ಬಹಳ ದಪ್ಪಗಿರುವುದು ಒಳ್ಳೆಯದಲ್ಲ, ಬಹಳ ವೀಕ್ ಇರುವುದು ಒಳ್ಳೆಯದಲ್ಲ. ದಪ್ಪಗಿದ್ದವರಿಗೆ ವೀಕ್ ಆಗುವ ಚಿಂತೆ ಹಾಗಾಗಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ದಿನನಿತ್ಯದ ಜೀವನದಲ್ಲಿ, ಆಹಾರದಲ್ಲಿ ಮಾಡಿಕೊಳ್ಳಬೇಕಾದ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಈ ಲೇಖನದ ಮೂಲಕ ತಿಳಿಯೋಣ.
ವೇಟ್ ಕಡಿಮೆ ಮಾಡಿಕೊಳ್ಳಬೇಕಾದವರು ಡೆಡಿಕೇಶನ್ ಇರಬೇಕು, ಕಂಟ್ರೋಲ್ಡ್ ಆಗಿರಬೇಕು. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎರಡು ಲೋಟ ಉಗುರು ಬೆಚ್ಚಗೆ ನೀರನ್ನು ಕುಡಿಯಬೇಕು. ಇದರಿಂದ ದೇಹದಲ್ಲಿರುವ ಟಾಕ್ಸಿನ್ ಹೊರಹೋಗುತ್ತದೆ. ವೇಟ್ ಲಾಸ್ ಮಾಡುವವರು ದಿನಪೂರ್ತಿ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಆಗ ಬೊಡಿಯಲ್ಲರುವ ಫ್ಯಾಟ್ ಕರಗುತ್ತದೆ. 15-20 ನಿಮಿಷ ವ್ಯಾಯಾಮ ಅಥವಾ ಯೋಗ ಹಾಗೂ 30 ನಿಮಿಷಗಳು ವಾಕಿಂಗ್ ಮಾಡಬೇಕು ಇದರಿಂದ ಫ್ಯಾಟ್ ಕರಗುತ್ತದೆ ಹಾಗೇ ಆಕ್ಟೀವ್ ಆಗಿ ಇರಲು ಸಾಧ್ಯವಾಗುತ್ತದೆ.
ಡಿಟೊಕ್ಸ್ ಡ್ರಿಂಕ್ಸ್ ಕುಡಿಯುವುದರಿಂದ ಡೈಜೇಷನ್ ಸರಿಯಾಗುತ್ತದೆ ಅಲ್ಲದೇ ದೇಹದಲ್ಲಿರುವ ಬ್ಯಾಡ್ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಬೆಳಗ್ಗೆ ಎದ್ದ ಕೂಡಲೇ ಟೀ, ಕಾಫಿ ಕುಡಿಯುವ ಅಭ್ಯಾಸ ಇದ್ದವರು ಅದರ ಬದಲು ಗ್ರೀನ್ ಟೀ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಕೆಲವರು ವೇಟ್ ಲಾಸ್ ಮಾಡಿಕೊಳ್ಳಲು ಬೆಳಗಿನ ಉಪಹಾರ ಸೇವಿಸುವುದಿಲ್ಲ ಆದರೆ ಹೀಗೆ ಮಾಡುವುದರಿಂದ ವೇಟ್ ಲಾಸ್ ಆಗುವುದಿಲ್ಲ.
ಬೆಳಗಿನ ಸಮಯದಲ್ಲಿ ಡೈಜೇಷನ್ ಪವರ್ ಹೆಚ್ಚು ಇರುವುದರಿಂದ ಬೆಳಗಿನ ಸಮಯದಲ್ಲಿ ಪ್ರೊಟೀನ್ ಇರುವ ಆಹಾರವನ್ನು ಸೇವಿಸಬೇಕು. ಎಗ್, ಚಿಕನ್, ಮಶ್ರೂಮ್, ಕಾಳುಗಳು, ಓಟ್ಸ್ ಇವುಗಳನ್ನು ಬ್ರೇಕ್ ಫಾಸ್ಟ್ ಆಗಿ ಸೇವಿಸುವುದರಿಂದ ಆರೋಗ್ಯಕರವಾಗಿ ವೇಟ್ ಲಾಸ್ ಆಗುತ್ತದೆ.
ನಮ್ಮ ಹತ್ತಿರ ಸಾಧ್ಯವಾದಷ್ಟು ಕಡಿಮೆ ಊಟ ಮಾಡಬೇಕು ಮೊದಲು ಕಷ್ಟವಾಗುತ್ತದೆ ನಂತರ ಅಭ್ಯಾಸ ಆಗುತ್ತದೆ. ಟಿಫಿನ್, ಊಟ ಮಾಡುವಾಗ ಚಿಕ್ಕ ಪ್ಲೇಟ್ ತೆಗೆದುಕೊಳ್ಳಬೇಕು ಆಗ ಕಡಿಮೆ ಹಾಕಿಕೊಂಡರು ಹೆಚ್ಚು ತಿನ್ನುತ್ತಿದ್ದೇವೆ ಎಂಬ ಭಾವನೆ ಬರುತ್ತದೆ. ಊಟ ಮಾಡುವಾಗ, ತಿಂಡಿ ತಿನ್ನುವಾಗ ಮೊಬೈಲ್, ಕಂಪ್ಯೂಟರ್ ಗಳನ್ನು ಅವೈಡ್ ಮಾಡಬೇಕು.
ಪ್ರತಿದಿನ ರಾತ್ರಿ ಕನಿಷ್ಟ 8 ಗಂಟೆ ಸರಿಯಾಗಿ ನಿದ್ರೆ ಮಾಡಬೇಕು ನಿದ್ರೆ ಸರಿಯಾಗದೆ ಇದ್ದಾಗ ಒತ್ತಡ ಉಂಟಾಗಿ ವೇಟ್ ಹೆಚ್ಚಾಗುತ್ತದೆ. ರಾತ್ರಿ ಬೇಗ ಎದ್ದು ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಬೇಕು ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು. ವೇಟ್ ಕಡಿಮೆ ಮಾಡಿಕೊಳ್ಳುವವರು ಜಂಕ್ ಫುಡ್, ಸ್ವೀಟ್ಸ್ ಗಳನ್ನು ಅವಾಯ್ಡ್ ಮಾಡಬೇಕು. ಹೀಗೆ ಪ್ರತಿದಿನ ತಪ್ಪದೇ ಮಾಡಿದರೆ ಒಂದು ತಿಂಗಳಲ್ಲಿ ವೇಟ್ ಕಡಿಮೆ ಆಗುತ್ತದೆ.
ವೇಟ್ ಹೆಚ್ಚು ಮಾಡಿಕೊಳ್ಳುವುದಾಗಲಿ ಕಡಿಮೆ ಮಾಡಿಕೊಳ್ಳುವುದಾಗಲಿ ದಿಢೀರ್ ಆಗುವುದಿಲ್ಲ ಬಹಳ ಸಮಯದ ನಂತರ ರಿಸಲ್ಟ್ ಗೊತ್ತಾಗುತ್ತದೆ ಅಲ್ಲಿವರೆಗೂ ಕಾಯಬೇಕು. ಹೀಗೆ ಮಾಡುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.