father Property Rules: ಆಸ್ತಿ ವಿಚಾರವಾಗಿ ಕಿತ್ತಾಟ ಆಗುವುದು ಈಗಿನ ಕಾಲದಲ್ಲಿ ನೀವು ಸಾಮಾನ್ಯವಾಗಿ ನೋಡಬಹುದು ಆಸ್ತಿ ವಿಚಾರಕ್ಕಾಗಿ ಕೋರ್ಟು ಕಚೇರಿ ಅಲೆಯುತ್ತಾರೆ ಈ ಲೇಖನದಲ್ಲಿ ಆಸ್ತಿಯ ಬಗ್ಗೆ ಕಾನೂನಿನಲ್ಲಿರುವ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ.ತಂದೆಯ ಆಸ್ತಿ ಯಾರಿಗೆ ಸಲ್ಲುತ್ತದೆ? ಪಿತ್ರಾರ್ಜಿತ (father Property) ಆಸ್ತಿಯನ್ನು ಮಾರಾಟ ಮಾಡುವಾಗ ಮಕ್ಕಳ ಅನುಮತಿ ಪಡೆಯಬೇಕಾ?? ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೋಡಬಹುದು.
ಇತ್ತೀಚಿನ ದಿನಗಳಲ್ಲಿ ನೀವು ಸಾಮಾನ್ಯವಾಗಿ ಆಸ್ತಿ ವಿಚಾರವಾಗಿ ತಂದೆ ಮಗ, ತಂದೆ ಮಗಳು, ಅಣ್ಣ ತಮ್ಮನ ನಡುವೆ ಕಿತ್ತಾಟ ಆಗುವುದನ್ನು ನಾವು ಪ್ರತಿನಿತ್ಯ ಕೇಳುತ್ತಲೇ ಇರುತ್ತೇವೆ. 2005ರ ತಿದ್ದುಪಡಿಯ ಪ್ರಕಾರ ಯಾವುದೇ ರೀತಿಯ ಲಿಂಗ ಭೇದವಿಲ್ಲದೆ ತಂದೆ ಆಸ್ತಿಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಸಮಾನ ಹಕ್ಕುದಾರರಾಗಿರುತ್ತಾರೆ ಎಂದು ಕಾನೂನು ಹೇಳಿದೆ.
ಪೂರ್ವಾರ್ಜಿತವಾಗಿ ಬಂದ ಆಸ್ತಿಯು ತಂದೆ ಮಕ್ಕಳನ್ನು ಕೇಳದೆ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ. ಪೂರ್ವಾಜಿತ ಆಸ್ತಿಯನ್ನು ಮಾರಾಟ ಮಾಡುವಾಗ ಮಕ್ಕಳು ವಿರೋಧ ಮಾಡಿದರೆ ಆಸ್ತಿ ಮಾರಾಟ ಮಾಡಲು ನಿಮಗೆ ತೊಂದರೆ ಆಗುತ್ತದೆ.
ತಂದೆಯು ತನ್ನ ಜೀವಿತಾವದಲ್ಲಿ ಅವಧಿಯಲ್ಲಿ ಸ್ವಂತ ದುಡಿಮೆಯಿಂದ ಆಸ್ತಿ ಸಂಪಾದನೆ ಮಾಡಿದ್ದರೆ ಆ ಆಸ್ತಿಯ ಮೇಲೆ ಯಾರಿಗೂ ಹಕ್ಕು ಇರುವುದಿಲ್ಲ ಅದನ್ನು ಅವರು ಏನು ಬೇಕಿದ್ದರೂ ಮಾಡಬಹುದು ದಾನವಾಗಿಯೂ ಅಥವಾ ಉಡುಗೊರೆಯಾಗಿ ಕೂಡ ನೀಡಬಹುದು. ಆ ಆಸ್ತಿಯನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇರುವುದಿಲ್ಲ.
ತಂದೆಯ ನಂತರ ತಂದೆಯ ಆಸ್ತಿಯು ಮಕ್ಕಳಿಗೆ ಸಲ್ಲುತ್ತದೆ. ಹಳೆಯ ಕಾಲದಲ್ಲಿ ತಂದೆ ಆಸ್ತಿ ಮಗನಿಗೆ ಮಾತ್ರ ಸಲ್ಲುತ್ತಿತ್ತು ಆದರೆ ಈಗ 2005ರ ತಿದ್ದುಪಡಿಯ ಪ್ರಕಾರ ಯಾವುದೇ ರೀತಿಯ ಲಿಂಗ ಭೇದವಿಲ್ಲದೆ ತಂದೆ ಆಸ್ತಿಯನ್ನು ಹೆಣ್ಣು ಮತ್ತು ಗಂಡು ಮಕ್ಕಳು ಸಮಾನ ಹಕ್ಕುದಾರರಾಗಿರುತ್ತಾರೆ. ಆಸ್ತಿ ಹಕ್ಕಿನ ಬಗ್ಗೆ ನಿಮಗೆ ಏನಾದರೂ ಮಾಹಿತಿ ಬೇಕಿದ್ದಲ್ಲಿ ನೀವು ಕಾನೂನಿನ ಸಲಹಾ ಕೇಂದ್ರಕ್ಕೆ ಭೇಟಿ ಕೊಟ್ಟು ಮಾಹಿತಿಯನ್ನು ತಿಳಿದುಕೊಳ್ಳಬಹುದು. ಇದನ್ನೂ ಓದಿ Kodi Matt Swamiji: ನಿಜವಾಗುತ್ತಾ ಕೋಡಿಮಠ ಶ್ರೀಗಳು ನುಡಿದ ಭವಿಷ್ಯ, ಮಳೆ ನೀರು ಕುರಿತು ಜನರಲ್ಲಿ ಆತಂಕ