ಮನುಷ್ಯನ ದೇಹದ ಅಂಗಾಂಗಗಳಲ್ಲಿ ಕಣ್ಣು, ಮೂಗು, ಕೂದಲು, ಹಲ್ಲುಗಳು ಮತ್ತು ಆಕರ್ಷಣೀಯ ಮೈಕಟ್ಟು ನೋಡುಗರನ್ನು ಆಕರ್ಷಿಸುತ್ತದೆ. ಹಾಗೆಯೇ ಅದರಲ್ಲಿ ದೇಹ ಕೂಡ ಒಂದು. ದೇಹ ಸುಂದರವಾಗಿ ಇರಬೇಕು ಎಂದರೆ ದಪ್ಪವಾಗಿ ಇರಬಾರದು. ದಪ್ಪವಾಗಿ ಇದ್ದರೆ ಅಂದರೆ ಬೊಜ್ಜನ್ನು ಹೊಂದಿದ್ದರೆ ಬಹಳ ಕಷ್ಟವಾಗುತ್ತದೆ. ಆದ್ದರಿಂದ ನಾವು ಇಲ್ಲಿ ಬೊಜ್ಜನ್ನು ಕರಗಿಸುವ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೆಲವರಿಗೆ ಕೊಲೆಸ್ಟ್ರಾಲ್ ಒಂದೊಂದು ಭಾಗದಲ್ಲಿ ಸಂಗ್ರಹವಾಗುತ್ತದೆ. ಕೆಲವರಿಗೆ ಕೈ ಭಾಗದಲ್ಲಿ ಹೆಚ್ಚು ಬೊಜ್ಜು ಇರುತ್ತದೆ. ಹಾಗೆಯೇ ಕೆಲವರಿಗೆ ತೊಡೆಯ ಭಾಗದಲ್ಲಿ ಹೆಚ್ಚಿನ ಬೊಜ್ಜು ಇರುತ್ತದೆ. ಹಾಗೆಯೇ ಇನ್ನೂ ಕೆಲವರಿಗೆ ಹೊಟ್ಟೆಯ ಭಾಗದಲ್ಲಿ ಬೊಜ್ಜು ಸಂಗ್ರಹವಾಗುತ್ತದೆ. ಆದರೆ ಕೆಲವರಿಗೆ ಮುಖದಲ್ಲಿ ಕೂಡ ಬೊಜ್ಜು ಸಂಗ್ರಹವಾಗುತ್ತದೆ. ಇದರಿಂದ ಮುಖದ ಅಂದ ಹಾಳಾಗುತ್ತದೆ. ಹಾಗಾಗಿ ಇದರಿಂದ ಮುಕ್ತಿ ಪಡೆಯಲು ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಬೇಕು.

ಮೊದಲು 5 ನಿಂಬೆಕಾಯಿಯನ್ನು ತೆಗೆದುಕೊಳ್ಳಬೇಕು. ನಂತರದಲ್ಲಿ ಅದನ್ನು ಚೆನ್ನಾಗಿ ತೊಳೆದುಕೊಳ್ಳಬೇಕು. ಒಂದು ಚಾಕುವನ್ನು ತೆಗೆದುಕೊಂಡು ನಿಂಬೇಕಾಯಿಯನ್ನು ದುಂಡನಾಗಿ ಅಂದರೆ ಗಾಲಿ ಗಾಲಿಯನ್ನಾಗಿ ಕತ್ತರಿಸಿಕೊಳ್ಳಬೇಕು. ಅದನ್ನು ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ನಂತರದಲ್ಲಿ 2ಲೋಟ ನೀರನ್ನು 15ನಿಮಿಷಗಳಗಳ ಕಾಲ ಬಿಸಿ ಉರಿಯನ್ನು ಇಟ್ಟು ಚೆನ್ನಾಗಿ ಕುದಿಯಲು ಇಟ್ಟುಕೊಳ್ಳಬೇಕು.

ನೀರು ದೊಡ್ಡ ದೊಡ್ಡ ಗುಳ್ಳೆ ಬರುವವರೆಗೆ ಕುದಿಯಬೇಕು. ನಂತರದಲ್ಲಿ ಗ್ಯಾಸ್ ನ್ನು ಆಫ್ ಮಾಡಿ ಗಾಲಿ ಗಾಲಿಯನ್ನಾಗಿ ಮಾಡಿಟ್ಟುಕೊಂಡ ನಿಂಬೆಹಣ್ಣಿನ ಪಾತ್ರೆಗೆ ಆ ನೀರನ್ನು ಹಾಕಬೇಕು. ಅದನ್ನು ಚೆನ್ನಾಗಿ ಕೈಯಾಡಬೇಕು. ಸ್ವಲ್ಪ ಹೊತ್ತು ಕೈಯಾಡಿದ ನಂತರದಲ್ಲಿಅದನ್ನು ಚೆನ್ನಾಗಿ ಸೋಸಿಕೊಂಡು ಒಂದು ಲೋಟಕ್ಕೆ ಹಾಕಿಕೊಂಡು ಕುಡಿಯಬೇಕು. ಇದನ್ನು ದಿನನಿತ್ಯ ಮಾಡಿ ಕುಡಿಯುವುದರಿಂದ ದೇಹದಲ್ಲಿ ಇರುವ ಬೊಜ್ಜನ್ನು ಸುಲಭವಾಗಿ ಕರಗಿಸಿಕೊಳ್ಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!