ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಎಲ್ಲಾ ಯೋಜನೆಗಳು ಜನರಿಗೆ ಬಹಳ ಅನುಕೂಲಕರವಾಗಿವೆ. ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ,ವಯಸ್ಸಾದವರಿಗೆ ಹಾಗೆಯೇ ರೈತರಿಗೂ ಸಹ ಅನುಕೂಲಕರವಾಗಿದೆ. ಪ್ರಧಾನಿ ಮೋದಿ ಅವರು ರೈತರಿಗೆ ಪಿಎಂ ಕೃಷಿ ಸಿಂಚಾಯೀ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಆದ್ದರಿಂದ ನಾವು ಇಲ್ಲಿ ಆ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

2025ರಲ್ಲಿ ರೈತರಿಗೋಸ್ಕರ ಪಿಎಂ ಕೃಷಿ ಸಿಂಚಾಯೀ ಯೋಜನೆಯನ್ನು ನೀರಾವರಿ ಉಪಕರಣಗಳನ್ನು ಒದಗಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಜಾರಿಗೆ ತಂದಿದ್ದಾರೆ. ಈ ಯೋಜನೆಯು ರೈತರಿಗೆ ಹೊಲಗಳಿಗೆ ನೀರಿನ ಸೌಲಭ್ಯಗಳನ್ನು ನೀಡುತ್ತದೆ. ಈ ಯೋಜನೆಯ ಅಡಿಯಲ್ಲಿ ರೈತರಿಗೆ ಸಹಾಯಧನದಲ್ಲಿ ನೀರಾವರಿ ಉಪಕರಣಗಳು ಲಭ್ಯವಾಗಲಿದೆ. ಇದರ ಲಾಭವನ್ನು ಸ್ವಸಹಾಯ ಸಂಘಗಳು, ಟ್ರಸ್ಟ್, ಸಹಕಾರಿ ಸೊಸೈಟಿ, ಸಂಘಟಿತ ಕಂಪನಿಗಳು, ಉತ್ಪಾದನಾ ರೈತರ ಗುಂಪು ಮತ್ತು ಇತರೆ ಅರ್ಹ ಸದಸ್ಯರ ಸಂಸ್ಥೆಗಳಿಗೆ ಇದನ್ನು ನೀಡಲಾಗುತ್ತದೆ.

ಇದರಲ್ಲಿ ಶೇಕಡಾ 75ರಷ್ಟು ಕೇಂದ್ರ ಸರ್ಕಾರ ಮತ್ತು ಶೇಕಡಾ 25ರಷ್ಟು ರಾಜ್ಯ ಸರ್ಕಾರ ಸಹಾಯಧನ ನೀಡುತ್ತದೆ. ಹೊಲಗಳ ನೀರಾವರಿಯಲ್ಲಿ ನೀರನ್ನು ಉಳಿಸಬೇಕು. ಕೃಷಿಯಲ್ಲಿ ನಷ್ಟದಿಂದ ರೈತರನ್ನು ಉಳಿಸಬೇಕು. ನೀರಾವರಿಯಲ್ಲಿ ತಂತ್ರಜ್ಞಾನವನ್ನು ಬಳಕೆ ಮಾಡಬೇಕು ಇವೆಲ್ಲ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಇದರಿಂದ ಹಲವಾರು ಪ್ರಯೋಜನಗಳು ಇವೆ. ಹೊಲಗಳಿಗೆ ನೀರಾವರಿ ಮಾಡಲು ವ್ಯವಸ್ಥೆ ಸಿಗುತ್ತದೆ. ಸರ್ಕಾರದಿಂದ ಉಪಕರಣಗಳಿಗೆ ಸಬ್ಸಿಡಿ ದೊರೆಯುತ್ತದೆ. ಇದರ ಮೂಲಕ ಕೃಷಿಯನ್ನು ವಿಸ್ತರಿಸಬಹುದು.

ಹಾಗೆಯೇ ಇದರಿಂದ ದೇಶದ ಆರ್ಥಿಕತೆ ಅಭಿವೃದ್ಧಿ ಆಗುತ್ತದೆ. ರೈತ ದೇಶದ ಬೆನ್ನೆಲುಬು ಆಗಿದ್ದಾನೆ. ಹಾಗಾಗಿ ಅವನ ಅಭಿವೃದ್ಧಿ ಬಹಳ ಮುಖ್ಯ. ಇದರಿಂದ ರೈತನ ಅಭಿವೃದ್ಧಿ ಸಹ ಆಗುತ್ತದೆ. ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಹತ್ತಿರದ ಗ್ರಾಮ ಪಂಚಾಯತಿಗೆ ಹೋಗಿ ಅಲ್ಲಿ ಎಲ್ಲಾ ಮಾಹಿತಿಗಳನ್ನು ಪಡೆದು ಅರ್ಜಿಯನ್ನು ಸಲ್ಲಿಸಬೇಕು.
ಇದಕ್ಕೆ ಒಂದು ವೆಬ್ಸೈಟ್ ಇದೆ. ಅದೇನೆಂದರೆ
https://pmksy.gov.in/ ಈ ವೆಬ್ಸೈಟ್ ನ್ನು ಬಳಸಿ ಈ ಯೋಜನೆಯ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!