ಎಳ್ಳು ಅನ್ನೋದು ಎರಡು ಬಗೆಯಲ್ಲಿ ಕಂಡು ಬರುತ್ತದೆ ಅದರಲ್ಲಿ ಕಪ್ಪು ಎಳ್ಳು ಹಾಗು ಇನ್ನೊಂದು ಬಿಳಿ ಎಳ್ಳು ಎಂಬುದಾಗಿ, ಈರದು ಕೂಡ ಆರೋಗ್ಯಕ್ಕೆ ಹಾಗು ಆಹಾರ ಖ್ಯಾದ್ಯಗಳಿಗೆ ಸಹಕಾರಿಯಾಗಿದೆ, ಇಲ್ಲಿ ಕಪ್ಪು ಎಳ್ಳು ಬಳಸಿ ಯಾವೆಲ್ಲ ಪ್ರಯೋಜನವನ್ನು ಪಡೆದುಕೊಳ್ಳಬಹುದು ಅನ್ನೋದನ್ನ ತಿಳಿಯೋಣ. ಕಪ್ಪು ಎಳ್ಳು ಅನ್ನೋದು ಸಾಮಾನ್ಯವಾಗಿ ಗ್ರಾಮೀಣ ಜನರಿಗೆ ಹೆಚ್ಚು ಚಿರಪರಿಚಿತವಾಗಿದೆ. ಈ ಎಳ್ಳು ಸಾಮಾನ್ಯ ಕಾಯಿಲೆಗಳಿಂದ ದೊಡ್ಡ ದೊಡ್ಡ ರೋಗಗಳನ್ನು ನಿವಾರಿಸುವಂತ ಔಷದಿ ಗುಣಗಳನ್ನು ಹೊಂದಿದೆ. ಎಳ್ಳು ಬಳಸಿ ಯಾವೆಲ್ಲ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು ಅನ್ನೋದನ್ನ ನೋಡುವುದಾದರೆ ಮೊದಲನೆಯದಾಗಿ ಮೂಲವ್ಯಾದಿ ಸಮಸ್ಯೆ ಇರೋರಿಗೆ ಇದು ಉಪಯೋಗಕಾರಿ ಹೇಗೆ ಅನ್ನೋದಾದರೆ ಒಂದು ಹಿಡಿ ಕಪ್ಪು ಎಳ್ಳು ತಗೆದುಕೊಂಡು ನೀರಿನಲ್ಲೂ ಕುದಿಸಿ ಸೋಸಿಟ್ಟುಕೊಳ್ಳಬೇಕು.
ನಂತರ ಈ ಸೋಸಿದ ನೀರನ್ನು ದಿನಕ್ಕೆ ೨ ರಿಂದ ೩ ಬಾರಿ ಸೇವಿಸಿದರೆ ಮೂಲವ್ಯಾದಿ ನಿವಾರಣೆಯಾಗುತ್ತದೆ. ಇನ್ನು ಕಫದಿಂದ ಕೆಮ್ಮು ಹೆಚ್ಚಾಗಿದ್ದರೆ ಇದನ್ನು ನಿವಾರಿಸಿಕೊಳ್ಲಲು ಸ್ಸ್ವಲ್ಪ ಬೆಳ್ಳುಳ್ಳಿಯನ್ನು ಜಜ್ಜಿ ಎಳ್ಳೆಣ್ಣೆಯಲ್ಲಿ ಕುದಿಸಿ ಆ ಎಣ್ಣೆಯನ್ನು ಎದೆಗೆ ಹಚ್ಚಿ ಮಸಾಜ್ ರೀತಿಮಾಡಬೇಕು ಹೀಗೆ ಮಾಡಿದರೆ ಎದೆಯಲ್ಲಿ ಕಟ್ಟಿರುವಂತ ಕಫ ಕರಗಿ ಕೆಮ್ಮು ಕೂಡ ನಿವಾರಣೆಯಾಗುವುದು.
ನಿದ್ರಾಹೀನತೆ ಸಮಸ್ಯೆ ಇದ್ದು ರಾತ್ರಿ ಸರಿಯಾಗಿ ನಿದ್ರೆ ಬರಲ್ಲ ಅನ್ನೋದಾದರೆ ಸೋರೆಕಾಯಿ ರಸಕ್ಕೆ ಸಮಪ್ರಮಾಣದ ಎಳ್ಳಣ್ಣೆ ಸೇರಿಸಿ ತಲೆಗೆ ಮಸಾಜ್ ಮಾಡಿದರೆ ನಿದ್ದೆ ಚೆನ್ನಾಗಿ ಬರುತ್ತದೆ. ಅಷ್ಟೇ ಅಲಲ್ದೆ ಅನಿಮಿಯಾ ಸಮಸ್ಯೆ ಇದ್ರೆ ಎಳ್ಳನ್ನು ನೀರಲ್ಲಿ ನೆನೆಸಿ ಪೇಸ್ಟ್ ಮಾಡಿ ಅದಕ್ಕೆ ಬೆಲ್ಲ ಬೆರೆಸಿ ಹಾಲಿನ ಜತೆ ಸೇವಿಸಿದರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಇನ್ನು ಪ್ರಾಯದಲ್ಲಿ ಹೆಚ್ಚಾಗಿ ಹುಡುಗರಲ್ಲಿ ಅಥವಾ ಹುಡುಗಿಯರಲ್ಲಿ ಮುಖದ ಮೇಲೆ ಕಾಣಿಸಿಕೊಳ್ಳುವಂತ ಮೊಡವೆಯನ್ನು ನಿವಾರಿಸಲು ಎಳ್ಳು ಸಹಕಾರಿ ಹೇಗೆ ಅನ್ನೋದಾದರೆ ಎಳ್ಳೆಣ್ಣೆಗೆ ಅರಿಶಿನ ಕಲಸಿ ಮುಖಕ್ಕೆ ಮಸಾಜ್ ಮಾಡಿದರೆ ಮೊಡವೆ ಹಾಗು ಕಲೆಗಳು ನಿವಾರಣೆಯಾಗುತ್ತದೆ. ಇನ್ನು ಬಹುತೇಕ ಹೆಣ್ಣುಮಕ್ಕಳಲ್ಲಿ ತಿಂಗಳ ಮುತ್ತಿನ ಸಂಸ್ಯಾದಲ್ಲಿ ಹೆಚ್ಚು ಹೊಟ್ಟೆನೋವು ಆಗುತ್ತದೆ ಅದಕ್ಕೆ ಮುಟ್ಟು ಆಗುವ ಮುಂಚೆ ಸ್ವಲ್ಪ ಎಳ್ಳನ್ನು ಸೇವಿಸಿದರೆ ಮುಟ್ಟಿನ ಸಮಯದಲ್ಲಿನೋವು ಹೆಚ್ಚಾಗಿ ಕಾಡೋದಿಲ್ಲ.
ರಾತ್ರಿ ನೆನೆಸಿದ ಎಳ್ಳನ್ನು ಬೆಳಗ್ಗೆ ಕಾಳಿ ಹೊಟ್ಟೆಗೆ ಸೇವನೆ ಮಾಡುತ್ತ ಬಂದ್ರೆ ದೇಹದ ಮೂಳೆಗಳು ಬಲವಾಗಿ ಬೆಳೆಯುತ್ತವೆ ಹಾಗೂ ಜಾಯಿಂಟ್ ಪೈನ್ ಸಮಸ್ಯೆ ಇರೋದಿಲ್ಲ, ಅಷ್ಟೇ ಅಲ್ಲದೆ ಮುಖದ ಚರ್ಮ ಒರಟಾಗಿದ್ದರೆ ಪ್ರತಿ ದಿನ ಎಳ್ಳೆಣ್ಣೆ ಹಚ್ಚಿ ಮಾಡಿದರೆ ಚರ್ಮ ಮೃದುವಾಗುತ್ತದೆ. ಲವಂಗವನ್ನು ಎಳ್ಳೆಣ್ಣೆಯಲ್ಲಿ ಹುರಿದು ನಂತರ ಲವಂಗವನ್ನು ಜಜ್ಜಿ ಪೇಸ್ಟ್ ಮಾಡಿ ಹಲ್ಲು ಮತ್ತು ವಸಡುಗಳಿಗೆ ಪ್ರತಿ ದಿನ ಹಚ್ಚಿ ಮಸಾಜ್ ಮಾಡಿದರೆ ಹಲ್ಲು ಮತ್ತು ವಸಡಿನ ಆರೋಗ್ಯ ಹೆಚ್ಚುತ್ತದೆ.