ಇಪ್ಪತ್ತಾರು ವರ್ಷದ ಒಬ್ಬ ಯುವಕ, ಹೆಸರು “ದಶರತ್ ಮಾಂಜಿ” . 1934ರಲ್ಲಿ ಭಾರತ ದೇಶದ ಬಿಹಾರ್ ರಾಜ್ಯದಲ್ಲಿ ಒಂದು ಬಡ ಕುಟುಂಬದಲ್ಲಿ ಇವರ ಜನನ. ಅವರು ಹುಟ್ಟುದ ಉರು ಇಂದು ಸಣ್ಣ ಹಳ್ಳಿ ಅಲ್ಲಿ ಕುಡಿಯೋಕೆ ಒಂದು ಹನಿ ನೀರು ಸಿಗುವುದೂ ಸಹ ಕಷ್ಟ. ಕುಡಿಯೋಕೆ ನೀರು ಬೇಕು ಅಂದರೆ ಐದು ಕಿಲೋಮೀಟರ್ ದೂರ ಹೋಗಬೇಕು. ಒಂದುವೇಳೆ ಆಸ್ಪತ್ರೆಗೆ ಹಿಗಬೇಕು ಅಂದರೂ ಸಹ ಉರಿ ದಾಟಿಯೇ ಹೋಗಬೇಕು. ಆ ಉರು ದಾಟಬೇಕು ಅಂದರೆ ಒಂದು ದೊಡ್ಡ ಬೆಟ್ಟ ಇದೆ ಆ ಬೆಟ್ಟವನ್ನು ಹತ್ತಿ ಹೋಗಬೇಕು ಇಲ್ಲವಾದರೆ ಆ ದೊಡ್ಡ ಬೆಟ್ಟದ ಪಕ್ಕದಲ್ಲಿ ಒಂದು ಕಾಲು ದಾರಿ ಇದೆ ಅಲ್ಲಿಂದ ಹೋಗಬೇಕು. ಹಾಗೆ ಹೋಗಬೇಕು ಅಂದರೆ 70 ಕಿಲೋಮೀಟರ್ ದೂರ. ಒಂದು ದಿನ ದಶರತ್ ಮಾಂಜಿ ಕೂಲಿ ಕೆಲಸ ಮಾಡೋಕೆ ಅಂತ ಹೋಗಿರ್ತಾರೆ, ಮನೆಯಲ್ಲಿ ಗರ್ಭಿಣಿ ಹೆಂಡತಿ ಒಬ್ಬಳೇ ಇದ್ದಿರ್ತಾಳೆ. ಮಧ್ಯಾನ್ಹದ ಸಮಯ ಗಂಡನಿಗೆ ಊಟ ತೆಗೆದುಕೊಂಡು ಹಿಗಬೇಕು ಅಂತ ಅಡುಗೆ ರೆಡಿ ಮಾಡಿ ತೆಗೆದುಕೊಂಡು ಹೋಗ್ತಾಳೇ. ಹೋಗುವ ಸಂದರ್ಭದಲ್ಲಿ ಕಲ್ಲಿನ ಮೇಲೆ ಕಾಲಿಟ್ಟು ಕಾಲು ಜಾರಿ ಬೀಳ್ತಾಳೆ. ಆ ಸಮಯದಲ್ಲಿ ಆಕೆಗೆ ಹಿತ್ತೆ ನೀವು ಶುರು ಆಗತ್ತೆ.
ಈ ವಿಷಯ ತಿಳಿದ ದಶರತ್ ಮಾಂಜಿ ಓಡೀ ಬರುತ್ತಾರೆ ಆದರೆ ಆ ಊರಿನಲ್ಲಿ ಆಸ್ಪತ್ರೆಯ ವ್ಯವಸ್ಥೆ ಇರಲ್ಲ ಹಾಗಾಗಿ ದಶರತ್ ಮಾಂಜಿ ತನ್ನ ಗರ್ಭಿಣಿ ಹೆಂಡತಿಯನ್ನ ಎತ್ತಿಕೊಂಡು ಆಸ್ಪತ್ರೆಗೆ ಹೋಗಬೇಕು ಅಂತ ಓಡ್ತಾರೆ ಆಗ ಆಸ್ಪತ್ರೆಗೆ ಹೋಗಬೇಕು ಅಂದರೆ ಒಂದು ಬೆಟ್ಟ ಹತ್ತಿ ಹೋಗಬೇಕು ಇಲ್ಲವಾದರೆ ಬೆಟ್ಟದ ಪಕ್ಕದ ಕಾಲು ದಾರಿಯಲ್ಲಿ 70 ಕಿಲೋಮೀಟರ್ ಸುತ್ತು ಹಾಕಿಕೊಂಡು ಹೋಗಬೇಕು. ಒಂದು ಕಡೆ ಹೆಂಡತಿಗೆ ಹೊಟ್ಟೆ ನೋವು ಜಾಸ್ತಿ ಆಗತ್ತೆ ಆಗ ಅವಸರದಿಂದ ಬೆಟ್ಟ ಹತ್ತೋಕೆ ಶುರು ಮಾಡ್ತಾರೆ ಆದರೂ ಸಹ ಮಧ್ಯದಲ್ಲಿ ಹೆಂಡತಿ ಸಾವನ್ನಪ್ಪುತ್ತಾಳೆ.
ಎಷ್ಟೋ ಪ್ರೀತಿಯಿಂದ ನೋಡಿಕೊಳ್ಳುತ್ತಾ ಇದ್ದ ಹೆಂಡಿಸ್ತಿ ಸಾಯುತ್ತಾಳೆ. ಅದೇ ನೋವಲ್ಲಿ ಎನು ಮಾಡಬೇಕು ಅನ್ನೋದು ತಿಳಿಯದೇ ಸುಮ್ಮನೇ ಕುಳಿತಿರುತ್ತಾರೆ. ಹೀಗೆ ಒಂದು, ಎರಡು ದಿನ ಕಲಿಯತ್ತೆ ಒಂದು ವಾರವೂ ಕಳಿಯತ್ತೆ. ಹೀಗಿರೋವಾಗ ಒಂದು ಆಲೋಚನೆ ಬರತ್ತೆ. ದಶರತ್ ಮಾಂಜಿ ಕಣ್ಣು ಆ ಬೆಟ್ಟದ ಮೇಲೆ ಬೀಳತ್ತೆ. ಆ ಬೆಟ್ಟದಿಂದಲೇ ತನ್ನ ಹೆಂಡತಿ ಸತ್ತು ಹೋಗಿದ್ದು ಅದಕ್ಕಾಗಿ ಆ ಬೆಟ್ಟವನ್ನೇ ಸೀಳಿಬಿಡ್ತೀನಿ ಅಂತ ಸುತ್ತಿಗೆ ಹಾಗೂ ಉಳಿಯನ್ನ ತೆಗೆದುಕೊಂಡು ಹೋಗ್ತಾರೆ. ಆ ಬೆಟ್ಟವನ್ನ ಒಡೆಯಲು ಶುರು ಮಾಡ್ತಾರೆ. ಸ್ನೇಹಿತರು, ಊರವರು, ಬಂಧುಗಳು ಬಂದು ಬೇಡ ಎಂದು ಬುದ್ಧಿ ಹೇಳಿದರು ಕೇಳದೆ, ಯಾರ ಮಾತಿಗೂ ಕಿವಿಗೊಡದೆ ಒಬ್ಬರೇ ಆ ಬೆಟ್ಟವನ್ನ ಒಡೆಯುವ ಕೆಲಸವನ್ನ ಮುಂದುವರೆಸುತ್ತಾರೆ. ಮಳೆ, ಗಾಳಿ, ಬಿಸಿಲು ಎನ್ನದೆ ಆ ಬೆಟ್ಟದ ಬಳಿಯೇ ಇರುತ್ತಾರೆ ಹಾಗೂ ಬೆಟ್ಟ ಒಡೆಯುವುದನ್ನ ಮುಂದುವರೆಸುತ್ತಾರೆ.
26 ನೆ ವರ್ಷ ವಯಸ್ಸಿಗೆ ಬೆಟ್ಟ ಕಡಿಯಲು ಆರಂಭಿಸಿ, 27 ನೆ ವರ್ಷ ವಯಸ್ಸೂ ಸಹ ಕಳಿಯತ್ತೆ ಹೀಗೆ 48 ವರ್ಷ ವಯಸ್ಸು ಆಗತ್ತೆ. 22 ವರ್ಷಗಳ ಕಾಲ ಕಷ್ಟ ಪಟ್ಟು ದಶರತ್ ಮಾಂಜಿ ತಾನೊಬ್ಬನೇ ಆ ಇಡೀ ಬೆಟ್ಟವನ್ನ ಕಡಿದು ಅಲ್ಲಿ ದಾರಿ ಮಾಡುತ್ತಾರೆ. 22 ವರ್ಷ ಕಷ್ಟ ಪಟ್ಟು ತಾನು ಅಂದುಕೊಂಡಂತೆ ತನ್ನ ಗುರಿಯನ್ನ ಸಾಧಿಸುತ್ತಾರೆ. ನಂತರ ಇದನ್ನ ಬಿಹಾರ್ ಸರ್ಕಾರ ಗುರುತಿಸಿ ಅಲ್ಲಿ ಈ ದು ರಸ್ತೆ ಮಾಡಿಸತ್ತೆ. ಆ ರಸ್ತೆಗೆ ದಶರತ್ ಮಾಂಜಿ ಅನ್ನೋ ಹೆಸರನ್ನೇ ಇಡತ್ತೆ. ಅಷ್ಟೇ ಅಲ್ಲ ಆ ಊರಿನಲ್ಲಿ ದೊಡ್ಡ ಅಸ್ಪತ್ರೆ ಹಾಗೂ ಶಾಲೆಯನ್ನು ಕೂಡ ಕಟ್ಟಲಾಗತ್ತೆ. ಎಲ್ಲದಕ್ಕೂ ದಶರತ್ ಮಾಂಜಿ ಎಂದು ಹೆಸರನ್ನು ಇಡಲಾಗುತ್ತದೆ.
ಗೆಲುವಿನಲ್ಲಿ ಇಲ್ಲದೆ ಇರುವ ಲಾಭಗಳು ಸೋಲಿನಲ್ಲಿ ಇದೆ. ಇದು ಕಲಿಯುವವರಿಗೆ ಮಾತ್ರ. ಸೋತ ಮೇಲೆ ತಾನು ಸೋತೆ ಹೋದೆ ಅನ್ನೋ ನಿರ್ಧಾರ ತೆಗೆದುಕೊಳ್ಳುವುದು ತಪ್ಪು. ಸೋಲು ಇಲ್ಲದೆ ಇರುವವರು ಈ ಪ್ರಪಂಚದಲ್ಲಿ ಯಾರು ಇಲ್ಲ ಸೋಲು ಗೆಲುವು ಹಗಲು ರಾತ್ರಿ ಇದ್ದಹಾಗೆ. ರಾತ್ರಿ ಕಳೆದ ಮೇಲೆ ಹೇಗೆ ಹಗಲು ಬರತ್ತೋ ಹಾಗೆ ಸೋಲು ಆದ ನಂತರವೇ ಗೆಲುವು ಬಂದೇ ಬರತ್ತೆ.