ಜಗತ್ತಿನಲ್ಲಿ ಹೆಚ್ಚಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸ್ಥಾನಮಾನ ದೊರಕಿದೆ. ಅಂದರೆ ರಾಜಕಾರಣ, ವಿಜ್ಞಾನ, ಶೈಕ್ಷಣಿಕ ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮದೇ ಆದ ಸ್ಥಾನಮಾನವನ್ನು ಮುಡಿಸಿಕೊಂಡಿದ್ದಾರೆ. ಹಾಗೆಯೇ ರಾಜಕಾರಣದಲ್ಲಿ ಹಲವಾರು ಮಹಿಳೆಯರು ಹಲವಾರು ಸ್ಥಾನಗಳನ್ನು ಅಲಂಕರಿಸಿದ್ದಾರೆ. ಆದರೆ ನಾವು ಇಲ್ಲಿ ಮಹಿಳಾ ಶ್ರೀಮಂತ ರಾಜಕಾರಣಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ರಾಜಕಾರಣದಲ್ಲಿ ಮಹಿಳೆಯರು ಸ್ಥಾನಗಳನ್ನು ಅಲಂಕರಿಸಿ ಮಹಿಳೆಯರು ಯಾವುದಕ್ಕೂ ಕಡಿಮೆ ಇಲ್ಲ ಎಂದು ಹೇಳುತ್ತಿದ್ದಾರೆ. ಚುನಾವಣೆಗಳಲ್ಲಿ ಗೆದ್ದು ಅನೇಕ ಹುದ್ದೆಗಳನ್ನು ಸ್ವೀಕರಿಸಿದ್ದಾರೆ. ಮಹಿಳಾ ರಾಜಕಾರಣಿಗಳು ಬಹಳ ಜನ ಇದ್ದಾರೆ. ಹಾಗೆಯೇ ಎಲ್ಲಾ ಪಕ್ಷಗಲ್ಲಿಯೂ ಇದ್ದಾರೆ. ಸಕ್ರಿಯವಾಗಿ ತಮ್ಮ ಕೆಲಸ ಕಾರ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ಸೌಮ್ಯ ರೆಡ್ಡಿ ಇವರು ಶಾಸಕರಾಗಿದ್ದಾರೆ. ಹಾಗೆಯೇ ಬಿ.ಜೆ.ಪಿ.ಯಲ್ಲಿ ಕೆ.ಪೂರ್ಣಿಮಾ, ರೂಪಾಲಿ ನಾಯಕ್, ಶಶಿಕಲಾ ಜೊಲ್ಲೆ, ಶೋಭಾ ಕರಂದ್ಲಾಜೆ ಇವರು ಶಾಸಕರಾಗಿದ್ದಾರೆ.
ಹಾಗೆಯೇ ಸುಮಲತಾ ಅಂಬರೀಶ್ ಮತ್ತು ಕಾಂಗ್ರೆಸ್ ನ ಮಾಜಿ ಸಚಿವೆ ಉಮಾಶ್ರೀ ಇವರೆಲ್ಲರೂ ಕೋಟ್ಯಾಧಿಪತಿ ಆಗಿದ್ದಾರೆ. ಹಾಗೆಯೇ ತಮ್ಮ ಅಧಿಕಾರವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಸೌಮ್ಯಾ ರೆಡ್ಡಿ ಜಯನಗರದ ಕಾಂಗ್ರೆಸ್ ಶಾಸಕಿಯಾದ ಇವರು 10ನೇ ಸ್ಥಾನದಲ್ಲಿದ್ದಾರೆ. 56ಲಕ್ಷ 89ಸಾವಿರ ಆಸ್ತಿಯನ್ನು ಇವರು ಹೊಂದಿದ್ದಾರೆ. ಹಾಗೆಯೇ ರೂಪಾಲಿ ನಾಯ್ಕ ಅವರು ಕಾರವಾರದ ಶಾಸಕಿಯಾಗಿದ್ದು 4ಕೋಟಿ 35ಲಕ್ಷ ಆಸ್ತಿಯನ್ನು ಹೊಂದಿದ್ದಾರೆ. ಕಾಂಗ್ರೆಸ್ ನ ಮಾಜಿ ಸಚಿವೆ ಉಮಾಶ್ರೀ 5ಕೋಟಿ 32ಲಕ್ಷ ಆಸ್ತಿ ಹೊಂದಿದ್ದಾರೆ. ಕಾಂಗ್ರೆಸ್ ನ ಶಾಸಕಿ ರೂಪಕಲಾ 8ಕೋಟಿ 8ಲಕ್ಷ ಆಸ್ತಿಯನ್ನು ಹೊಂದಿದ್ದಾರೆ.
ಶೋಭಾ ಕರಂದ್ಲಾಜೆ ಇವರು 10ಕೋಟಿ 48ಲಕ್ಷವನ್ನು ಹೊಂದಿದ್ದಾರೆ. ನಂತರದಲ್ಲಿ ಅಂಜಲಿ ನಿಂಬಾಳ್ಕರ್ ಅವರು 14ಕೋಟಿ 29ಲಕ್ಷ ಆಸ್ತಿಯನ್ನು ಹೊಂದಿದ್ದಾರೆ. ಸುಮಲತಾ ಅವರು 23ಕೋಟಿ 41ಲಕ್ಷ ಆಸ್ತಿಯನ್ನು ಹೊಂದಿದ್ದಾರೆ. ನಂತರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು 27ಕೋಟಿ 44ಲಕ್ಷ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಶಶಿಕಲಾ ಜೊಲ್ಲೆ ಅವರು 34ಕೋಟಿ 48ಲಕ್ಷ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ಕೊನೆಯದಾಗಿ ಮೊದಲ ಸ್ಥಾನದಲ್ಲಿ ಕೆ.ಪೂರ್ಣಿಮಾ ಅವರು ಇದ್ದು ಇವರು 95ಕೋಟಿ 75ಲಕ್ಷ ಆಸ್ತಿಯನ್ನು ಹೊಂದಿದ್ದಾರೆ. ಹೀಗೆ ಸಾಲಾಗಿ 10 ರಿಂದ 1ರವರೆಗೆ ಶ್ರೀಮಂತ ಮಹಿಳಾ ರಾಜಕಾರಣಿಗಳ ಸಾಲಿನಲ್ಲಿ ಇವರೆಲ್ಲರೂ ಇದ್ದಾರೆ.