ಕಣ್ಣು ಇದು ಅತ್ಯಂತ ಮುಖ್ಯವಾದ ಅಂಗ. ಏಕೆಂದರೆ ಇದು ಇಲ್ಲದಿದ್ದರೆ ಈ ಪ್ರಪಂಚವನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಪ್ರತಿಯೊಂದು ಅಂಗವೂ ಅದರದೇ ಆದ ಕೆಲಸವನ್ನು ನಿರ್ವಹಿಸುತ್ತವೆ. ಒಂದು ಅಂಗ ಇಲ್ಲದೇ ಇದ್ದರೂ ಜೀವನ ನಡೆಸುವುದು ಬಹಳ ಕಷ್ಟ. ಹಾಗಾಗಿ ಅವುಗಳಿಗೆ ಏನೇ ಆದರೂ ರಕ್ಷಣೆ ಮಾಡಿಕೊಳ್ಳಬೇಕು. ಆದ್ದರಿಂದ ನಾವು ಇಲ್ಲಿ ಕಣ್ಣಿನ ರೆಪ್ಪೆಗಳು ಊತಕ್ಕೆ ಒಳಗಾದರೆ ಅದರ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಣ್ಣಿನ ಸಮಸ್ಯೆ ಎಂದರೆ ಕಣ್ಣಿನ ಊತ ಮೊದಲು ನೆನಪಾಗುತ್ತದೆ. ಕೆಲವರಿಗೆ ಕಣ್ಣಿನಲ್ಲಿ ಅತಿಯಾದ ತುರಿಕೆ ಇರುತ್ತದೆ. ಹಾಗೆಯೇ ಕೆಲವರಿಗೆ ಕಣ್ಣಿನಲ್ಲಿ ಅತಿಯಾಗಿ ನೀರು ಸೋರುತ್ತಿರುತ್ತದೆ. ಕಣ್ಣು ಅತ್ಯಂತ ಸೂಕ್ಷ್ಮವಾದ ಅಂಗವಾಗಿದೆ. ಆದ್ದರಿಂದ ಇದನ್ನು ಆದಷ್ಟು ರಕ್ಷಣೆ ಮಾಡಿಕೊಳ್ಳುವುದು ಕರ್ತವ್ಯವಾಗಿದೆ. ಹೀಗೆ ಉಂಟಾಗಲು ಕಾರಣ ಕಣ್ಣಿನಲ್ಲಿ ಹೊಕ್ಕಿರುವ ಸೋಂಕುಗಳು. ಇವುಗಳಿಂದ ಕಣ್ಣಿನಲ್ಲಿ ಉದ್ದ ಮತ್ತು ಉರಿಗಳು ಉಂಟಾಗುತ್ತದೆ.
ಟೊಮೆಟೋ ಹಣ್ಣನ್ನು ತೆಗೆದುಕೊಂಡು ಅದನ್ನು ಗಾಲಿ ಗಾಲಿಯಾಗಿ ಕತ್ತರಿಸಿಕೊಳ್ಳಬೇಕು. ಅದನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಬೇಕು. ಇದರಿಂದ ಕಣ್ಣಿಗೆ ತಂಪಾಗುತ್ತದೆ. ದಿನಕ್ಕೆ ಮೂರು ಬಾರಿ ಹೀಗೆ ಮಾಡಬೇಕು. ಕಣ್ಣಿನ ಉರಿ ಮತ್ತು ನೋವು ಯಾವುದೇ ತೊಂದರೆಗಳು ಇದ್ದರು ಮಾಯವಾಗುತ್ತದೆ. ಹಾಗೆಯೇ ಕಣ್ಣಿನ ಕೆಳಗೆ ಕೆಲವರಿಗೆ ಕಪ್ಪು ವರ್ತುಲಗಳು ಉಂಟಾಗಿರುತ್ತವೆ. ಟೊಮೆಟೋ ಹಣ್ಣನ್ನು ಕೊರೆದು ಅದನ್ನು ಖಾಲಿ ಮಾಡಿ ಅದನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣಿನ ಕೆಳಗಿನ ಕಲೆಗಳು ಸಹ ಮಾಯವಾಗುತ್ತದೆ.
ಹಾಗೆಯೇ ಟೊಮೆಟೋ ಹಣ್ಣನ್ನು ಬಳಸುವ ಬದಲು ಸವತೆಕಾಯಿಯನ್ನು ಬೇಕಾದರೂ ಬಳಸಬಹುದು. ಇದು ಸಹ ಕಣ್ಣಿಗೆ ಬಹಳ ತಂಪನ್ನು ನೀಡುತ್ತದೆ. ಕಣ್ಣಿಗೆ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಮಾಯವಾಗುತ್ತದೆ. ದಿನನಿತ್ಯ ಹೀಗೆ ಮೂರು ಬಾರಿ ಮಾಡಬೇಕು. ಹಾಗೆಯೇ ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಕಾಟನ್ ಬಟ್ಟೆಯನ್ನು ಅದರಲ್ಲಿ ಅದ್ದಿ ಕಣ್ಣಿಗೆ ಹಚ್ಚುವುದರಿಂದ ಸಹ ಕಣ್ಣಿನ ಊತಗಳು ಮಾಯವಾಗುತ್ತವೆ. ಇದಕ್ಕೆ ಇನ್ನೂ ಹಲವಾರು ಮನೆಮದ್ದುಗಳಿವೆ.