ಟೋಮ್ಯಾಟೋ ಹಣ್ಣು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಟೋಮ್ಯಾಟೋ ಎಲ್ಲರಿಗೂ ಗೊತ್ತಿರಬಹುದಾದ ಒಂದು ತರಕಾರಿ ಗ್ರಾಮೀಣ ಪ್ರದೇಶದವರಿಂದ ಹಿಡಿದು ಪಟ್ಟಣಗಳಲ್ಲಿ ವಾಸಿಸುವವರಿಗೂ ಕೂಡ ಟೋಮ್ಯಾಟೋ ಚಿರಪರಿಚಿತ ಯಾಕಂದ್ರೆ ನಮ್ಮ ದಿನನಿತ್ಯದ ಅಡುಗೆ ತಿಂಡಿಗಳು ಟೋಮ್ಯಾಟೋ ಇಲ್ಲದೇ ಆಗುವುದೇ ಇಲ್ಲ ಅನ್ನುವಷ್ಟು ಟೋಮ್ಯಾಟೋ ಅತ್ಯಾವಶ್ಯಕ ಸಾಮಾನ್ಯವಾಗಿ ಹಲವಾರು ತಳಿಗಳ ಟೋಮ್ಯಾಟೊ ಹಣ್ಣನ್ನು ನಾವು ನೋಡಿರುತ್ತೇವೆ ಅಲ್ಲದೇ ತಿಂದಿರುತ್ತೇವೆ ಟೋಮ್ಯಾಟೋ ಹಣ್ಣು ಅಡುಗೆಯಲ್ಲಿ ಉಪಯೋಗಿಸಲು ಮಾತ್ರವಲ್ಲದೇ ಹಸಿಯಾಗಿ ತಿನ್ನಲೂ ಸಹ ಬಹಳ ರುಚಿಯಾಗಿಯೇ ಇರುತ್ತದೆ ಮತ್ತು ಟೋಮ್ಯಾಟೋ ಒಂದು ಸಾರ್ವಕಾಲಿಕ ಬೆಳೆ ಆದರೆ ಎಲ್ಲಾ ಸಂದರ್ಭಗಳಲ್ಲಿಯೂ ಸಹ ಟೋಮ್ಯಾಟೋ ರೈತನ ಕೈ ಹಿಡಿಯುವುದಿಲ್ಲ ಒಮ್ಮೊಮ್ಮೆ ಈ ಟೋಮ್ಯಾಟೋ ಹಣ್ಣಿನ ಬೆಲೆ ಕೇಳುವವರಿಲ್ಲದ ಹಾಗೆ ಆಗಿಬಿಡುತ್ತದೆ
ಅದಿರಲಿ ಬಿಡಿ ಟೋಮ್ಯಾಟೋ ಹಣ್ಣು ನೋಡಲು ಸುಂದರವಷ್ಟೆ ಅಲ್ಲ ಆರೋಗ್ಯದ ದೃಷ್ಟಿಯಿಂದಲೂ ಕೂಡ ಅದೊಂದು ಅದ್ಬುತ ಪ್ರಯೋಜನಕಾರಿ ಹಣ್ಣು ಅದರಲ್ಲಿಯೂ ನಮ್ಮ ಚರ್ಮಕ್ಕಂತೂ ಹೇಳಿ ಮಾಡಿಸಿದ ಔಷದಿ ಹೌದು ಕಪ್ಪಗಿರುವವರು ಟೋಮ್ಯಾಟೋ ಹಣ್ಣನ್ನು ಈ ರೀತಿ ಬಳಸುವುದರಿಂದ ನಿಮ್ಮ ತ್ವಚೆಯನ್ನು ಕಾಯ್ದುಕೊಂಡು ಬೆಳ್ಳಗಾಗಬಹುದು ಮತ್ತು ನಿಮ್ಮ ಮುಖವನ್ನು ಕಾಂತಿಯುತಾವಾಗಿಡಲುಬಹುದು ಹಾಗಾದ್ರೆ ಟೋಮ್ಯಾಟೋ ವನ್ನು ಯಾವ ರೀತಿ ಬಳಸುವುದರಿಂದ ಇದು ನಮ್ಮ ಚರ್ಮಕ್ಕೆ ಪ್ರಯೋಜನಕಾರಿ ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ
ಮೊದಲಿಗೆ ಒಂದು ಟೋಮ್ಯಾಟೋವನ್ನು ಚೆನ್ನಾಗಿ ನೀರಿನಿಂದ ತೊಳೆದು ಇಟ್ಟುಕೊಳ್ಳಬೇಕು ಅದರೊಂದಿಗೆ ಒಂದು ಚಿಕ್ಕ ಪ್ಲೇಟ್ ನಲ್ಲಿ ಒಂದು ಚಮಚ ಅರಿಶಿನದ ಪುಡಿಯನ್ನು ಇಟ್ಟುಕೊಳ್ಳಬೇಕು ನಂತರ ತೊಳೆದು ಇಟ್ಟುಕೊಂಡ ಟೋಮ್ಯಾಟೋ ಹಣ್ಣನ್ನು ಎರಡು ಹೋಳುಗಳನ್ನಾಗಿ ಮಾಡಿಕೊಂಡು ಆ ಹೋಳುಗಳನ್ನು ಪ್ಲೇಟ್ ನಲ್ಲಿ ಇಟ್ಟುಕೊಂಡಿರುವ ಅರಸಿನದ ಪುಡಿಯಲ್ಲಿ ಅದ್ಧಿಕೊಳ್ಳಬೇಕು ಹೀಗೆ ಅದ್ಧಿಕೊಂಡ ಟೋಮ್ಯಾಟೋ ಹಣ್ಣಿನ ಭಾಗದಿಂದ ನಿಮ್ಮ ಮುಖದ ಚರ್ಮದ ಮೇಲೆ ಚೆನ್ನಾಗಿ ವೃತ್ತಾಕಾರದ ರೀತಿಯಲ್ಲಿ ಐದು ನಿಮಿಷಗಳ ಕಾಲ ಮಸಾಜ್ ಮಾಡಬೇಕು ಹೀಗೆ ಮಸಾಜ್ ಮಾಡಿದ ನಂತರ ಮಸಾಜ್ ಮಾಡಿಕೊಂಡ ಆ ಜಾಗವನ್ನು ಚೆನ್ನಾಗಿ ಒಣಗಲು ಬಿಡಬೇಕು ಅದು ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ಅದನ್ನು ತೊಳೆಕೊಳ್ಳಬೇಕು ವಾರದಲ್ಲಿ ಎರಡು ಬಾರಿಯಾದರೂ ಹೀಗೆ ಮಾಡಿಕೊಳ್ಳುವುದರಿಂದ ನಿಮ್ಮ ಚರ್ಮದ ತ್ವಚೆ ಶೀಘ್ರದಲ್ಲಿ ಬೆಳ್ಳಗಾಗುವುದೂ ಅಲ್ಲದೇ ನಿಮ್ಮ ಮುಖ ಯಾವಾಗಲೂ ಕಾಂತಿಯುತವಾಗಿ ಕಾಣುವುದು