ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಹತ್ತಾರು ಗಿಡ ಮರಗಳನ್ನು ಪ್ರತಿನಿತ್ಯ ಕಾಣುತ್ತೇವೆ, ಆದ್ರೆ ಅವುಗಳಲ್ಲಿ ಇರುವಂತ ಔಷಧಿ ಗುಣಗಳು ಯಾವುವು ಅದು ಯಾವೆಲ್ಲ ಸಮಸ್ಯೆಗಳಿಗೆ ಪರಿಹಾರ ನೀಡುವಂತ ಕೆಲಸವನ್ನು ಮಾಡುತ್ತದೆ ಅನ್ನೋದನ್ನ ತಿಳಿದಿರುವುದಿಲ್ಲ. ಅವುಗಳನ್ನು ತಿಳಿಯುವ ಪ್ರಯತ್ನ ಮಾಡಿಕೊಳ್ಳಬೇಕು. ಈ ಮೂಲಕ ಎಕ್ಕೆದ ಎಲೆ ಹಾಗೂ ಅವುಗಳ ಜೊತೆಗೆ ಒಂದಿಷ್ಟು ದೈಹಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮನೆಮದ್ದುಗಳನ್ನು ತಿಳಿಯೋಣ ಮುಂದೆ ನೋಡಿ.
ಹಣ್ಣಾದ ಎಕ್ಕದ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ, ಅದರಿಂದ ರಸವನ್ನು ಹಿಂಡಿ ತಗೆದು ಕೆಲವು ಹನಿಗಳಷ್ಟು ಕಿವಿಯೊಳಕ್ಕೆ ಹಾಕಿಕೊಂಡರೆ ಕಿವಿನೋವು ಮತ್ತು ಶ್ರವಣ ಮಾಂದ್ಯತೆ ನೀಗುತ್ತದೆ. ಇನ್ನು ಎಕ್ಕದ ಎಲೆಯನ್ನು ಕಾಲಿನಲ್ಲಿ ಮುಳ್ಳು ಚುಚ್ಚಿದಾಗ ಮುಳ್ಳು ಹೊರಗೆ ಬರದೇ ಇರುವಂತ ಸಂದರ್ಭದಲ್ಲಿ ಇಲ್ಲದ ಎಳೆಯ ಹಾಲನ್ನು ಮುಳ್ಳು ಚುಚ್ಚಿದ ಜಾಗಕ್ಕೆ ಹಾಕುತ್ತಾರೆ ಇದರಿಂದ ನೆಟ್ಟಿರುವಂತ ಮುಳ್ಳು ಹೊರ ಬರುತ್ತದೆ.
ನೆಲ್ಲಿಕಾಯಿಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಪ್ರತಿ ದಿನವೋ ರಾತ್ರಿ ಮಲಗುವ ಮುನ್ನ ಸೇವಿಸುತ್ತಾ ಬಂದರೆ ದೃಷ್ಟಿ ಸಾಮರ್ಥ್ಯ ಹೆಚ್ಚಾಗುತ್ತದೆ. ಇನ್ನು ಕೆಲವರಲ್ಲಿ ಹಸಿವು ಆಗದೆ ಇರುವಂತ ಸಮಸ್ಯೆ ಇರುತ್ತದೆ ಅಂತವರು ಆಗಾಗ್ಗೆ ದ್ರಾಕ್ಷಿ ಹಣ್ಣನ್ನು ತಿನ್ನುತ್ತಿದ್ರೆ ಹಸಿವು ಉಂಟಾಗುತ್ತದೆ, ಅಲ್ಲದೆ ಹೊಟ್ಟೆಯಲ್ಲಿ ಯಾವುದೇ ರೀತಿಯ ತೊಂದರೆ ಇದ್ದರು ಅದು ನಿವಾರಣೆಯಾಗುತ್ತದೆ.
ಆರೋಗ್ಯದ ದೃಷ್ಟಿಯಿಂದ ದಿನಕ್ಕೆ ಒಂದು ಲೋಟದಷ್ಟು ಮಜ್ಜಿಗೆಯನ್ನು ಕುಡಿಯಬೇಕು. ಇದರಿಂದ ರಕ್ತದೊತ್ತಡವು ಬರುವುದಿಲ್ಲ, ಯಕೃತ್ತಿನ ತೊಂದರೆಗಳು ಸಹ ಇರೋದಿಲ್ಲ. ಇನ್ನು ಹೆಚ್ಚಾಗಿ ಬಿಕ್ಕಳಿ ಬರುವುದನ್ನು ತಡೆಗಟ್ಟಲು ಅರಳಿ ಮರದ ತೊಗಟೆಯನ್ನು ಸುಟ್ಟು ಅದನ್ನು ನೀರಿನಲ್ಲಿ ನೆನಸಿ ಆ ನೀರನ್ನು ಕುಡಿದರೆ ಬಿಕ್ಕಳಿಕೆ ನಿಲ್ಲುತ್ತದೆ.