ನಾವುಗಳು ಪ್ರತಿದಿನ ಉತ್ತಮ ಮಡಿದ ನಂತರ ಒಂದಿಷ್ಟು ಅಭ್ಯಾಸಗಳನ್ನು ಮಾಡಿಕೊಂಡಿರುತ್ತೀವಿ ಆದ್ರೆ ಅನಂತಹ ಅಭ್ಯಾಸಗಳಿಂದ ಏನಾಗುತ್ತೆ ಅನ್ನೋದನ್ನ ತಿಳಿಯೋಣ. ನಾವು ಊಟ ಮಾಡಿದ ತಕ್ಷಣ ಹಣ್ಣುಗಳನ್ನ ತಿನ್ನಬಾರದು ಇದರಿಂದ ನಾವು ತಿಂದ ಆಹಾರ ಬೇಗ ಜೀರ್ಣವಾಗುವುದಿಲ್ಲ. ಇದರಿಂದ ಅಜೀರ್ಣತೆ ಉಂಟಾಗುತ್ತದೆ, ಮಲಬದ್ಧತೆ ಉಂಟಾಗುತ್ತದೆ. ನಿಮಗೆ ಪ್ರತಿದಿನ ಹಣ್ಣುಗಳನ್ನ ತಿನ್ನುವ ಅಭ್ಯಾಸ ವಿದ್ದರೆ ಊಟಕ್ಕಿಂತ ಒಂದು ಗಂಟೆ ಮುನ್ನ ಅಥವಾ ಊಟವಾದ ಒಂದು ಗಂಟೆಯ ನಂತರ ಸೇವಿಸುವುದು ಉತ್ತಮ.
ಊಟದ ಬಳಿಕ ಟೀ ಕುಡಿಯಬಾರದು ಈ ತಪ್ಪನ್ನ ನಮ್ಮಲ್ಲಿ ಹಲವರು ಮಾಡುತ್ತಾರೆ, ಆದರೆ ನಾವು ಅನ್ನವನ್ನು ಸೇವಿಸಿದ ಬಳಿಕ ಟೀ ಕುಡಿಯುವುದರಿಂದ ಜೀರ್ಣಕ್ರಿಯೆಯು ನಿಧಾನಗತಿಯಲ್ಲಿ ಆಗುತ್ತದೆ. ನಾವು ಊಟಮಾಡಿದ ತಕ್ಷಣ ವಾಕ್ ಮಾಡಬಾರದು. ಆಹಾರವನ್ನ ಸೇವಿಸಿದ ತಕ್ಷಣವೇ ನಡೆದಾಡಿದರೆ ಅಧಿಕ ಪ್ರಮಾಣದ ಆಸಿಡ್ಸ್ ಬಿಡುಗಡೆಯಾಗುತ್ತದೆ, ಇದರಂದ ಹೊಟ್ಟೆಉರಿ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಊಟವಾದ ಇಪತ್ತು ನಿಮಿಷಗಳ ಬಳಿಕ ವಾಕ್ ಮಾಡುವುದು ಉತ್ತಮ.
ಆಹಾರವನ್ನು ಸೇವಿಸಿದ ಮೇಲೆ ಸ್ನಾನ ಮಾಡಬಾರದು ಇದರಿಂದ ನಮ್ಮ ದೇಹದಲ್ಲಿನ ರಕ್ತ ಪರಿಚಲನೆ ದೇಹದ ಎಲ್ಲ ಭಾಗಗಲ್ಲಿ ಸರಿಯಾಗಿ ಆಗುತ್ತದೆ ಇದರಿಂದ ಹೊಟ್ಟೆಯ ಭಾಗದಲ್ಲಿ ರಕ್ತದ ಹರಿವು ಕಡಿಮೆಯಾಗಿ ಜೀರ್ಣಕ್ರಿಯೆಯ ಸಾಮರ್ಥ್ಯ ಕಡಿಮೆಯಾಗಿ, ಜೀರ್ಣಕ್ರಿಯೆ ನಿಧಾನವಾಗುತ್ತದೆ. ಅಷ್ಟೇ ಅಲ್ದೆ ನಾವು ಹೆಚ್ಚಾಗಿ ಊಟ ಮಾಡಿದ ತಕ್ಷಣ ಮಲಗುತ್ತೇವೆ, ಹೀಗೆ ಮಾಡುವುದರಿಂದ ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಅಸಿಡಿಟಿ ಆಗುವ ಸಾಧ್ಯತೆ ಹೆಚ್ಚು. ಊಟದ ನಂತರ ನಿದ್ರೆ ಬಂದರೆ ಕೆಲವು ನಿಮಿಷಗಳ ಕಾಲ ಮಲಗಿ ಏಳಬೇಕು, ಹೆಚ್ಚು ಸಮಯ ಮಲಗುವುದು ಒಳ್ಳೆಯದಲ್ಲ.
ಊಟ ಮಾಡಿದ ನಂತರ ನಾವು ವ್ಯಾಯಾಮ ಜಿಮ್ ಮಾಡಬಾರದು ಆಟವಾಡಬಾರದು, ಈಜಾಡಬಾರದು ಹೀಗೆ ಮಾಡುವುದರಿಂದ ನಮ್ಮ ದೇಹದಲ್ಲಿ ರಕ್ತ ಪ್ರಸರಣದ ವೇಗ ಹೆಚ್ಚಾಗಿ ನಮ್ಮ ಶರೀರದ ಮಾಂಸ ಖಂಡಗಳು ಸ್ಥಗಿತ ಗೊಳ್ಳುತ್ತವೆ ಎಂದು ಆಯುರ್ವೇದ ಹೇಳುತ್ತದೆ. ಊಟವಾದ ಬಳಿಕ ಧೂಮಪಾನ ಮಾಡುವದು ಒಳ್ಳೆಯದಲ್ಲ, ಊಟದ ಬಳಿಕ ಧೂಮಪಾನ ಮಾಡುವುದರಿಂದ ನಾವು ಒಂದರ ಬದಲಿಗೆ ಹತ್ತು ಪಟ್ಟು ಹೆಚ್ಚು ಧೂಮಪಾನ ಮಾಡಿರುವುದರ ಪರಿಣಾಮ ನಮ್ಮ ಪಿತ್ತಕೋಶದಮೇಲೆ ಬೀರುತ್ತದೆ, ಇದರಿಂದ ಶ್ವಾಸಕೋಶದ ಮೇಲಿನ ಬಾರಾ ಅಧಿಕವಾಗುತ್ತದೆ.