ನಾವಿಂದು ಮಾತನಾಡುತ್ತಿರುವ ವಿಷಯ ಯವ್ವನದ ಕುರಿತು ಕೆಲವರಿಗೆ ಎಪ್ಪತ್ತಾದರೂ ಇಪ್ಪತ್ತರಂತೆ ಕಾಣಬೇಕು ಎಂಬ ಆಸೆ ಇರುತ್ತದೆ. ಎಲ್ಲರಿಗೂ ಕೂಡ ಸಹಜವಾಗಿ ತಾವು ಸುಂದರವಾಗಿ ಕಾಣಬೇಕೆಂಬ ಆಸೆ ಇರುತ್ತದೆ. ನಿಮ್ಮ ಹರೆಯ ಕಾಣುವಂತದ್ದು ದೇಹದಿಂದ ಅಲ್ಲ ನಿಮ್ಮ ಬಣ್ಣದಿಂದ ಅಲ್ಲ ನಿಮ್ಮ ಎತ್ತರದಿಂದ ಅಲ್ಲ ನಿಮ್ಮ ತಲೆ ಕೂದಲಿನಿಂದ ಅಲ್ಲ ಅದು ಕಾಣುವುದು ನಿಮ್ಮ ಚರ್ಮದ ಕಾಂತಿಯಿಂದ. ಮುಪ್ಪಾಗುತ್ತದೆ ಎಂದು ಕಂಡು ಹಿಡಿಯುವುದು ಹೇಗೆ
ಎಂದರೆ ಮುಖದ ಮೇಲೆ ನೆರಿಗೆ ಕಟ್ಟುತ್ತಿದೆ ಮುಖ ಸುಕ್ಕಾಗುತ್ತಿದೆ ಚರ್ಮ ಕಾಂತಿಹೀನವಾಗಿ ಹೊಳಪು ಇಲ್ಲದಿರುವಂತಹದ್ದೆ ಮುಪ್ಪು. ಒಂದು ವೇಳೆ ಆ ಚರ್ಮದ ಕಾಂತಿ ಹೊಳಪು ಹೆಚ್ಚಲು ಸರಿಯಾಗಿ ಪೋಷಣೆ ಮಾಡಿಕೊಂಡು ಹೋದರೆ ನೀವು ಎಪ್ಪತ್ತು ವರ್ಷದವರಾದರೂ ಇಪ್ಪತ್ತು ವರ್ಷ ವಯಸ್ಸಿನವರಂತೆ ಕಾಣುತ್ತೀರಿ. ನವ ಯುವಕ ಯುವತಿಯರಂತೆ ಕಾಣುತ್ತೀರಿ ಅಂತಹ ಜವ್ವನ ಎಲ್ಲರಿಗೂ ಬೇಕು.
ಹಾಗಾದರೆ ಆ ರೀತಿಯಾಗಿ ಕಾಣುವುದಕ್ಕೆ ಏನು ಮಾಡಬೇಕು ಎಂಬುದರ ಬಗ್ಗೆ ನಾವು ಇಂದು ನಿಮಗೆ ಸುಲಭ ಪರಿಹಾರವನ್ನು ತಿಳಿಸಿಕೊಡುತ್ತೇವೆ. ನಿಮ್ಮ ಕಾಂತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮುಖ್ಯವಾದದ್ದು ಬಾಳೆಹಣ್ಣು. ಬಾಳೆಹಣ್ಣನ್ನು ಎಲ್ಲರೂ ತಿನ್ನುತ್ತಾರೆ ತಿಂದಾದ ನಂತರ ಅದರ ಸಿಪ್ಪೆಯನ್ನು ಬೇಕೆಂದಲ್ಲಿ ಎಸೆಯುತ್ತಾರೆ ಅದರಿಂದ ಯಾರಾದರೂ ಜಾರಿ ಬಿಳುತ್ತಾರೆ. ಬಾಳೆಹಣ್ಣಿನಲ್ಲಿ ಜಿಂಕ್ ಅಂಶ ಹೆಚ್ಚಾಗಿರುತ್ತದೆ
ಅದು ಯೌವ್ವನವನ್ನು ಹೆಚ್ಚಿಸುವುದರಿಂದ ಅದಕ್ಕೆ ಜಶದ ಎಂದು ಕೂಡ ಕರೆಯುತ್ತಾರೆ ಬಾಳೆಹಣ್ಣಿನ ಸಿಪ್ಪೆ ಯಲ್ಲಿಯೂ ಕೂಡ ಆ ಅಂಶ ಇರುತ್ತದೆ. ಬಾಳೆಹಣ್ಣನ್ನು ತಿನ್ನುವುದರಿಂದ ಜಶದ ಜಿಂಕ್ ಅಂಶ ದೇಹಕ್ಕೆ ದೊರೆಯುತ್ತದೆ. ಚರ್ಮ ದೇಹದಲ್ಲಿನ ಕಟ್ಟಕಡೆಯ ಅಂಗ. ನಾವು ತಿಂದ ಆಹಾರ ಒಳಗಡೆಯಿಂದ ಎಲ್ಲಾ ಭಾಗಗಳಿಗೆ ಪೂರೈಕೆಯಾಗುತ್ತಾ ಬರುತ್ತದೆ ಕೊನೆಯಲ್ಲಿ ಚರ್ಮಕ್ಕೆ ಪೂರೈಕೆ ಆಗುತ್ತದೆ.
ನಿಮಗೆ ತಕ್ಷಣಕ್ಕೆ ಮುಖದಲ್ಲಿ ಕಾಂತಿ ಬೇಕು ಎಂದರೆ ಏನು ಮಾಡಬೇಕು ಎಂಬುದನ್ನು ತಿಳಿಸುತ್ತೇವೆ. ನೀವು ಬಾಳೆಹಣ್ಣನ್ನು ಸೇವಿಸಿದ ನಂತರ ಅದರ ಸಿಪ್ಪೆಯನ್ನು ಮುಖದ ಎಲ್ಲಾ ಭಾಗಗಳಿಗೂ ಮಸಾಜ್ ಮಾಡಿಕೊಳ್ಳುತ್ತಾ ಬನ್ನಿ ಮಸಾಜ್ ಮಾಡಿಕೊಂಡು ಒಂದು ಗಂಟೆಯವರೆಗೂ ಹಾಗೆ ಬಿಡಬೇಕು. ನಂತರ ಕಡಲೆ ಹಿಟ್ಟನ್ನು ಹಾಕಿ ಬಿಸಿ ನೀರಿನಿಂದ ತೊಳೆಯಿರಿ ಹೀಗೆ ಮಾಡುವುದರಿಂದ ಮೊದಲನೆಯ ದಿನವೇ ನಿಮಗೆ ಅದರ ವ್ಯತ್ಯಾಸ ಕಂಡುಬರುತ್ತದೆ. ಹೀಗೆ ಸತತವಾಗಿ ಒಂದು ವಾರ ಮಾಡಿ ನಂತರ ಬಿಡಿ ಮತ್ತೆ ನಿಮಗೆ ಬೇಕು ಎನಿಸಿದಾಗ ಮಾಡಿಕೊಳ್ಳಿ ಮತ್ತೆ ಬಿಡಿ.
ಹೀಗೆ ಮಾಡುವುದರಿಂದ ನಿಮ್ಮ ಚರ್ಮದ ಕಾಂತಿ ಹೊಳಪು ಹೆಚ್ಚಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಚರ್ಮದಲ್ಲಿ ಸುಕ್ಕು ನೆರಿಗೆ ಇರುವುದಿಲ್ಲ. ಹೀಗೆ ಮಾಡುವುದರಿಂದ ಯಾವುದೇ ರೀತಿಯ ಅಲರ್ಜಿ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ರಾಸಾಯನಿಕ ವಸ್ತುಗಳನ್ನು ಮುಖಕ್ಕೆ ಬಳಸುವುದಕ್ಕಿಂತ ಇಂತಹ ಪ್ರಾಕೃತಿಕ ಔಷಧಿಗಳನ್ನು ಮಾಡಿಕೊಳ್ಳುವುದು ತುಂಬಾ ಒಳ್ಳೆಯದು. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಸ್ನೇಹಿತರಿಗೂ ತಿಳಿಸಿರಿ.