ನು ಹಾಕಿಕೊಳ್ಳುವುದು ಉತ್ತಮ ಏಕೆಂದರೆ ಗಂಟಲು ನೋವು, ನೆಗಡಿ ನಿವಾರಣೆಗೆ ಬೆಲ್ಲ ಸಹಾಯಕಾರಿಯಾಗಿದೆ. ಈ ಕಷಾಯವನ್ನು ಕುಡಿಯುವುದರಿಂದ ಯಾವುದೆ ಅಡ್ಡ ಪರಿಣಾಮ ಉಂಟಾಗುವುದಿಲ್ಲ ಹಾಗೆಯೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಮನೆಯಲ್ಲೆ ಸುಲಭವಾಗಿ ಒಂದೆ ದಿನದಲ್ಲಿ ಜ್ವರ, ನೆಗಡಿ, ಕೆಮ್ಮು, ಶೀತ, ಗಂಟಲು ನೋವನ್ನು ನಿವಾರಣೆ ಮಾಡಿಕೊಳ್ಳಿ.