ಸಾವಯವ ಕೃಷಿಗೆ ಎರೆಹುಳು ಗೊಬ್ಬರ ಅವಶ್ಯಕ. ಎರೆಹುಳು ಗೊಬ್ಬರದ ಉಪಯೋಗ, ಬಳಸುವ ವಿಧಾನ ಇತ್ಯಾದಿ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಾವಯವ ಗಿಡಗಳಿಗೆ ಮುಖ್ಯ ಪೋಷಕಾಂಶ ಅಲ್ಲದೆ ಲಘು ಮತ್ತು ಸೂಕ್ಷ್ಮ ಪೋಷಕಾಂಶದ ಅವಶ್ಯಕತೆ ಇದೆ. ಮುಖ್ಯ ಪೋಷಕಾಂಶವೆಂದರೆ ಸಾರಜನಕ, ರಂಜಕ, ಪೊಟ್ಯಾಷಿಯಂ. ಲಘು ಮತ್ತು ಸೂಕ್ಷ್ಮ ಪೋಷಕಾಂಶಗಳು ಎರೆಹುಳು ಗೊಬ್ಬರದಿಂದ ದೊರೆಯುತ್ತದೆ.
ಕೃಷಿ ತ್ಯಾಜ್ಯವನ್ನು ತಿಂದು ಹಿಕ್ಕೆಗಳನ್ನು ಹಾಕುತ್ತವೆ ಇದೆ ಎರೆಹುಳು ಗೊಬ್ಬರ. ಈ ಗೊಬ್ಬರ ತಯಾರಿಸಲು ತೊಟ್ಟಿಯಲ್ಲಿ 28 ಡಿಗ್ರಿ ಯಿಂದ 38 ಡಿಗ್ರಿ ಸೆಂಟಿಗ್ರೇಡ್ ನಷ್ಟು ಉಷ್ಣಾಂಶ ಇರಬೇಕು. ತೊಟ್ಟಿಗಳು 3 ಫೀಟ್ ಅಗಲ, 2 ಫೀಟ್ ಎತ್ತರ. 15ಫೀಟ್ ಉದ್ದ ಇರಬೇಕು. ತೊಟ್ಟಿಗಳ ಹೊರಭಾಗದಲ್ಲಿ ಇರುವೆಗಳಿಂದ ರಕ್ಷಿಸಲು 6ಇಂಚು ಎತ್ತರದ ನೀರಿನ ಕಾಲುವೆ ಮಾಡಬೇಕಾಗುತ್ತದೆ. ಈ ತೊಟ್ಟಿಗಳಿಗೆ ಮನೆಯ ಮಾಡಿನಂತೆ ಮಾಡಬೇಕು. ಬಿಸಿಲು, ಮಳೆಗೆ ರಕ್ಷಿಸಲು ಮಾಡಿನ ಅವಶ್ಯಕತೆ ಇದೆ. ತೊಟ್ಟಿಗಳಿಗೆ ಟಾರ್ಪಾಲಿನ್ ಮುಚ್ಚಬಾರದು. ತೊಟ್ಟಿಗಳ ಒಳಗೆ ಕೃಷಿ ತ್ಯಾಜ್ಯವನ್ನು ಮತ್ತು ಸಗಣಿಯನ್ನು ಹಾಕಬೇಕು. 60ದಿನಗಳ ನಂತರ ನೀರಿನ ತೇವಾಂಶವನ್ನು ಮಾಡಿದ ನಂತರ ಒಂದು ತೊಟ್ಟಿಗೆ 2ಕೆ.ಜಿ ಎರೆಹುಳುಗಳನ್ನು ಬಿಡಬೇಕಾಗುತ್ತದೆ. ಮೇಲಿನಿಂದ ಅಡಿಕೆ ಸೋಗೆಯಿಂದ ಮುಚ್ಚಬೇಕಾಗುತ್ತದೆ ನಂತರ ವಾರಕ್ಕೆ 2ಸಲ ನೀರಿನ ತೇವಾಂಶವನ್ನು ಕೊಡಬೇಕು. ನಂತರ 50-60 ದಿನದ ನಂತರ ಅದರ ಗೊಬ್ಬರವನ್ನು ಮೇಲ್ಪಪದರದಿಂದ ತೆಗೆಯುತ್ತಾ ಬರಬೇಕು.
ಎಲ್ಲ ತ್ಯಾಜ್ಯವನ್ನು ತಿಂದ ನಂತರ ಒಂದುಕಡೆ ಎರೆಹುಳು ಸ್ಟಾಕ್ ಆಗುವುದು ಆಗ ಬೇರೆ ತೊಟ್ಟಿಗೆ ತುಂಬಿಸಬೇಕು. ಈ ಗೊಬ್ಬರವನ್ನು ಹಿತಮಿತವಾಗಿ ಬಳಸಬೇಕು ಜಾಸ್ತಿ ಆಗಬಾರದು. 6-8 ತಿಂಗಳು ಇದನ್ನು ದಾಸ್ತಾನು ಇಡಬಹುದು ಅದಕ್ಕಿಂತ ಜಾಸ್ತಿ ಸಮಯ ದಾಸ್ತಾನು ಇಡಬಾರದು. ಮಳೆ ಮತ್ತು ಬೇಸಿಗೆ ಹೆಚ್ಚಿರುವ ಪ್ರದೇಶದಲ್ಲಿ ಇದನ್ನು ಇಡಬಾರದು. ತೊಟ್ಟಿಗಳಿಗೆ ಹಸಿ ಗೊಬ್ಬರ ಹಾಕಬಾರದು. ಜೂನ್ ನಿಂದ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಎರೆಹುಳುಗಳ ಅಭಿವೃದ್ಧಿ ಆಗುತ್ತದೆ ಈ ಸಮಯದಲ್ಲಿ ತೊಟ್ಟಿಯಲ್ಲಿ 50% ಎರೆಹುಳು ಮತ್ತು 50% ಕೃಷಿ ತ್ಯಾಜ್ಯವನ್ನು ತುಂಬಿಸಬೇಕು ಇದರಿಂದ ಎರೆಹುಳುಗಳ ಅಭಿವೃದ್ಧಿ ಆಗುತ್ತದೆ. ಏಪ್ರೀಲ್ ಮೇ ತಿಂಗಳಲ್ಲಿ ಇದರ ಅಭಿವೃದ್ಧಿ ಕಡಿಮೆಯಾಗುತ್ತದೆ.
ಎರೆಹುಳು ಗೊಬ್ಬರವನ್ನು ಒಂದು ತೆಂಗಿನ ಮರಕ್ಕೆ ಒಂದು ಬಾರಿಗೆ 1ಕೆ.ಜಿ ಬಳಸಬಹುದು, ಒಂದು ಅಡಿಕೆ ಮರಕ್ಕೆ 200-300 ಗ್ರಾಂ ಬಳಸಬಹುದು, ಒಂದು ಬಾಳೆ ಗಿಡಕ್ಕೆ 200-300ಗ್ರಾಂ ಬಳಸಬಹುದು, ತರಕಾರಿ ಗಿಡಗಳಿದ್ದರೆ ಒಂದು ಗಿಡಕ್ಕೆ 50-60ಗ್ರಾಂ ಬಳಸಬಹುದು. ತೆಂಗಿನ ಮರದಿಂದ 4 ಫೀಟ್ ದೂರದಲ್ಲಿ, ಅಡಿಕೆ ಮರದಿಂದ 2ಫೀಟ್ ದೂರದಲ್ಲಿ, ಉಳಿದ ಗಿಡಗಳಿಂದ 1-1ವರೆ ಫೀಟ್ ದೂರದಲ್ಲಿ ಎರೆಹುಳು ಗೊಬ್ಬರವನ್ನು ಹಾಕಬೇಕು. ಬೇಸಿಗೆ ಕಾಲದಲ್ಲಿ ಹಾಕುವುದಿದ್ದರೆ ಈ ಗೊಬ್ಬರವನ್ನು ಹಾಕುವ ಮೊದಲು ನೀರನ್ನು ಹಾಕಬೇಕು. ಎರೆಹುಳು ಗೊಬ್ಬರವನ್ನು ಬಳಸುವುದರಿಂದ ಗಿಡಗಳ ಇಳುವರಿಯನ್ನು ಹೆಚ್ಚು ಮಾಡುತ್ತದೆ. ಮತ್ತು ಆಯಸ್ಸನ್ನು ಹೆಚ್ಚಿಸುತ್ತದೆ. ಗಿಡಗಳು ಆರೋಗ್ಯದಾಯಕವಾಗುತ್ತದೆ. ಎರೆ ಜಲವನ್ನಾಗಿ ಪರಿವರ್ತಿಸಿ ಗಿಡಗಳನ್ನು ಬೆಳೆಸಬಹುದು. ಎರೆಹುಳು ಗೊಬ್ಬರವನ್ನು ತೋಟಕ್ಕೆ ಬಳಸಿದಾಗ ಮಣ್ಣಿನಲ್ಲಿರುವ ಎರೆಹುಳು ಜಾಸ್ತಿ ಆಗುತ್ತದೆ. ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಮನೆಯಲ್ಲಿಯೇ. ಎರೆಹುಳುಗಳನ್ನು ಸಾಕಿ ಗೊಬ್ಬರವನ್ನು ತಯಾರಿಸಬಹುದು. ಎರೆಹುಳು ಸಾಕಿರುವವರ ಬಳಿ 1ಕೆ.ಜಿ ಎರೆಹುಳುಗಳನ್ನು ತೆಗೆದುಕೊಂಡು ಪ್ರಾರಂಭಿಸಿ ನಂತರ 5 ಕೆ.ಜಿ ಎರೆಹುಳುಗಳನ್ನು ಸಾಕಬಹುದು. ಈ ಮಾಹಿತಿಯನ್ನು ತಪ್ಪದೆ ರೈತರಿಗೆ ತಿಳಿಸಿ ಧನ್ಯವಾದಗಳು