ಅಂತರಾಷ್ಟ್ರೀಯ ಕಂಪೆನಿಗಳ ಜೊತೆ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಭಾರತೀಯ ಮೂಲದ ಕಂಪೆನಿಗಳು ಕೂಡ ಪೈಪೋಟಿಗೆ ಇಳಿದಿದ್ದು, ಮೇಕ್ ಇನ್ ಇಂಡಿಯಾ ಯೋಜನೆಯಡಿ ಅನೇಕ ಹೊಸ ವಾಹನ ತಯಾರಿಕಾ ಕಂಪೆನಿಗಳು ತಲೆ ಎತ್ತಿವೆ. ಅದೇ ರೀತಿ ಪೆಟ್ರೋಲ್ ಬೆಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಕಾರಣದಿಂದಲೇ ಕಂಪನಿಗಳು ಸದ್ಯ ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದ ಕಡೆಗೆ ಹೆಚ್ಚು ಗಮನ ನೀಡುತ್ತಿವೆ. ಇದಕ್ಕನುಸುರಿಸಿ ನೆಕ್ಸಜೂ ಮೊಬಿಲಿಟಿಯ Rompus+ ಮತ್ತು Roadlark ಈ ಎರಡು ಇ-ಸೈಕಲ್ ಗಳನ್ನು ತಯಾರಿಸಿದೆ. ಕೇವಲ 50 ರೂಪಾಯಿಯಲ್ಲಿ 1000 ಕಿಮೀ ಚಲಿಸುತ್ತದೆ ಈ ಇ-ಸೈಕಲ್ ಹಾಗೆಯೇ ಇದು ಫೋನ್ ನಂತೆ ಚಾರ್ಜ್ ಆಗುತ್ತದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಗ್ರಾಹಕರ ಡಿಮಾಂಡ್ ಮತ್ತು ಅವಶ್ಯಕತೆಯನ್ನು ಗಮನದಲ್ಲಿರಿಸಿ ಈ ಸೈಕಲ್ ಗಳನ್ನು ತಯಾರಿಸಲಾಗಿದೆ. ಅತುಲ್ಯ ಮಿತ್ತಲ್ ಇವರು 2015 ರಲ್ಲಿ ಪ್ರಾರಂಭಿಸಿದ ಅವಾನ್ ಮೋಟರ್ ಪುಣೆಯಲ್ಲಿ ನೆಕ್ಸಜೂ ಮೊಬಿಲಿಟಿ ಹೆಸರಿನಲ್ಲಿ ಸ್ಟಾರ್ಟ ಅಪ್ ಪ್ರಾರಂಭಿಸಿದೆ. ಈ ಸೈಕಲಿನ ನಿರ್ಮಿತಿಯ ಕಥೆ ತುಂಬಾ ವಿಶೇಷವಾಗಿದೆ. ಅತುಲ್ಯ ಇವರು ಹಾವರ್ಡ್ ಬ್ಯುಸ್ನೆಸ್ ಸ್ಕೂಲ್ ನ ವಿದ್ಯಾರ್ಥಿಯಾಗಿದ್ದಾರೆ. ಇದರ ಹೊರತಾಗಿ ಅವರು ಪಾಪಾ ಜಾನ್ ಇಂಡಿಯಾದಲ್ಲಿ ಹೂಡಿಕೆದಾರರು ಕೂಡಾ ಆಗಿದ್ದಾರೆ. ಇದು ಭಾರತದ ಎಲ್ಲಕ್ಕೂ ದೊಡ್ಡ ಪಿಜ್ಜಾ ಡೆಲಿವರಿಯ ಚೈನ್ ಆಗಿದೆ. ಇವರಿಗೆ ಪಿಜ್ಜಾ ಡೆಲಿವರಿ ಸಲುವಾಗಿ ಅಗ್ಗದ ಹಾಗೂ ಭರ್ಜರಿ ಎಲೆಕ್ಟ್ರಿಕ್ ಸ್ಕೂಟರ್ ಬೇಕಾಗಿತ್ತು.
ತಮ್ಮ ವ್ಯವಸಾಯದಲ್ಲಿ ಈ ರೀತಿಯ ಸಮಸ್ಯೆ ಎದುರಾದಾಗ ಅತುಲ್ಯ ಮಿತ್ತಲ್ ಅವರು ಸ್ವಂತ ತಾವೇ ಎಲೆಕ್ಟ್ರಿಕ್ ಸೈಕಲ್ ತಯಾರಿಸಲು ನಿಶ್ಚಯಿಸಿದರು. ಇ-ಸೈಕಲ್ ಖರೀದಿ ಮಾಡು ಅಷ್ಟೊಂದು ಸುಲಭ ಏನೂ ಅಲ್ಲ. ಆರ್ಥಿಕವಾಗಿ ವಿಚಾರ ಮಾಡಿದರೆ ಒಂದು ಕಿಲೋಮೀಟರ್ ಗೆ 0.2 ರೂಪಾಯಿಗಳ ವೆಚ್ಚ ತಗಲುತ್ತದೆ. ಆದರೆ ಅದನ್ನೇ ಒಂದು ವೇಳೆ ಪೆಟ್ರೋಲ್ ಅಥವಾ ಡೀಸೆಲ್ ಗೆ ಹೋಲಿಸಿದರೆ ಪ್ರತಿ ಕಿಲೋಮೀಟರ್ ಗೆ ಎರಡು ರೂಪಾಯಿಗಿಂತಲೂ ಹೆಚ್ಚು ಹಣ ಖರ್ಚಾಗುತ್ತದೆ. ಕಂಪನಿಯ ಪ್ರಕಾರ ಇ-ಸೈಕಲ್ ಇದು ಬರೀ 10 ರೂಪಾಯಿನ ಚಾರ್ಜ್ ಮಾಡಿಕೊಂಡರೆ 150 ಕಿಲೋಮೀಟರ್ ವರೆಗೆ ನಾವು ಇದನ್ನು ಓಡಿಸಬಹುದು.
ಅದೇ ರೀತಿ ನಾವು ಇದನ್ನು ಚಾರ್ಜ್ ಮಾಡಲು ಒಂದು ವೇಳೆ 50 ರೂಪಾಯಿಗಳವರೆಗೆ ಖರ್ಚು ಮಾಡಿದರೆ ಸುಮಾರು ಒಂದು ಸಾವಿರ ಕಿಲೋಮೀಟರ್ ಗಳವರೆಗೆ ಓಡುತ್ತದೆ. ಇನ್ನು ಇವುಗಳ ಬೆಲೆಯ ಬಗ್ಗೆ ಹೇಳಬೇಕಾದರೆ Rompus+ ಇದು 31980 ಮತ್ತು Roadlark ಇ-ಸೈಕಲ್ಲಿನ ಬೆಲೆ 42317 ರೂಪಾಯಿಗಳು. ಈ ಸೈಕಲಿನ ನಿರ್ಮಾಣ ಮತ್ತು ಡಿಸೈನ್ ಸಂಪೂರ್ಣವಾಗಿ ಭಾರತದಲ್ಲಿಯೇ ಮಾಡಲಾಗಿದ್ದು ಸದ್ಯಕ್ಕೆ ಇವು ನಾಲ್ಕು ಬಣ್ಣಗಳಲ್ಲಿ ಉಪಲಬ್ಧವಿದೆ. ಸೈಕಲಿನ ಡಿಸೈನ್ ತುಂಬಾ ಆಕರ್ಷಕವಾಗಿದೆ. ಈ ಸೈಕಲ್ ಖರೀದಿ ಮಾಡುವ ಸಲುವಾಗಿ ನೆಕ್ಸಜೂ ಡೀಲರ್ ಕಡೆಗೆ ಅಥವಾ ಕಂಪನಿಯ ವೆಬ್ಸೈಟ್ ಮುಖಾಂತರ ಆನ್ಲೈನ್ ಖರೀದಿಸಬಹುದಾಗಿದೆ.