farmer tractor Subsidy Scheme: ನಮ್ಮ ರಾಜ್ಯ ಸರ್ಕಾರವು ಬಡವರ ಮತ್ತು ರೈತರ ಪರವಾಗಿ ಇರುವ ಸರ್ಕಾರ ಆಗಿದೆ. ರೈತರು ಈಗ ಸರಿಯಾದ ಮಳೆ ಬೆಳೆ ಇಲ್ಲದೇ ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ. ಹಾಗಾಗಿ ಕೃಷಿ ಕೆಲಸಗಳಿಗೆ ಸಹಾಯ ಆಗುವ ಹಾಗೆ ಈಗ ರಾಜ್ಯ ಸರ್ಕಾರವು ಸಿಎಂ ಟ್ರಾಕ್ಟರ್ ಯೋಜನೆ ಜಾರಿಗೆ ತರಲಿದೆ. ಈ ಯೋಜನೆಯ ಮೂಲಕ 50% ಸಬ್ಸಿಡಿ ದರದಲ್ಲಿ ರೈತರಿಗೆ ಟ್ರಾಕ್ಟರ್ ಹಾಗೂ ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ವಿತರಣೆ ಮಾಡುವ ಯೋಜನೆ ಇದಾಗಿದೆ. ಇದಕ್ಕಾಗಿ ಸರ್ಕಾರವು 80ಕೋಟಿ ರೂಪಾಯಿಗಳ ಬಜೆಟ್ ಇಟ್ಟುಕೊಂಡಿದೆ.

ಈ ಸಿಎಂ ಟ್ರಾಕ್ಟರ್ ಯೋಜನೆಯ ಮೊದಲ ಹಂತದಲ್ಲಿ 1112 ಟ್ರಾಕ್ಟರ್ ಗಳನ್ನು ವಿತರಣೆ ಮಾಡಬೇಕು ಎಂದುಕೊಳ್ಳಲಾಗಿದ್ದು, ಆರ್ಥಿಕವಾಗಿ ಕಷ್ಟದಲ್ಲಿರುವ ರೈತರಿಗೆ ಈ ಯೋಜನೆಯ ಸೌಲಭ್ಯ ನೀಡಲಾಗುತ್ತದೆ..ಬೇರೆ ಉಪಕರಣಗಳ ಖರೀದಿಗೂ 80% ಸಬ್ಸಿಡಿ ಸಾಲವನ್ನು ನೀಡಲಾಗುತ್ತದೆ. ಈ ಯೋಜನೆಯ ಸೌಲಭ್ಯ ಪಡೆಯಲು ರೈತರು ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ, ಕೆಲವು ಮಾನದಂಡಗಳಿದ್ದು ಅವುಗಳನ್ನೆಲ್ಲಾ ಪೂರೈಸುವ ರೈತರಿಗೆ ಈ ಸೌಲಭ್ಯ ಸಿಗುತ್ತದೆ.

ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು ಹತ್ತಿರದ ಸರ್ಕಾರಿ ಕಚೇರಿಗೆ ಅಥವಾ ವೆಬ್ದೈಗ್ ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು. ಈ ಯೋಜನೆಯಲ್ಲಿ ಟ್ರಾಕ್ಟರ್ ಗೆ 50% ಸಬ್ಸಿಡಿ ನೀಡಲಾಗುತ್ತದೆ ಆದರೆ ಇದಕ್ಕೆ ಸಂಬಂಧಿಸಿದ ಜಿಎಸ್ಟಿ ಅನ್ನು ರೈತರೆ ಪಾವತಿ ಮಾಡಬೇಕಾಗುತ್ತದೆ. ಮಾಹಿತಿಯ ಪ್ರಕಾರ ಈ ಯೋಜನೆಯ ಸೌಲಭ್ಯವನ್ನು ಎಲ್ಲಾ ರೈತರು, ರೈತರ ಗುಂಪುಗಳು, ಮಹಿಳಾ ಸ್ವಸಹಾಯ ಗುಂಪುಗಳು, ಜಲ ಪಂಚಾಯಿತಿ, ಕೃಷಿ ದೀಪ ಮತ್ತು ಇನ್ನಿತರ ಸಂಸ್ಥೆಗಳು ಪಡೆಯಬಹುದು.

ಟ್ರಾಕ್ಟರ್ ಜೊತೆಗೆ ಕೃಷಿ ಪರಿಕರಗಳನ್ನು ನೀಡಲಾಗುತ್ತದೆ. ರೈತರ ಬಳಿ ಅಥವಾ ಅವರ ಗುಂಪಿನ ಬಳಿ 10 ಎಕರೆಗಿಂತ ಹೆಚ್ಚಿನ ಜಮೀನು ಇದ್ದರೆ ಅಂಥವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಹಾಗೆಯೇ ರೈತರ ಗುಂಪಿನಲ್ಲಿ ಟ್ರಾಕ್ಟರ್ ಡ್ರೈವಿಂಗ್ ಲೈಸೆನ್ಸ್ ಇರಬೇಕು, ಅವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಯೋಜನೆಗೆ ಯಾರಿಗೆಲ್ಲ ಅರ್ಹತೆ ಸಿಗುತ್ತದೆ ಎಂದು ನೋಡುವುದಾದರೆ..

ರಾಜ್ಯದ ಎಲ್ಲಾ ರೈತರು ಈ ಸೌಲಭ್ಯ ಪಡೆಯಬಹುದು
ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಜಾಸ್ತಿ ಇರಬೇಕು
7 ವರ್ಷಗಳಿಂದ ಸಬ್ಸಿಡಿ ಮೂಲಕ ಟ್ರಾಕ್ಟರ್ ಕೊಂಡುಕೊಳ್ಳದೇ ಇರುವವರು ಈ ಯೋಜನೆಗೆ ಅರ್ಜಿ ಹಾಕಬಹುದು ಯೋಜನೆಯ ಮೂಲಕ ಟ್ರಾಕ್ಟರ್ ಖರೀದಿ ಮಾಡಿರುವವರು 5 ವರ್ಷಗಳ ಕಾಲ ಮಾರಾಟ ಮಾಡುವ ಹಾಗಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವಾಸಸ್ಥಳ ಪ್ರಮಾಣ ಪತ್ರ, ಇನ್ಕಮ್ ಸರ್ಟಿಫಿಕೇಟ್, ಅಡ್ರೆಸ್ ಪ್ರೂಫ್, ಬ್ಯಾಂಕ್ ಅಕೌಂಟ್ ಡೀಟೇಲ್ಸ್, ಡಿಎಲ್, ಕೃಷಿ ಪತ್ರಿಕೆಗಳು, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಫೋನ್ ನಂಬರ್, ಪಾಸ್ ಪೋರ್ಟ್ ಸೈಜ್ ಫೋಟೋ. ಇವುಗಳನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬಹುದು.

By

Leave a Reply

Your email address will not be published. Required fields are marked *