ಮೋಟಾರ್‌ ಸೈಕಲ್‌ ಪ್ರಿಯರಿಗೆ ಅದರ ಮೇಲಿನ ಸವಾರಿ ಸ್ವಾತಂತ್ರ್ಯದ ಸಂಕೇತ. ಇದು ಕಾರಿನೊಳಗಿನ ಬಂಧನಕ್ಕಿಂತ ವಿಶೇಷ. ಹೀಗಾಗಿ ಬೈಕ್‌ ಮೂಲಕವೇ ಹಲವು ಊರುಗಳನ್ನು ದಾಟುವ ಗೆಳೆಯರನ್ನು ನಾವು ಕಂಡಿದ್ದೇವೆ. ಇಂಥವರಿಗೆ ಬೈಕ್‌ ತಯಾರಿಕೆ ಕ್ಷೇತ್ರದಲ್ಲಿ ಆಗುವ ತಂತ್ರಜ್ಞಾನದ ಬದಲಾವಣೆಗಳು ಆಕರ್ಷಣೆಯ ಸಂಗತಿ. ಬೈಕ್ ಈಗಿನ ಕಾಲದಲ್ಲಿ ಎಲ್ಲರ ಬಳಿಯೂ ಇದ್ದೆ ಇರುತ್ತೆ ಬೈಕ್ ಇಲ್ಲದ ವ್ಯಕ್ತಿಯನ್ನು ಹುಡುಕುವುದು ಸ್ವಲ್ಪ ಕಷ್ಟ ಎನ್ನಬಹುದು. ಇಲ್ಲೊಬ್ಬ ಮೆಕಾನಿಕ್ ಕೆಲಸ ಮಾಡುವ ಯುವಕ ಅತೀ ಕಡಿಮೆ ಬೆಲೆಗೆ ಅಂದರೆ ಹತ್ತು ಸಾವಿರ ರೂಪಾಯಿ ಖರ್ಚು ಮಾಡಿ ಎಲೆಕ್ಟ್ರಿಕ್ ಬೈಕ್ ತಯಾರಿಸಿದ್ದಾನೆ. ಇದರ ಕುರಿತಾಗಿ ನಾವು ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಬಹುತೇಕ ದ್ವಿ ಚಕ್ರ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳ ತಯಾರಿಕೆಯತ್ತ ಒಲವು ತೋರಿಸುತ್ತಿವೆ. ಸಾಕಷ್ಟು ಪ್ರಮಾಣದ ಎಲೆಕ್ಟ್ರಿಕ್ ವಾಹನಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿವೆ. ಎಲೆಕ್ಟ್ರಿಕ್ ವಾಹನಗಳು ಟ್ರೆಂಡ್ ಆಗುತ್ತಿರುವ ಹಿನ್ನೆಲೆಯಲ್ಲಿ ಸಾಂಪ್ರಾದಾಯಿಕ ಮಾದರಿಯ ಬೈಕ್ ಹಾಗೂ ಸ್ಕೂಟರ್ಗಳು ಮೂಲೆಗುಂಪಾಗುವ ಸಾಧ್ಯತೆಗಳಿವೆ. ಸರ್ಕಾರದ ನಿಯಮಗಳು ಜಾರಿಯಾದರೆ, ಮಾರುಕಟ್ಟೆಯಲ್ಲಿರುವ 150 ಸಿಸಿಯ ಒಳಗಿರುವ ದ್ವಿ ಚಕ್ರ ವಾಹನಗಳು ಸ್ಥಗಿತಗೊಳ್ಳಲಿವೆ. ಹೊಸ ನಿಯಮಗಳು ಜಾರಿಗೆ ಬಂದರೆ ಮಾರುಕಟ್ಟೆಯಲ್ಲಿ ಇರುವ ಪೆಟ್ರೋಲ್ ಎಂಜಿನ್ ವಾಹನಗಳ ಕಥೆ ಏನು? ಎಂಬುದು ಪ್ರಶ್ನೆಯಾಗಿದೆ.

ಇದಕ್ಕೆ ಹರಿಯಾಣದ ಹಿಸಾರನಲ್ಲಿರುವ ಮೆಕಾನಿಕ್ ಒಬ್ಬರು ಪರಿಹಾರ ಕಂಡು ಹಿಡಿದಿದ್ದಾರೆ. ಅವರು ಸಾಂಪ್ರಾದಾಯಿಕ ಎಂಜಿನ್ ಹೊಂದಿರುವ ಬೈಕ್‍ ಎಂಜಿನ್‍‍ನಿಂದ ರೋಸಿ ಹೋಗಿ ಆ ಎಂಜಿನ್ ಬದಲಿಗೆ ಬ್ಯಾಟರಿಯನ್ನು ಅಳವಡಿಸಿದ್ದಾರೆ. ಈ ರೀತಿ ಬೈಕ್ ಅನ್ನು ಮಾಡಿಫೈ ಮಾಡಲು ಅವರು ಸ್ಪೀಡ್ ಕಂಟ್ರೋಲರ್ ಹೊಂದಿರುವ ಬಿ‍ಎಲ್‍‍ಡಿ‍‍ಸಿ ಮೋಟಾರ್ ಬಳಸಿದ್ದಾರೆ. ಅವರು ಡೀಪ್ ಡಿಸ್ಚಾರ್ಜ್ ಬ್ಯಾಟರಿಯನ್ನು ಬಳಸಿರುವ ಕಾರಣ, ಈ ಬ್ಯಾಟರಿ ಬ್ಲಾಸ್ಟ್ ಆಗುವ ಅಥವಾ ಬೆಂಕಿ ಉಂಟಾಗುವ ಸಾಧ್ಯತೆಗಳಿಲ್ಲವೆಂದು ಹೇಳಲಾಗಿದೆ. ಈ ಬೈಕಿನಲ್ಲಿರುವ ಸ್ಪೇಸಿಫಿಕೇಷನ್‍‍ಗಳ ಬಗ್ಗೆ ತಿಳಿದು ಬಂದಿಲ್ಲವಾದರೂ ಪೂರ್ತಿಯಾದ ವ್ಯವಸ್ಥೆಯು ಸರಳವಾಗಿದೆ. ಇದಕ್ಕಾಗಿಯೇ ಮೀಸಲಾದ ಯಾವುದೇ ಎಲೆಕ್ಟ್ರಾನಿಕ್ ಮಾಡ್ಯೂಲ್‍‍ಗಳು ಕಾಣುವುದಿಲ್ಲವಾದ್ದರಿಂದ, ಇದನ್ನು ಬ್ಯಾಟರಿಯಿಂದ ನೇರವಾಗಿ ವಿದ್ಯುತ್ ಪಡೆಯುವ ಡಿಸಿ ಮೋಟಾರ್ ಎಂದು ಹೇಳಬಹುದು. ಗೇರ್ ಬಾಕ್ಸ್ ಸಹಾಯವಿಲ್ಲದೆ ಮೋಟಾರ್, ಸ್ಪ್ರಾಕೆಟ್ ಅನ್ನು ನೇರವಾಗಿ ಚಲಾಯಿಸಲಿದೆ. ಬ್ಯಾಟರಿಯನ್ನು ಚಾರ್ಜ್ ಮಾಡಲು ಯಾವುದೇ ಸಾಕೆಟ್‍‍ಗಳನ್ನು ಅಳವಡಿಸಲಾಗಿಲ್ಲ.

ವಾಹನಗಳಲ್ಲಿರುವ ಬ್ಯಾಟರಿಯನ್ನು ರಿಚಾರ್ಜ್ ಮಾಡುವ ರೀತಿಯಲ್ಲಿಯೇ, ಡಿಸ್ಟಿಲ್ ವಾಟರ್ ಹಾಕಿ, ನೆಗೆಟಿವ್ ಹಾಗೂ ಪಾಸಿಟಿವ್ ಟರ್ಮಿನಲ್‍‍ಗಳನ್ನು ಕ್ಲಿಪ್‍‍ಗಳಿಂದ ಪವರ್ ಸೋರ್ಸಿಗೆ ಕನೆಕ್ಟ್ ಮಾಡಿ ಈ ಬ್ಯಾಟರಿಯನ್ನು ಚಾರ್ಜ್ ಮಾಡುವ ಸಾಧ್ಯತೆಗಳಿವೆ. ಆದರೆ ಈ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಅನ್ನು ಬಳಸುವುದು ಪ್ರಯಾಸದ ಸಂಗತಿಯಾಗಿರಲಿದೆ. ಬಳಸಲಾಗಿರುವ ಟ್ರಕ್ ಬ್ಯಾಟರಿ, ಎಲೆಕ್ಟ್ರಿಕ್ ವಾಹನಕ್ಕೆ ಬೇಕಾಗಿರುವಷ್ಟು ವಿದ್ಯುತ್ ಅನ್ನು ಸತತವಾಗಿ ನೀಡುವಷ್ಟು ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಈ ಮಾಡಿಫೈಗೊಂಡಿರುವ ಬೈಕ್ ಗ್ಯಾರೇಜ್‍‍ನಲ್ಲಿ ನಿರ್ಮಾಣ ತಯಾರಾದಂತಹ ಬೈಕುಗಳಂತೆ ಆಸಕ್ತಿದಾಯಕವಾಗಿದ್ದರೂ, ಅದು ಎಷ್ಟರ ಮಟ್ಟಿಗೆ ಕಾರ್ಯನಿರ್ವಹಿಸಲಿದೆ? ಎಂಬುದರ ಬಗ್ಗೆ ಅನುಮಾನಗಳಿವೆ. ಮೆಕ್ಯಾನಿಕ್ ಈ ಬೈಕಿನಲ್ಲಿದ್ದ ಎಂಜಿನ್ ಅನ್ನು ತೆಗೆದುಹಾಕಿದ್ದಾನೆ. ಬ್ಯಾಟರಿಗೆ ಬೇಕಾಗಿರುವಂತಹ ಟ್ಯೂಬುಲರ್ ಫ್ರೇಂ ಅಳವಡಿಸಿದ್ದಾನೆ. ಈ ಮಾಡಿಫಿಕೇಷನ್ ಚಾಸಿಸ್‍‍ಗೆ ಎಷ್ಟರ ಮಟ್ಟಿಗೆ ಹೊಂದಾಣಿಕೆಯಾಗಲಿದೆ ಎಂಬುದು ತಿಳಿದುಬಂದಿಲ್ಲ. ಈ ಮಾಡಿಫಿಕೇಷನ್‍‍ನಲ್ಲಿ ಅಳವಡಿಸಿರುವ ಇ-ಕಿಟ್‍‍ಗೆ ರೂ.7,000 ಹಾಗೂ ಬ್ಯಾಟರಿಗೆ ರೂ.3,000 ಖರ್ಚು ಮಾಡಲಾಗಿದೆ.

ಬೈಕ್ ಚಲಿಸುವಾಗ ಎಲೆಕ್ಟ್ರಿಕ್ ಮೋಟರ್ ಅದರ ವೇಗವನ್ನು ಬದಲಿಸುತ್ತದೆ. ಬ್ಯಾಟರಿಯು ವಿನ್ಯಾಸಗೊಳಿಸಿದ ಮಿತಿಗಳನ್ನು ಮೀರಬಹುದು. ಇದರಿಂದ ಬೆಂಕಿ ಆಕಸ್ಮಿಕಗಳಾಗಬಹುದು. ಅಥವಾ ಸ್ಫೋಟವಾಗಲೂಬಹುದು. ಆದ್ದರಿಂದ, ಸರಿಯಾಗಿ ವಿನ್ಯಾಸಗೊಳಿಸಲಾದ ಬ್ಯಾಟರಿ, ಸಂಬಂಧ ಪಟ್ಟ ವಿದ್ಯುತ್ ಎಲೆಕ್ಟ್ರಾನಿಕ್ಸ್ ಹಾಗೂ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾದ ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿದ್ದರೆ ಒಳ್ಳೆಯದು. ಮಾರುಕಟ್ಟೆಯಲ್ಲಿರುವ ಸಾಂಪ್ರಾದಾಯಿಕ ಮಾದರಿಯ ದ್ವಿಚಕ್ರ ವಾಹನಗಳಿಗಾಗಿ ವಿವಿಧ ರೀತಿಯ ರೆಟ್ರೊಫಿಟ್ ಎಲೆಕ್ಟ್ರಿಕ್ ವಾಹನದ ಕಿಟ್‌ಗಳು ಮುಂಬರುವ ತಿಂಗಳುಗಳಲ್ಲಿ ಆಫ್ ದಿ ಶೆಲ್ಫ್‌ನಲ್ಲಿ ಲಭ್ಯವಾಗುವ ನಿರೀಕ್ಷೆಗಳಿವೆ. ಸರ್ಕಾರವು ಮಧ್ಯ ಪ್ರವೇಶಿಸಿ ಪವರ್‌ಟ್ರೇನ್‍‍ಗಳನ್ನು ಸ್ಟಾಪ್ ಮಾಡಲು ಅನುಮೋದಿತ ಮಾರಾಟಗಾರರು ಹಾಗೂ ಫಿಟ್ಟರ್‌ಗಳಿಗೆ ಮಾತ್ರ ಅನುಮತಿ ನೀಡಿ, ಈ ಸೆಗ್‍‍ಮೆಂಟನ್ನು ನಿಯಂತ್ರಿಸಬಹುದು. ಇನ್ನು ಇಂಧನ ಆಧರಿತ ವಾಹನಗಳನ್ನು ತಗ್ಗಿಸಲು ಕೇಂದ್ರ ಸರ್ಕಾರವು ಹಲವು ಪ್ರಯತ್ನಗಳನ್ನು ನಡೆಸುತ್ತಿದ್ದು, ಹೈದ್ರಾಬಾದ್ ಮೂಲದ ಎಂಜಿನಿಯರ್ ಒಬ್ಬರು ಪ್ರಕೃತಿಗೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ಮಾಡಿ ಪೆಟ್ರೋಲ್ ತಯಾರಿಸಲು ಮಹತ್ವದ ಯೋಜನೆಯೊಂದಕ್ಕೆ ಚಾಲನೆ ನೀಡಿ ಯಶಸ್ವಿಯಾಗಿದ್ದಾರೆ.

ಹೌದು, ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ದಿನಗಳಲ್ಲಿ ಅಗ್ಗದ ಬೆಲೆಯಲ್ಲಿ ಪೆಟ್ರೋಲ್ ಉತ್ಪಾದನೆ ಮಾಡಬಲ್ಲ ಹೊಸ ತಂತ್ರಜ್ಞಾನವನ್ನು ಸಿದ್ದಪಡಿಸಿದ್ದು, ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಪ್ಲಾಸ್ಟಿಕ್ ಅನ್ನೇ ಬಳಕೆ ಮಾಡಿಕೊಂಡು ಈ ಹೊಸ ಆವಿಷ್ಕಾರವನ್ನು ಮಾಡಲಾಗಿದೆ. ಹೈದ್ರಾಬಾದ್ ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಪ್ರೋ. ಸತೀಶ್ ಎನ್ನುವರೇ ಇದರ ರೂವಾರಿಯಾಗಿದ್ದು, ನಗರದಲ್ಲಿ ದಿನಂಪ್ರತಿ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ಪೆಟ್ರೋಲ್ ಸಿದ್ದಪಡಿಸುತ್ತಿದ್ದಾರೆ. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಸಮಸ್ಯೆಯನ್ನು ತಗ್ಗಿಸುವುದು ಹೇಗೆ ಪ್ರಶ್ನೆ ಮುಂದಿಟ್ಟು ಹೊಸ ಪ್ರಯತ್ನ ನಡೆಸುತ್ತಿದ್ದಾಗಲೇ ಪೆಟ್ರೋಲ್ ಉತ್ಪಾದನೆ ಸಾಧ್ಯತೆ ಕುರಿತು ಎಂಜಿನಿಯರ್ ಸತೀಸ್ ಅವರು ಹೊಸ ಪ್ರಯೋಗ ಮಾಡಿ ಇಂತದೊಂದು ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಮರುಬಳಕೆ ಮಾಡಬಹುದಾದ ಪ್ಲಾಸ್ಟಿಕ್ ತಾಜ್ಯವನ್ನು ಪ್ರಮುಖ ಮೂರು ಹಂತಗಳಲ್ಲಿ ರಸಾಯನಿಕ ಪ್ರಕ್ರಿಯೆಗಳ ಮೂಲಕ ಸಂಸ್ಕರಿಸಿ ಮಾಡಿದ ನಂತರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನವನ್ನು ಸಿದ್ದಪಡಿಸಲಾಗಿದ್ದು, ಪರಿಸರಕ್ಕೆ ಮಾರಕವಾಗದಂತೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಈ ಹೊಸ ಪೆಟ್ರೋಲ್ ಮಾದರಿಯನ್ನು ಸಿದ್ದಗೊಳಿಸಲಾಗಿದೆ. 2016ರಿಂದಲೇ ಎಂಜಿನಿಯರ್ ಸತೀಶ್ ಅವರು ಈ ಪ್ರಯೋಗ ಮಾಡುತ್ತಿದ್ದು, ಪ್ರತಿ ದಿನ ಕನಿಷ್ಠ 200 ಕೆಜಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಿಸಿ ಕನಿಷ್ಠ 200 ಲೀಟರ್ ಪೆಟ್ರೋಲ್ ಉತ್ಪಾದನೆ ಮಾಡುತ್ತಿದ್ದಾರೆ. ಕಳೆದ ಮೂರುವರೇ ವರ್ಷಗಳಲ್ಲಿ ಬರೋಬ್ಬರಿ 50 ಟನ್ ಪ್ಲಾಸ್ಟಿಕ್ ಅನ್ನು ಪೆಟ್ರೋಲ್ ಆಗಿ ಪರಿವರ್ತನೆ ಮಾಡಿರುವ ಪ್ರೋ. ಸತೀಸ್ ಅವರು, ಅತಿ ಕಡಿಮೆ ಬೆಲೆಯಲ್ಲಿ ಸ್ಥಳೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದಾರೆ. ಸದ್ಯ ಪ್ರೋ. ಸತೀಶ್ ಅವರು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್‌ಗೆ ರೂ.40ರಿಂದ ರೂ.50ಕ್ಕೆ ಮಾರಾಟ ಮಾಡುತ್ತಿದ್ದು, ಸ್ಥಳೀಯ ಕೈಗಾರಿಕಾ ಕೇಂದ್ರಗಳೇ ಇದರ ಪ್ರಮುಖ ಗ್ರಾಹಕರಾಗಿದ್ದಾರೆ.

ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಲ್ಲಿ ಬಳಕೆ ಕುರಿತಂತೆ ಹಲವು ಪ್ರಯತ್ನಗಳು ನಡೆದಿದ್ದರೂ ಇದುವರೆಗೂ ಅಧಿಕೃತವಾದ ಟೆಸ್ಟಿಂಗ್ ನಡೆಸಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಈ ಕುರಿತು ಅಧಿಕೃತ ಟೆಸ್ಟಿಂಗ್ ನಡೆಸಿದ ನಂತರವಷ್ಟೇ ಇದು ವಾಹನಗಳಲ್ಲಿ ಬಳಕೆಗೆ ಯೋಗ್ಯವೇ ಎಂಬುದು ತಿಳಿದು ಬರಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!