ನಮ್ಮ ಮುಖದ ಚರ್ಮ ಯಾವ ರೀತಿಯಲ್ಲಿ ಇದೆ ಎಂಬುದನ್ನು ತಿಳಿಯುವುದು ಹೇಗೆ ಹಾಗೂ ಅದಕ್ಕೆ ಪರಿಹಾರವನ್ನು ಈ ಲೇಖನದ ಮೂಲಕ ತಿಳಿಯೋಣ.
ಬ್ಲೋಟಿಂಗ್ ಪೇಪರ್ ಟೆಸ್ಟ್ ಇದರಿಂದ ಸ್ಕಿನ್ ಯಾವ ಟೈಪ್ ಇದೆ ಎಂದು ತಿಳಿಯುತ್ತದೆ. ಚರ್ಮದಲ್ಲಿ ಆಯಿಲ್ ಸ್ಕಿನ್, ಡ್ರೈ ಸ್ಕಿನ್, ನಾರ್ಮಲ್ ಸ್ಕಿನ್ ಎಂಬ ಮೂರು ವಿಧಗಳಿವೆ. ಫೇಸ್ ವಾಷ್ ನಿಂದ ಮುಖವನ್ನು ಚೆನ್ನಾಗಿ ತೊಳೆದು 15 ನಿಮಿಷದ ನಂತರ ಬ್ಲೋಟಿಂಗ್ ಪೇಪರನ್ನು ಸಣ್ಣದಾಗಿ ಪೀಸ್ ಮಾಡಿಕೊಂಡು ಅದನ್ನು ಮೂಗು, ಹಣೆಯ, ಕೆನ್ನೆಯ ಮೇಲೆ ಹಚ್ಚಿಕೊಳ್ಳಬೇಕು ಮುಖದ ಮೇಲೆ ಪೇಪರ್ ನಿಲ್ಲದೆ ಬಿದ್ದು ಹೋಗುತ್ತಿದ್ದರೆ ಅದು ಡ್ರೈ ಸ್ಕಿನ್. ಬಹಳ ಹೊತ್ತಿನವರೆಗೆ ಬೀಳದೆ ಹಾಗೆ ಇದ್ದರೆ ಅದು ಆಯಿಲ್ ಸ್ಕಿನ್. ಹಚ್ಚಿದ ಪೇಪರ್ ಎರಡರಿಂದ ಮೂರು ನಿಮಿಷದವರೆಗೆ ಇದ್ದು ನಂತರ ಬಿದ್ದರೆ ಅದು ನಾರ್ಮಲ್ ಸ್ಕಿನ್.
ಡ್ರೈ ಸ್ಕಿನ್ ಕಡಿಮೆ ಮಾಡಲು ನೀರನ್ನು ಹೆಚ್ಚು ಕುಡಿಯಬೇಕು. ತುಪ್ಪ, ಮೊಸರು, ಬೆಣ್ಣೆಯನ್ನು ಆಹಾರದಲ್ಲಿ ಸೇವಿಸಬೇಕು. ಶುದ್ಧ ತೆಂಗಿನ ಎಣ್ಣೆಯಿಂದ ಪ್ರತಿದಿನ ಮಸಾಜ್ ಮಾಡಿಕೊಳ್ಳಬೇಕು ರಾತ್ರಿ ಮಲಗುವಾಗ ವೈಟ್ ಪೆಟ್ರೋಲಿಯಂ ಜಲ್ ಅನ್ನು ಹಚ್ಚಿಕೊಳ್ಳಬೇಕು. ಪ್ರತಿದಿನ ಅಲೋವೆರಾ ಜಲ್ ನಿಂದ ಮಸಾಜ್ ಮಾಡಬೇಕು.
ಆಯಿಲ್ ಸ್ಕಿನ್ ಕಡಿಮೆಮಾಡಿಕೊಳ್ಳಲು ದಿನಕ್ಕೆ ಎರಡು ಬಾರಿ ಮೈಲ್ಡ್ ಫೇಸ್ ವಾಷ್ ಬಳಸಿ ವಾಷ್ ಮಾಡಬೇಕು. ವಾರಕ್ಕೆ ಎರಡು ಬಾರಿ ಮುಲ್ತಾನಿ ಮಿಟ್ಟಿ ಅಥವಾ ಹುತ್ತದ ಮಣ್ಣನ್ನು ನೀರಿನಲ್ಲಿ ನೆನೆಸಿ ಮುಖಕ್ಕೆ ಹಚ್ಚಿ ಐದರಿಂದ ಹತ್ತು ನಿಮಿಷ ಬಿಟ್ಟು ತೊಳೆಯಬೇಕು. ರೋಸ್ ವಾಟರ್ ಅಥವಾ ಅಕ್ಕಿ ತೊಳೆದ ನೀರಿನಲ್ಲಿ ಕಾಟನ್ ನೆನೆಸಿ ಮುಖವನ್ನು ವಾಷ್ ಮಾಡುವುದು ಅಂದರೆ ಟೋನರ್ ಆಗಿ ಬಳಸುವುದರಿಂದ ಆಯಿಲ್ ಸ್ಕಿನ್ ಕಡಿಮೆಯಾಗುತ್ತದೆ. ಆಯಿಲ್ ಸ್ಕಿನ್ ಇದ್ದವರಿಗೆ ಕ್ಯಾರೆಟ್ ಪ್ಯಾಕ್ ಉತ್ತಮ, ಪ್ರತಿದಿನ ಕ್ಯಾರೆಟ್ ಜ್ಯೂಸನ್ನು ಕುಡಿಯುವುದು ಒಳ್ಳೆಯದು. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.