ರೈತರು ತಮ್ಮ ಭೂಮಿಯಲ್ಲಿ ಬಿತ್ತನೆ ಮಾಡಿ ಫಸಲಿಗಾಗಿ ಕಾಯುತ್ತಿರುತ್ತಾರೆ ಇದಕ್ಕೆ ಸರಿಯಾಗಿ ರಾಜ್ಯಾದ್ಯಂತ ಎಲ್ಲಾ ಕಡೆ ಮುಂಗಾರು ಮಳೆಯು ಪ್ರಾರಂಭವಾಗಿದೆ. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿಕೊಳ್ಳಲು ಸರ್ಕಾರ ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ ಹಾಗಾದರೆ ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು ಕೊನೆಯ ದಿನಾಂಕವನ್ನು ಈ ಲೇಖನದಲ್ಲಿ ನೋಡೋಣ

ಈಗಾಗಲೆ ಮುಂಗಾರು ಮಳೆ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಕರ್ನಾಟಕದ ಹಲವು ಭಾಗಗಳಲ್ಲಿ ಮಳೆಯಾಗಿದೆ. ರೈತರು ಮಳೆಯನ್ನು ನೋಡಿ ಸಂತೋಷ ಪಟ್ಟಿದ್ದಾರೆ. ರೈತರು ಈಗಾಗಲೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜವನ್ನು ಖರೀದಿ ಮಾಡಿ ಕೆಲವರು ಮನೆಯಲ್ಲಿರುವ ಬೀಜವನ್ನು ಅಥವಾ ಅಂಗಡಿಗಳಲ್ಲಿ ಸಿಗುವ ಬೀಜಗಳನ್ನು ಖರೀದಿ ಮಾಡಿ ಬಿತ್ತನೆಯನ್ನು ಪ್ರಾರಂಭಿಸಿ ಬೆಳೆಯ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿಯಲ್ಲಿ ರೈತರು ತಮ್ಮ ತಮ್ಮ ಬೆಳೆಗೆ ವಿಮೆಯನ್ನು ಕಟ್ಟಲು ಸರ್ಕಾರ ಅವಕಾಶ ಕೊಟ್ಟಿದ್ದು ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ ಹೀಗಾಗಿ ರೈತರು ತಮ್ಮ ಬೆಳೆಗೆ ವಿಮೆ ಮಾಡಿಸಿಕೊಳ್ಳಬಹುದು.

ಈ ಯೋಜನೆಯಲ್ಲಿ ರೈತರು ಅರ್ಜಿಯೊಂದಿಗೆ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ ಸಂಖ್ಯೆಯನ್ನು ನೀಡಿ ನೋಂದಾಯಿಸಿಕೊಳ್ಳಬಹುದು. ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಸಂರಕ್ಷಣೆ ತಂತ್ರಾಂಶದಲ್ಲಿ ಪಡೆಯಬಹುದು. www.samrakshane.karnataka.gov.in ವೆಬ್ ಸೈಟ್ ನಲ್ಲಿ ತಿಳಿದುಕೊಳ್ಳಬಹುದು ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬಹುದು.

ಯಾವ ಬೆಳೆಗೆ ಎಷ್ಟು ವಿಮೆ ಕಟ್ಟಬೇಕು ಎಂಬ ಮಾಹಿತಿಯನ್ನು ಈ ಕೆಳಗಿನಂತೆ ನೋಡಬಹುದು. ಮುಸುಕಿನ ಜೋಳ ಬೆಳಗೆ ಒಂದು ಎಕರೆಗೆ 458 ರೂಪಾಯಿ ಒಂದು ಹೆಕ್ಟೇರ್ ಗೆ 1,130 ರೂಪಾಯಿ ಕಟ್ಟಬೇಕು ಕೊನೆಯ ದಿನಾಂಕ 31 ಜುಲೈ 2024. ಬೆಳೆಯ ಹೆಸರು ಜೋಳ ಒಂದು ಎಕರೆಗೆ 310 ರೂಪಾಯಿ ಒಂದು ಹೆಕ್ಟೇರ್ ಗೆ 765 ರೂಪಾಯಿ ಕೊನೆಯ ದಿನಾಂಕ 31 ಜುಲೈ 2024. ಬೆಳೆಯ ಹೆಸರು ಹೆಸರು ಬೇಳೆ ಒಂದು ಎಕರೆಗೆ 270 ರೂಪಾಯಿ ಒಂದು ಹೆಕ್ಟೇರ್ ಗೆ 665 ರೂಪಾಯಿ ಕೊನೆಯ ದಿನಾಂಕ 15 ಜುಲೈ 2024. ಬೆಳೆಯ ಹೆಸರು ಸೂರ್ಯಕಾಂತಿ ಒಂದು ಎಕರೆಗೆ 330 ರೂಪಾಯಿ ಒಂದು ಹೆಕ್ಟೇರ್ ಗೆ 815 ರೂಪಾಯಿ ಕೊನೆಯ ದಿನಾಂಕ 16 ಆಗಸ್ಟ್ 2024. ಬೆಳೆಯ ಹೆಸರು ಹತ್ತಿ ಒಂದು ಎಕರೆಗೆ 1007 ರೂಪಾಯಿ ಒಂದು ಹೆಕ್ಟೇರ್ ಗೆ 2488 ರೂಪಾಯಿ ಕೊನೆಯ ದಿನಾಂಕ 31 ಜುಲೈ 2024. ಬೆಳೆಯ ಹೆಸರು ನೆಲಗಡಲೆ ಶೇಂಗಾ ಒಂದು ಎಕರೆಗೆ 442 ರೂಪಾಯಿ ಒಂದು ಹೆಕ್ಟೇರ್ ಗೆ 1090 ರೂಪಾಯಿ ಕೊನೆಯ ದಿನಾಂಕ 31 ಜುಲೈ 2024. ಬೆಳೆಯ ಹೆಸರು ಸಜ್ಜೆ ಒಂದು ಎಕರೆಗೆ 255 ರೂಪಾಯಿ ಒಂದು ಹೆಕ್ಟೇರ್ ಗೆ 630 ರೂಪಾಯಿ ಕೊನೆಯ ದಿನಾಂಕ 31 ಜುಲೈ 2024. ಈ ಮಾಹಿತಿಯನ್ನು ತಪ್ಪದೆ ಎಲ್ಲ ರೈತರಿಗೂ ತಿಳಿಸಿ, ಬೆಳೆ ವಿಮೆಯ ಪ್ರಯೋಜನವನ್ನು ಪಡೆಯಿರಿ.

By

Leave a Reply

Your email address will not be published. Required fields are marked *